Get Updates
Get notified of breaking news, exclusive insights, and must-see stories!

Bengaluru cake show 2023: ಕ್ರಿಸ್ಮಸ್ 'ಕೇಕ್ ಶೋ'ಗೆ ಇಂದು ಚಾಲನೆ, ನ್ಯೂ ಪಾರ್ಲಿಮೆಂಟ್ ಶೋ ಆಕರ್ಷಣೆ, ವಿವರ, ವೇಳಾಪಟ್ಟಿ

ಬೆಂಗಳೂರು, ಡಿಸೆಂಬರ್ 14: ವರ್ಷದ ಕೊನೆಗೆ ಬರುವ ಕ್ರಿಸ್‌ಮಸ್ ಪ್ರಯುಕ್ತ ಬೆಂಗಳೂರಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಹ 49ನೇ ವಾರ್ಷಿಕ ಕೇಕ್ ಪ್ರದರ್ಶನ (Bengaluru 49th annual cake show 2023) ನಡೆಯಲಿದೆ. ಇಂದು ಗುರುವಾರ (ಡಿಸೆಂಬರ್ 14) ದಂದು ಉದ್ಘಾಟನೆಗೊಳ್ಳಲಿದೆ.

ಹೊಸದಾಗಿ ದೆಹಲಿಯಲ್ಲಿ ಉದ್ಘಾಟನೆಗೊಂಡ ನೂತನ ಸಂಸತ್ ಭವನ (New Parliament Cake) ಈ ಬಾರಿಯ ಕೇಕ್ ಪ್ರದರ್ಶನದಲ್ಲಿ ಎಲ್ಲರನ್ನು ಆಕರ್ಷಿಸಲಿದೆ. ಇದು ಎಷ್ಟು ಕೆ.ಜಿ. ಕೇಕ್‌ನಲ್ಲಿ ಅರಳಿದೆ, ಇದರ ಅಗಲ, ಎತ್ತರ, ವಿಶೇಷತೆ ಹಾಗೂ ಕೇಕ್ ಶೋ ವೇಳಾಪಟ್ಟಿ ಮಾಹಿತಿ ಇಲ್ಲಿದೆ.

Bengaluru Cake Show 2023: Today Christmas Cake Show Inauguration, Know New Parliament cake

ಹಳೆ ವರ್ಷ ಅಂತ್ಯಕ್ಕೆ ಕೇಕ್ ಶೋ ಎಲ್ಲರನ್ನು ಹೊಸ ವರ್ಷಕ್ಕೆ 2024ಕ್ಕೆ ಸ್ವಾಗತಿಸುತ್ತದೆ. ಪ್ರತಿ ವರ್ಷದಂತೆ ಈ ವರ್ಷವು ಸಹ ಇನ್ಸ್‌ಟಿಟ್ಯೂಟ್ ಆಫ್ ಬೇಕಿಂಗ್ ಮತ್ತು ಕೇಕ್ ಆರ್ಟ್ (IBCA) ಮತ್ತು ಮೈ ಬೇಕರ್ಸ್ ಮಾರ್ಟ್ ಸಹಯೋಗದಲ್ಲಿ 49ನೇ ಕೇಕ್ ಶೋಗೆ ಚಾಲನೆ ಸಿಗಲಿದೆ.

ಈ ವರ್ಷವು ಕೇಕ್ ಶೋನಲ್ಲಿ ಹೊಸ ಪಾರ್ಲಿಮೆಂಟ್ ಸೇರಿದಂತೆ ಅನೇಕ ಕಲಾಕೃತಿಗಳು ಅರಳಿವೆ. ಅನೇಕ ಬೇಕರಿ ಕಲಾವಿದರ ತಿಂಗಳು ಗಟ್ಟಲೆ ಶ್ರಮ ಇದರಲ್ಲಿದೆ. ಇದು ನಾಳೆ ಡಿಸೆಂಬರ್ 15ರಿಂದ ಹೊಸ ವರ್ಷ 01 ಜನವರಿ 2024ರವರೆಗೆ ನಡೆಯಲಿದೆ. ಮಕ್ಕಳು ಸೇರಿದಂತೆ ವಯಸ್ಕರಿಗೆ ನಿಗದಿತ ಟಿಕೆಟ್ ಸಹಿತ ಪ್ರವೇಶ ಇರಲಿದೆ.

Bengaluru Cake Show 2023: Today Christmas Cake Show Inauguration, Know New Parliament cake

ನ್ಯೂ ಪಾರ್ಲಿಮೆಂಟ್ ಈ ಬಾರಿ ಆಕರ್ಷಣೆ

ಈ ವರ್ಷ ಉದ್ಘಾಟನೆಗೊಂಡ ಪಾರ್ಲಿಮೆಂಟ್ ದೇಶದ ಹೆಮ್ಮೆಯಾಗಿದ್ದು, ಅದನ್ನು ಐದು ಮಂದಿ ಕಲಾವಿದರು ಸುಮಾರು 2.5 ತಿಂಗಳಲ್ಲಿ ಕೇಕಿನಲ್ಲಿ ಚಿತ್ರಿಸಿದ್ದಾರೆ. ಒಟ್ಟು 14 ಅಡಿ ಅಗಲ, 14 ಅಡಿ ಉದ್ದ ಮತ್ತು 09 ಅಡಿ ಎತ್ತರದಲ್ಲಿ ಸಂತನು, ಮಹೇಶ್, ಅರುಣ್, ಮೋಹಿತ್ ಮತ್ತು ಪ್ರಮೋದ್ ಇವರು 1120 ಕೇಕ್ ಬಳಸಿ ತಯಾರಿಸಿದ್ದಾರೆ.

ಇದು ಈ ಬಾರಿಯ ಕೇಕ್ ಶೋನಲ್ಲಿಯೇ ಹೈಲೆಟ್ ಆಗಿರಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದರೊಂದಿಗೆ ಯಾವ ಯಾವ ಕಲಾಕೃತಿಗಳು ಕೇಕಿನಲ್ಲಿ ಅರಳಿವೆ ಎಂಬ ಪಟ್ಟಿ ಇಲ್ಲಿವೆ.

21 ಕೇಕ್ ಕಲಾಕೃತಿಗಳ ಪಟ್ಟಿ

* ಕುದುರೆ ಮೇಲೆ ಕುಳಿತ ಶಿವಾಜಿ ಮಹಾರಾಜ ಕೇಕ್ ಕಲಾಕೃತಿ

* ದಿ ನೆಕೆಡ್ ರೆಡ್ ವೆಲ್ವೆಟ್ ಕೇಕ್

* ಕಾಸ್ಮಿಕ್ ಮಿಠಾಯಿ: ಸಕ್ಕರೆ ಶಿಲ್ಪಕಲೆಯಲ್ಲಿ ಚಂದ್ರಯಾನ-3

* ಸದಾ ಬದಲಾಗುತ್ತಿರುವ ಲಾಡ್ ಕೇಕ್ ಸಂಭ್ರಮ

* ರೀಗಲ್ ಸಮಯ ಕಾವಲುಗಾರರ ಜೋಡಿ: ಬೆಂಜಮಿನ್-ಸಾವರಿನ್

* ಎಂಚಾಂಟಿಂಗ್ ಫ್ರಾಸ್ಟ್: ಫ್ರೋಜಲ್ ಕ್ಯಾಸಲ್ ಫ್ಯಾಂಟಸಿ ಕೇಕ್

* ಮೆರ್ರಿ ಮ್ಯಾಜಿಕ್ ರೆತ್ ಡಿಲೈಟ್: ಸಾಂಟಾಸ್ ಜಾಯ್‌ಫುಲ್ ಪೀಕ್,

* ದೈವಿಕ ಭವ್ಯತೆ: ರಚನಾತ್ಮಕ ದುರ್ಗಾ ಸಿಂಹಾಸನ ಕೇಕ್

* ಗೇಟರ್ ಗ್ರೋವ್ ಡಿಲೈಟ್: ದಿ ಎಡಿಬಲ್ ಇಂಡಿಯನ್ ಅಲ್ಲಿಗೇಟರ್

* ಫೆಸ್ಟಿವ್ ಯೂನಿಯನ್ಸ್: ಕ್ರಿಸ್ಮಸ್ ವೆಡ್ಡಿಂಗ್ ಡೆಸರ್ಟ್ ಟೇಬಲ್

* ಸ್ವೀಟ್ ಬ್ರಿಕ್ಸ್ ಎಕ್ಟ್ರಾಗಂಝಾ: ಎ ಶುಗರಿ ಲೆಗೊ ಡಿಲೈಟ್ ಕೇಕ್

* ಟ್ರೋಫಿಕಾನಾ ಬ್ಲಿಸ್: ಎಕ್ಸೈಟ್ ಲೇಯರ್ಸ್ ಮತ್ತು ಫೆದರ್ಡ್ ಫ್ರೆಂಡ್ಸ್

*ಅಂಡರ್‌ವಾಟ್ ಕ್ಯಾಸಲ್ ಮತ್ತು ಮ್ಯಾರನ್ ಲೈಫ್

* ಶುಗರ್ ಸೆರೆನೆಡ್: ಡಂಬೋಸ್ ಮಿಮ್ಸಿಕಲ್ ಸರ್ಕಸ್ ಎಕ್ಟ್ರಾವಗಾಂಝಾ

* ಉಚಿತ ಬಸ್ ಯಾನ ಸಾಹಸದ ಬಿಂಬಿಸುವ ಕೇಕ್

* ಸಿಹಿ ಒಡಿಸ್ಸಿ: ಮಾರಿಯೋಸ್ ಶುಗರ್-ಅಡ್ವೆಂಚರ್ ಕೇಕ್

* ವೈಭವಯುತ ಆರೋಹಣ ಕೇಕ್

* ಡಾಗ್ಸ್ ಆನ್ ವೆಡ್ಡಿಂಗ್ ಕೇಕ್

* ಕಾಪ್ರ್ಸ್ ಬ್ರೈಡ್- ಸ್ಟೀಟ್ ಎಟರ್ನಲೆ ಎಂಬ್ರೇಸ್ ಕೇಕ್

* ಶಾಪಾಹೋಲಿಕ್ ಸಫಾರಿ- ವರ್ಣರಂಜಿತ ಶಾಪಿಂಗ್ ಕ್ಯಾಮೆಲ್ ಕೇಕ್

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+