Video Viral: ಕಾರಿನ ಸನ್‌ರೂಫ್ ತೆಗೆದು ನಿಂತಿದ್ದ ಬಾಲಕನಿಗೆ ಕಾದಿತ್ತು ಅಪಾಯ...! Bengauluru
ಬೆಂಗಳೂರು, ಸೆಪ್ಟಂಬರ್ 07: ಹೆಚ್ಚು ಸಂಚಾರ ದಟ್ಟಣೆ ಕಂಡು ಬರುವ ಬೆಂಗಳೂರಿನಲ್ಲಿ ರಸ್ತೆ ಅಪಘಾತಗಳು ಸಂಭವಿಸುವುದು ಮಾಮೂಲು. ಆದರೆ ಇಲ್ಲೊಂದು ಬಾಲಕ ಕಾರಿನ ಸನ್‌ರೂಫ್‌ನಿಂದ ತಲೆ ಹೊರ ಹಾಕಿ ನಿಂತುಕೊಂಡು ಖುಷಿಪಡುತ್ತಿದ್ದ. ಈ ವೇಳೆ ನಡೆದ ಭೀಕರ ಘಟನೆ, ರಸ್ತೆ ಸುರಕ್ಷತೆ, ಜೀವ ರಕ್ಷಣೆ ಕಾಳಜಿ ಬಗ್ಗೆ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟು ಹಾಕಿದೆ. ಘಟನೆಗೆ ಸಂಬಂಧಿಸಿದಂತಹ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ.
ಮಕ್ಕಳಿರುವ ಮನೆಗಳಲ್ಲಿ ಕಾರಿನ ಸನ್‌ರೂಫ್ ನಿಂದಾಗುವ ಯಡವಟ್ಟು, ಅದನ್ನು ಬಳಸಿಕೊಳ್ಳುವಾಗ ಇರಬೇಕಾದ ನಿಯಮಗಳ ಮೇಲೆ ಈ ವಿಡಿಯೋ ಜಾಗೃತಿ ಮೂಡಿಸುತ್ತದೆ. ಅಷ್ಟು ಮಾತ್ರವಲ್ಲದೇ ಅಪಘಾತ, ಜೀವಕ್ಕೆ ಅಪಾಯಗಳ ಎದುರಾಗಬಹುದಾದ ಗಂಭೀರ ಕಳವಳವನ್ನು ಇದು ಹುಟ್ಟುಹಾಕಿದೆ. ಅಷ್ಟಕ್ಕೂ ವಿಡಿಯೋದಲ್ಲಿ ಏನಿದೆ?

ಬಾಲಕ ಚಲಿಸುತ್ತಿರುವ ಕಾರಿನ ಸನ್‌ರೂಫ್‌ನಿಂದ ತಲೆ ಹೊರ ಹಾಕಿ ನಿಂತಿದ್ದಾನೆ. ಕೆಂಪು ಕಾರು ಚಲಿಸುತ್ತಿದೆ. ಈ ವೇಳೆ ದೊಡ್ಡ ಮತ್ತು ಎತ್ತರದ ಲಾರಿಗಳು ಬರದಂತೆ ರಸ್ತೆಗೆ ನಿರ್ದಿಷ್ಟ ಎತ್ತರದಲ್ಲಿ ಹಾಕಿರುವ ಕಬ್ಬಿಣ ತಡೆಗೋಡೆಗೆ ಡಿಕ್ಕಿ ಕಾರಿನ ಸನ್‌ರೂಫ್‌ನಿಂದ ಆಚೆ ನಿಂತಿದ್ದ ಹುಡುಗನ ತಲೆ ಡಿಕ್ಕಿ ಹೊಡೆದಿದೆ. ಬಾಲಕನ ತಲೆಗೆ ಗಾಯಗಳು ಆಗಿವೆ ಎಂದು ವರದಿ ಆಗಿದೆ. ತಡೆಗೋಡಿಗೆ ಡಿಕ್ಕಿ ಹೊಡೆಯುತ್ತಿದ್ದಂತೆ ವಾಹನದ ಒಳಕ್ಕೆ ಬಾಲಕ ಕುಸಿದು ಬಿದ್ದ ಘಟನೆಯನ್ನು ವಿಡಿಯೋ ನೋಡಬಹುದು. ಬಾಲಕನ ಖುಷಿಯ ಕ್ಷಣ ಒಂದೇ ಕ್ಷಣಕ್ಕೆ ಬದಲಾಗಿ ಬಿಟ್ಟಿದೆ. ಇದು ಒಂದು ಕ್ಷಣ ಎಂತವರನ್ನು ಭಯಭೀತರನ್ನಾಗಿ ಮಾಡುತ್ತದೆ.
ಮನರಂಜನೆಗೆ, ಖುಷಿ ಕ್ಷಣ ಅನುಭವಿಸುವ ಮುಂದಾಗಿದ್ದ ಬಾಲಕನಿಗೆ ಆಘಾತ ಎದುರಾಗಿದೆ. ನೋಡಲು ತಮಾಷೆ ರೀತಿ ಕಂಡರು ಸಹ ಕಾರಿನ ಕಿಟಿಕಿಯಿಂದ, ಕೈ ತಲೆ ಹೊರ ಹಾಕುವವರಿಗೂ ಇದು ಎಚ್ಚರಿಕೆಯಂತಿದೆ. ಜೀವಕ್ಕೆ ಅಪಾಯ ಎದುರಾಗಬಹುದು. ಆದ್ದರಿಂದ ರಸ್ತೆ ಸುರಕ್ಷತಾ ನಿಯಮ ಪಾಲಿಸಬೇಕಾಗುತ್ತದೆ. ಪೋಷಕರ ಜವಾಬ್ದಾರಿ ಏನೆಂಬುದನ್ನು ಈ ಘಟನೆ ತಿಳಿಸುತ್ತದೆ.
Next time when you leave your kids popping their heads out, think once again! pic.twitter.com/aiuHQ62XN1
— ThirdEye (@3rdEyeDude) September 7, 2025
ಸಾರ್ವಜನಿಕರು ಹೇಳಿದ್ದೇನು?
ಕಾರಿನ ಸನ್‌ರೂಫ್‌ಗಳನ್ನು ಪ್ರಯಾಣಿಕರು ತಲೆ ಹೊರಚಾಚಲು ವಿನ್ಯಾಸಗೊಳಿಸಿದ್ದಲ್ಲ ಎಂದಿದ್ದಾರೆ. ಇಂತಹ ವೈಶಿಷ್ಟ್ಯಗಳ ದುರಪಯೋಗ ಆಗಬಾರದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ವಿಡಿಯೋ ನೋಡಿದ ಅನೇಕ ನೆಟ್ಟಿಗರು ಸಾಷಕ್ಟು ಪ್ರತಿಕ್ರಿಯೆ ನೀಡಿದ್ದಾರೆ. ಇದೊಂದು ದುಃಖಕರ ಘಟನೆ ಎಂದಿದ್ದಾರೆ. ಮತ್ತೊಬ್ಬರು ಇದನ್ನು ಹೃದಯವಿದ್ರಾವಕ ಎಂದಿದ್ದು, ಆ ಬಡ ಮಗುವಿನ ತಲೆಗೆ ಜೋರಾಗಿ ನೋವುಂಟಾಗಿದೆ. ಪೋಷಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.
ಮೂರನೇ ಬಳಕೆದಾರರು, ಇಂತಹ ರಸ್ತೆ ದುರಂತಗಳ ಬಗ್ಗೆ, ನಿಯಮ ಪಾಲನೆ ಬಗ್ಗೆ ರಸ್ತೆ ಸುರಕ್ಷತಾ ತಜ್ಞರು ಮತ್ತು ಸಂಚಾರ ಪೊಲೀಸರು ಎಚ್ಚರಿಸುತ್ತಲೆ ಇದ್ದಾರೆ. ಇಂದಿನ ಘಟನೆ ಅಪಾಯಕಾರಿ ಎಂದು ಹೇಳಿದರು. ಮಕ್ಕಳನ್ನು ಕರೆದುಕೊಂಡು ಹೋಗುವಾಗ ಈ ರೀತಿ ನಿರ್ಲಕ್ಷ್ಯ ತೋರುವ ಪೋಷಕರು ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕು. ವಾಹನ ಚಲಿಸುವಾಗ ಮೋಜು, ಮಸ್ತಿ ಇಂತಹ ಅಪಾಯ ತಂದೊಡ್ಡಬಹುದೆಂದು ತಿಳಿಸಿದ್ದಾರೆ.












Click it and Unblock the Notifications