ಬೆಂಗಳೂರಿನ ಈ ಕ್ಯಾಬ್ ಚಾಲಕನ ಸಂಸ್ಕೃತ ಪ್ರೀತಿ ನೋಡಿ

ಬೆಂಗಳೂರು, ಜೂನ್ 17: ನಗರದಲ್ಲಿ ಕನ್ನಡ ಮರೆಯಾಗುತ್ತಿರುವ ಸಮಯದಲ್ಲಿ ಸಂಸ್ಕೃತದಲ್ಲಿ ಒಬ್ಬರು ಮಾತನಾಡುತ್ತಿದ್ದಾರೆ ಎಂದರೆ ಬಾಯಿ ಮೇಲೆ ಬೆರಳಿಡುವುದಂತೂ ಗ್ಯಾರಂಟಿ.

ಕ್ಯಾಬ್ ಡ್ರೈವರ್ ಎಂದರೆ ಸಾಕು ಕನ್ನಡ ಬಿಟ್ಟು ಎಲ್ಲಾ ಭಾಷೆಯನ್ನು ಅಲ್ಪಸ್ವಲ್ಪ ಮಾತನಾಡುತ್ತಾ ಹೇಗೋ ಮ್ಯಾನೇಜ್ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ಈ ಡ್ರೈವರ್ ಸಂಸ್ಕೃತದಲ್ಲಿಯೇ ಮಾತನಾಡುತ್ತಾರೆ, ಸಂಸ್ಕೃತದಲ್ಲಿಯೇ ವ್ಯವಹಾರ ಮಾಡುತ್ತಾರೆ.

ನಗರದ ಕ್ಯಾಬ್ ಚಾಲಕ ಮಲ್ಲಪ್ಪ ವಿ ಪತ್ತಾರ್ ಅಚ್ಚ ಸಂಸ್ಕೃತ ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

Bengaluru Cab driver speaking sanskrit in fluent

45 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ಚಾಲಕ ಪ್ರಯಾಣಿಕರ ಜೊತೆ ಸಂಸ್ಕೃತದಲ್ಲಿ ಮಾತನಾಡಿದ್ದಾರೆ. ಈ ವಿಡಿಯೋವನ್ನು ಗಿರೀಶ್ ಭಾರದ್ವಾಜ್ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದರು.

ಮಲ್ಲಪ್ಪ ಅವರು 10 ವರ್ಷವಿದ್ದಾಗಿನಿಂದಲೂ ಅವರ ಅಜ್ಜಿ ಭಗವದ್ಗೀತೆಯನ್ನು ಓದುತ್ತಿರುವಾಗ ಅಲ್ಲಿಯೇ ಕುಳಿತು ಕೇಳಿಸಿಕೊಳ್ಳುತ್ತಿದ್ದರಂತೆ. ಅದು ಸಂಸ್ಕೃತವಾದರೂ ಕನ್ನಡ ಅಕ್ಷರದಲ್ಲಿ ಇರುತ್ತಿತ್ತು. ತಮಗೆ ಭಾಷೆ ಅರ್ಥವಾಗುತ್ತಿರಲಿಲ್ಲ. ಆದರೆ ಕಲಿಯುವ ಆಸೆ ಇತ್ತು ಎಂದು ಹೇಳುತ್ತಾರೆ.

ಮೂಲತಃ ಬೆಳಗಾವಿಯವರಾದ ಮಲ್ಲಪ್ಪ ತಮಗೆ 12 ವರ್ಷವಿದ್ದಾಗ ಬೆಂಗಳೂರಿಗೆ ಬಂದು ಬ್ರಹ್ಮವಿದ್ಯಾ ಆಶ್ರಮ ಸೇರಿದ್ದರು. 16 ವರ್ಷವಿದ್ದಾಗ ಸಂಸ್ಕೃತವನ್ನು ಮಾತನಾಡಲು ಕಲಿತರು. ಸಂಸ್ಕೃತದಲ್ಲೇ ವಿದ್ವತ್ ಹಾಗೂ ಎಂಎಯನ್ನು ಪೂರ್ಣಗೊಳಿಸಿದ್ದಾರೆ.

ನಂತರ ಶಾಲೆಯಲ್ಲಿ ಸಂಸ್ಕೃತ ಪಾಠ ಮಾಡಲು ಆರಂಭಿಸಿದರು. ಬೇಸಿಗೆ ರಜೆಯಲ್ಲೂ ಹತ್ತು ದಿನಗಳ ಕಾಲ ಸಂಸ್ಕೃತ ತರಗತಿಯನ್ನು ತೆಗೆದುಕೊಳ್ಳುತ್ತಾರೆ. ಅವರ ಮಕ್ಕಳು ಹಾಗೂ ಪತ್ನಿ ಕೂಡ ಸಂಸ್ಕೃತವನ್ನು ಅರ್ಥಮಾಡಿಕೊಳ್ಳುತ್ತಾರೆ, ಸಂಸ್ಕೃತದಲ್ಲೇ ಮಾತನಾಡುತ್ತಾರೆ ಎನ್ನುವ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+