ಬೆಂಗಳೂರು ತಮಿಳರಿಗೆ ಸೇರಿದ್ದು ಎಂದ ತಮಿಳಿಗ: ಕನ್ನಡಿಗರಿಂದ ಕ್ಲಾಸ್, ಇಲ್ಲಿದೆ ವೈರಲ್ ವಿಡಿಯೋ
Bengaluru: ಬೆಂಗಳೂರಿನಲ್ಲಿ ಕಳೆದ ಕೆಲವು ವರ್ಷಗಳಿಂದ ಭಾಷಾ ವಿವಾದ ವಿಚಾರಗಳನ್ನು ನೀವು ಕೇಳಿಯೇ ಇರುತ್ತೀರಿ. ಕನ್ನಡಿಗರು ಹಾಗೂ ಅನ್ಯಭಾಷಿಕರ ನಡುವೆ ಭಾಷಾ ವಿವಾದ ಮುಂದುವರಿಯುತ್ತಲ್ಲೇ ಇದೆ. ಕೆಲವರು ಉದ್ದೇಶಪೂರ್ವಕವಾಗಿಯೇ ಕನ್ನಡಿಗರನ್ನು ಕೆಣಕುವ ಕೆಲಸವನ್ನು ಮಾಡುತ್ತಿದ್ದಾರೆ. ಈ ನಡುವೆ ಬೆಂಗಳೂರೇ ನಮ್ಮದ್ದಾಗಿತ್ತು. ಬೆಂಗಳೂರು ತಮಿಳುನಾಡಿಗೆ ಸೇರಿದ ಪ್ರದೇಶವಾಗಿದೆ. ಅದನ್ನು ಬದಲಾಯಿಸಲಾಗಿದೆ ಎಂದು ತಮಿಳಿಗನೊಬ್ಬ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರು ಕನ್ನಡಿಗರದ್ದು, ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ. ಕರ್ನಾಟಕದ ರಾಜಧಾನಿಯಾಗಿ ಬೆಂಗಳೂರು ವಿಶ್ವ ಮಟ್ಟದಲ್ಲಿ ಮನ್ನಣೆ ಗಳಿಸಿದೆ. ಕೆಲವರು ಬೆಂಗಳೂರಿನ ಬ್ರ್ಯಾಂಡ್ ಕುಗ್ಗಿಸುವುದಕ್ಕೆ, ಪೈಪೋಟಿಗೆ ವಾಮಾರ್ಗ ಕಂಡುಕೊಳ್ಳುತ್ತಿರುವುದು ಭಾರೀ ಚರ್ಚೆ ಆಗುತ್ತಿರುವಾಗಲೇ ಬೆಂಗಳೂರೇ ನಮ್ಮದಾಗಿತ್ತು. ಅದನ್ನು ಹೆಸರು ಬದಲಾಯಿಸಿ, ಅವರದ್ದಾಗಿಸಿಕೊಂಡಿದ್ದಾರೆ ಎಂದು ತಮಿಳಿಗನೊಬ್ಬ ಹೇಳಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರ ಆಕ್ಷೇಪಕ್ಕೆ ಕಾರಣವಾಗಿದೆ.

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ತಮಿಳಿಗನೊಬ್ಬ, ಬೆಂಗಳೂರು ತಮಿಳಿಗರದ್ದಾಗಿತ್ತು. ಬೆಂಗಳೂರನ್ನು ವೆಂಣ್ ಕಾಳೂರು ಎಂದು ಕರೆಯುತ್ತಿದ್ದರು. ಆದರೆ ಅದರನ್ನು ಕಸರೆಮೊಸರೆ ಮಾಡಿ, ಬೆಂಗಳೂರು ಅಂತ ಮಾಡಿಕೊಂಡಿದ್ದಾರೆ. ಅಲ್ಲಿ ನೆಲೆಸಿದ್ದು ತಮಿಳಿಗರು, ಬೆಂಗಳೂರು ತಮಿಳಿಗರಿಗೆ ಸೇರಿತ್ತು ಎಂಬರ್ಥದಲ್ಲಿ ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ.
ಕನ್ನಡ್ವಿರಾಟ (@kohlificationn) ಎನ್ನುವ ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಿಂದ ಈ ವೈರಲ್ ವಿಡಿಯೋವನ್ನು ರೀ ಪೋಸ್ಟ್ ಮಾಡಲಾಗಿದ್ದು, ಇಲ್ಲೊಬ್ಬ ತಮಿಳುನಾಡಿನ ಅಯೋಗ್ಯ ಏನು ಹೇಳ್ತಿದಾನೆ ಅಂತ ಕೇಳಿ, ಬೆಂಗಳೂರು ಹೇಗೆ ಬಂತು, ಬೆಂಗಳೂರು ಹೇಗೆ ಆಯ್ತು, ಅದು ಯಾರಿಗೆ ಸೇರಿದ್ದು, ಅಲ್ಲಿ ಯಾರು ಬದುಕುತಿದ್ದಾರೆ ಅಂತ ಈತ ತನ್ನ ಅಜ್ಞಾನವನ್ನೆಲ್ಲ ಕಕ್ಕುತ್ತಿದ್ದಾನೆ.
ಈ ತಮಿಳುನಾಡಿನವರು ಬೆಂಗಳೂರು ತಮ್ಮದು ಅಂತ ಯಾಕೆ ಹೇಳ್ತಾವೆ ಅನ್ನೋದು ನನ್ನ ತಿಳುವಳಿಕೆಗೆ ಕೂಡ ತಿಳಿಯುತ್ತಿಲ್ಲ, ಚೆನ್ನೈ ಅವರದ್ದು, ಅದನ್ನು ಬಿಟ್ಟು ಯಾಕ್ರೀ ಬೆಂಗಳೂರಿನ ಮೇಲೆ ನಿಮ್ಮ ಕೆಟ್ಟ ಕಣ್ಣು ಹಾಕ್ತಿರೀ. ಬೆಂಗಳೂರು ಕನ್ನಡಿಗರದ್ದು, ಬೇರೆ ರಾಜ್ಯದವರು ಉದ್ಯೋಗ ಬೇಡಿಕೊಂಡು ಬಂದಿದ್ದಕ್ಕೆ, ಉದ್ಯೋಗ ಕೊಟ್ಟು ಜೀವನ ಕೊಟ್ಟಿದೆ ನಮ್ಮ ಬೆಂಗಳೂರು, ಈ ನಾಡಿನ ಋಣ ತೀರಿಸಬೇಕು ಅಂದರೆ ಕನ್ನಡ ಕಲಿತು ಕನ್ನಡದಲ್ಲೇ ವ್ಯವಹರಿಸಿ ಎಂದು ಪೋಸ್ಟ್ ಮಾಡಲಾಗಿದೆ.
ಕನ್ನಡಿಗರು ಹೇಳಿದ್ದೇನು ?
ಇನ್ನು ಈ ವೈರಲ್ ವಿಡಿಯೋಗೆ ಕನ್ನಡಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ತಮಿಳಿಗರು ತಮ್ಮ ಇತಿಹಾಸವನ್ನು ಹೇಳುವಂತೆ ನೋಡಿದರೆ, ಇಡೀ ತಮಿಳುನಾಡು ನಮ್ಮದೇ ಎನ್ನುವ ಮಾತು ಬರುತ್ತದೆ. ಚೋಳರು ಬೆಂಗಳೂರಿನಲ್ಲಿ ಆಡಳಿತ ನಡೆಸಿದರೆಂಬ ಉಲ್ಲೇಖಗಳಿವೆ. ಆದರೆ ಕನ್ನಡ ರಾಜರಾದ ಗಂಗರು, ಹೊಯ್ಸಳರು ಹಾಗೂ ವಿಜಯನಗರ ಸಾಮ್ರಾಜ್ಯದ ರಾಜರು ತಮಿಳುನಾಡಿನ ಬಹುಭಾಗವನ್ನು ಸಂಪೂರ್ಣವಾಗಿ ಆಳಿದ ದಾಖಲೆಗಳೂ ಇವೆ. ಬೆಂಗಳೂರಿನಲ್ಲಿ ತಮಿಳಿಗರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಶಾಸನಗಳು ಸಿಕ್ಕಿರುವುದು ಕೂಡ ಇತಿಹಾಸದ ಮಹತ್ವದ ಸಂಗತಿಯಾಗಿದೆ ಎಂದು ವರುಣ್ ಎನ್ನುವವರು ಕಮೆಂಟ್ ಮಾಡಿದ್ದಾರೆ.
ಭಾಷಾ ಸಾಮರಸ್ಯ ಕೆಡಿಸುತ್ತಿರುವ ವೈರಲ್ ವಿಡಿಯೋಗಳು
ಇನ್ನು ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಕೆಲವು ವಿಡಿಯೋಗಳು ಕನ್ನಡಿಗರು ಹಾಗೂ ಅನ್ಯಭಾಷಿಕರ ನಡುವೆ ವೈಮನಸ್ಸಿಗೆ ಕಾರಣವಾಗುತ್ತಿದೆ. ಕೆಲವರು ಉದ್ದೇಶಪೂರ್ವಕವಾಗಿ ವೈರಲ್ ಆಗಬೇಕು ಎನ್ನುವ ಕಾರಣಕ್ಕೆ, ವೀವ್ಸ್ ಕಾರಣಕ್ಕೆ ಮಾಡುತ್ತಿರುವ ವಿಡಿಯೋಗಳು ಸಹ ವೈರಲ್ ಆಗಿ, ಭಾಷಾ ಸಮಸ್ಯೆಗೆ ವೇದಿಕೆ ಆಗುತ್ತಿದೆ.
🚨ಬೆಂಗಳೂರು ಯಾರದ್ದು
— ಕನ್ನಡ್ವಿರಾಟ (@kohlificationn) February 11, 2026
ನಮ್ಮೂರಿನ ಮೇಲೆ ಕೊಂಗರ ಕಣ್ಣು ಬಿದ್ದು
ನಮ್ದು ನಮ್ದು ಅಂತಿದಾವೆ ಎದ್ದು ಬಿದ್ದು🚨
ಇಲ್ಲೊಬ್ಬ ತಮಿಳುನಾಡಿನ ಅಯೋಗ್ಯ ಏನು ಹೇಳ್ತಿದಾನೆ ಅಂತ ಕೇಳಿ, ಬೆಂಗಳೂರು ಹೇಗೆ ಬಂತು, ಬೆಂಗಳೂರು ಹೇಗೆ ಆಯ್ತು, ಅದು ಯಾರಿಗೆ ಸೇರಿದ್ದು, ಅಲ್ಲಿ ಯಾರು ಬದುಕುತಿದ್ದಾರೆ ಅಂತ ಈತ ತನ್ನ ಅಜ್ಞಾನವನ್ನೆಲ್ಲ ಕಕ್ಕುತ್ತಿದ್ದಾನೆ.
ಈ… pic.twitter.com/toTDdRSVDI
ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಬೆಂಗಳೂರು, ಕನ್ನಡಿಗರ ಬಗ್ಗೆ ಆಕ್ಷೇಪಾರ್ಹವಾಗಿ ಪೋಸ್ಟ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ರೀತಿ ಮಾಡುತ್ತಿರುವವರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಕನ್ನಡಿಗರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications