Namma BMTC App: ಬಸ್ ಟ್ರ್ಯಾಕಿಂಗ್ ಸೇವೆಯ 'ನಮ್ಮ ಬಿಎಂಟಿಸಿ' ಆಪ್ ಬಿಡುಗಡೆ: ವಿಶೇಷತೆ ಏನು?
ಬೆಂಗಳೂರು, ಏಪ್ರಿಲ್ 21: ಬಹುನಿರೀಕ್ಷಿತ ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ ಟ್ರ್ಯಾಕಿಂಗ್ ಮೊಬೈಲ್ ಅಪ್ಲಿಕೇಷನ್ 'ನಿಮ್ ಬಸ್' ಇದೀಗ 'ನಮ್ಮ ಬಿಎಂಟಿಸಿ' ಹೆಸರಿನಲ್ಲಿ ಕೊನೆಗೆ ಲೋಕಾರ್ಪಣೆಗೊಂಡಿದೆ. ಇದು ಬೆಂಗಳೂರಿನ ನಾಗರಿಕರಿಗೆ ಬಿಎಂಟಿಸಿ ಬಸ್ ಎಲ್ಲಿದೆ ಎಂಬ ಖಚಿತ ಮಾಹಿತಿ ನೀಡಲಿದೆ.
ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಯಲ್ಲಿ ಲಭ್ಯವಿರುವ ಈ ನಮ್ಮ 'ಬಿಎಂಟಿಸಿ' ಮೊಬೈಲ್ ಆಪ್ ಬುಧವಾರ ರಾತ್ರಿ ಲೈವ್ ಪರೀಕ್ಷೆ ಲೈವ್ ಮಾಡಲಾಯಿತು. ಈ ಆಪ್ ಅನ್ನು ಆಂಡ್ರಾಯ್ಡ್ ಇಲ್ಲವೇ ಐಒಎಸ್ ಇರುವ ಮೊಬೈಲ್‌ಗಳಲ್ಲಿ ಸಹ ಡೌನ್‌ಲೋಡ್ ಮಾಡಿಕೊಂಡು ಪ್ರಯಾಣಿಕರು ಬಳಸಬಹುದಾಗಿದೆ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು.

ಎರಡು ಭಾಷೆಗಳಲ್ಲಿ ಇರುವ ಈ ಆಪ್ ನಲ್ಲಿ ಭಾಷೆಯನ್ನು ಬದಲಾವಣೆ ಮಾಡಲು ಸರಳ ಆಯ್ಕೆ ನೀಡಲಾಗಿದೆ. ಆಪ್ ನಲ್ಲಿ ಲಾಗಿನ್ ಆಗಲು ಇಲ್ಲವೇ ಗೆಸ್ಟ್ ಯೂಸರ್ ಆಗಿಯೂ ಜನರು ಬಳಸುವಂತೆ ಆಪ್ ಅನ್ನು ಸಿದ್ಧಪಡಿಸಲಾಗಿದೆ. ಸೈನ್-ಇನ್ ಆಗದೇ ಎಸ್ಒಎಸ್, ವಿಶ್ವಾಸಾರ್ಹ ಸಂಪರ್ಕ, ನೋಟಿಫಿಕೇಶನ್ ಅಲರ್ಟ್ ಮತ್ತು ಪ್ರೊಫೈಲ್ಗಳಂತಹ ಕೆಲವು ವೈಶಿಷ್ಟ್ಯಗಳು ಲಭ್ಯವಿರುವುದಿಲ್ಲ ಎಂದು ಬಿಎಂಟಿಸಿ ತಿಳಿಸಿದೆ.
ಹಲವು ಬಾರಿ ಗಡುವು ಮೀರಿ ಲೋಕಾರ್ಪಣೆ
ಆಪ್ ಬೀಟಾ ಪರೀಕ್ಷೆಯ ಸಮಯದಲ್ಲಿ ಅದಕ್ಕೆ 'ನಿಮ್ ಬಸ್' ಎಂದು ಹೆಸರಿಡಲಾಗಿತ್ತು. ಆದರೆ ಮೊನ್ನೆ ಬುಧವಾರ ರಾತ್ರಿ ಲೈವ್ ಮಾಡುವ ಅದಕ್ಕೆ 'ನಮ್ಮ ಬಿಎಂಟಿಸಿ' ಎಂದು ಹೆಸರಿಟ್ಟು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ.
ಹಲವು ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದರೂ ಸಹ ಕಾರಣಾಂತರಗಳಿಂದ ಆಪ್ ಬಿಡುಗಡೆ ಆಗಿರಲಿಲ್ಲ. ಅಲ್ಲದೇ ಬಿಎಂಟಿಸಿ ಇತ್ತೀಚೆಗೆ ಚುನವಣೆ ಪ್ರಕ್ರಿಯೆ ಮುಗಿದ ಬಳಿಕ ಲೋಕಾರ್ಪಣೆಗೆ ಚಿಂತನೆ ನಡೆಸಿದೆ ಎಂದು ತಿಳಿಸಿತ್ತು. ಕೊನೆಗೂ ಗುರುವಾರ ಆಪ್ ಬಿಡುಗಡೆ ಮಾಡುವ ಮೂಲಕ ಸಾರ್ವಜನಿಕ ಸಾರಿಗೆ ಪ್ರಯಾಣಿಕರ ಮೊದಗದಲ್ಲಿ ನಿಗಮ ಮಂದಹಾಸ ಮೂಡಿಸಿದೆ.

ಈ ನೂತನ ಆಪ್ ವ್ಯವಸ್ಥೆಯಿಂದ ಬಿಎಂಟಿಸಿಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇವೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಮ್ಮ ಬಿಎಂಟಿಸಿ ವೈಶಿಷ್ಯತೆ ಹೀಗಿದೆ
ವೈಶಿಷ್ಟ್ಯತೆ ನೋಡುವುದಾದರೆ, ಈ ನಮ್ಮ ಬಿಎಂಟಿಸಿ ಮೊಬೈಲ್ ಆಪ್ ಪ್ರಯಾಣಿಕ ಸ್ನೇಹಿ ಇಂಟರ್‌ಫೇಸ್ ಹಾಗೂ ರಿಯಲ್ ಟೈಮ್ ಟ್ರ್ಯಾಕಿಂಗ್, ಹತ್ತಿರದ ನಿಲ್ದಾಣಗಳ ಮಾಹಿತಿ, ಪ್ರಯಾಣದ ಯೋಜನೆ ಹಾಗೂ ಮತ್ತಿತರ ಅತ್ಯಗತ್ಯ ಅಂಶಗಳನ್ನು ಹೊಂದಿದೆ. ನಾಗರಿಕರು ನ್ಯಾವಿಗೇಟ್ ಮಾಡಲು ಸುಲಭವಾಗುವಂತೆ ಆ್ಯಪ್ ಅನ್ನು ರಚಿಸಲಾಗಿದೆ.
ಬಸ್ ನಿಲುಗಡೆ, ವಿಶ್ರಾಂತಿ ಕೊಠಡಿಗಳು, ಕುಡಿಯುವ ನೀರಿನ ಸೌಲಭ್ಯ, ನಿರ್ದಿಷ್ಟವಾಗಿ ಬಸ್ ನಿಲ್ದಾಣಗಳು, ಸ್ವಯಂಚಾಲಿತ ಟೆಲ್ಲರ್ ಯಂತ್ರಗಳು (ಎಟಿಎಂಗಳು) ಹಾಗೂ ಟ್ರಾಫಿಕ್- ಟ್ರಾನ್ಸಿಟ್ ನಿರ್ವಹಣಾ ಕೇಂದ್ರ (TTMC) ಒದಗಿಸುವ ಸೌಲಭ್ಯಗಳನ್ನು ಬಳಕೆದಾರರು ತಿಳಿದುಕೊಳ್ಳುವ ಅಂಶಗಳನ್ನು ಈ ಆಪ್ ಹೊಂದಿದೆ.
ಪ್ರಯಾಣಿಕರು ನೀಡಿದ ಸಲಹೆಗಳು ಏನು?
ಇಷ್ಟೇಲ್ಲ ವೈಶಿಷ್ಯತೆಗಳನ್ನು ಹೊಂದಿರುವ ಆಪ್‌ಗೆ ಪ್ರಯಾಣಿಕರು ಒಂದಷ್ಟು ಸಲಹೆ ನೀಡಿದ್ದಾರೆ. ನಾವು ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡುತ್ತೇವೆಯೋ ಆ ಪ್ರಯಾಣದ ಮಾರ್ಗವನ್ನು ಈ ಆಪ್ ನಲ್ಲಿ ತೋರಿಸುತ್ತಿಲ್ಲ. ನಾವು ಬಯಸುವ ಮಾರ್ಗದ ಆಯ್ಕೆಯನ್ನು ಇಲ್ಲಿ ತೊರಿಸುತ್ತಿಲ್ಲ. ಹೆಬ್ಬಾಳ ಮೂಲಕ ಮೆಜೆಸ್ಟಿಕ್‌ಗೆ ಹೋಗಬೇಕು. ಆ ಮಾರ್ಗವಾಗಿ ಹೋಗುವ ಬಸ್‌ಗಳ ತೋರಿಸದೇ, ಹೆಣ್ಣೂರು ಮತ್ತು ನಾಗವಾರದ ಮಾರ್ಗದ ಬಸ್‌ಗಳನ್ನು ತೋರಿಸಲಾಗುತ್ತಿದೆ.
ಅಲ್ಲದೇ ನಾವಿರುವ ಒಂದೂವರೆ ಕಿಲೋ ಮೀಟರ್‌ವರೆಗಿನ ಸುತ್ತಮುತ್ತಲಿನ ಬಸ್‌ಗಳನ್ನು ಮಾತ್ರ ಈ ಆಪ್ ತೊರಿಸುತ್ತದೆ ಎಂದು ಟೆಕ್ಕಯೊಬ್ಬರು ಬಿಡುಗಡೆಗೊಂಡ ಮೊಬೈಲ್ ಆಪ್ಲಿಕೇಷನ್ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.












Click it and Unblock the Notifications