Bengaluru: ₹ 446 ಕೋಟಿ ವೆಚ್ಚದಲ್ಲಿ 2 ಅಪಾರ್ಟ್‌ಮೆಂಟ್ ನಿರ್ಮಿಸಲು BDA ನಿರ್ಧಾರ- ಎಲ್ಲಿ? ಯಾರಿಗೆ ಅನುಕೂಲ? ಅಂಕಿಅಂಶ, ಮಾಹಿತಿ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 446 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಅಪಾರ್ಟ್‌ಮೆಂಟ್ ಸಂಕೀರ್ಣಗಳನ್ನು ನಿರ್ಮಿಸಲು ಉದ್ದೇಶಿಸಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 446 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಅಪಾರ್ಟ್‌ಮೆಂಟ್ ಸಂಕೀರ್ಣಗಳನ್ನು ನಿರ್ಮಿಸಲು ಉದ್ದೇಶಿಸಿದೆ. ಬೆಂಗಳೂರಿನ ಪೂರ್ವ ಭಾಗ ಮತ್ತು ಪಶ್ಚಿಮ ಭಾಗದಲ್ಲಿ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಾಣ ಮಾಡಲಿದೆ. ಎರಡೂ ಯೋಜನೆಗಳಿಗೆ ಬಿಡಿಎ ತನ್ನ ಆಂತರಿಕ ಸಂಪನ್ಮೂಲಗಳಿಂದ ಹಣ ನೀಡಲಿದೆ ಎಂದು ತಿಳಿದುಬಂದಿದೆ.
ಬಿಡಿಎ ಪ್ರಕಾರ, ಹಳೆ ಮದ್ರಾಸ್ ರಸ್ತೆಯ ಕೋನದಾಸಪುರದ 10 ಎಕರೆ ಭೂಮಿಯಲ್ಲಿ ಒಟ್ಟು 400 ಫ್ಲಾಟ್‌ಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಯೋಜನೆಗೆ ಅಂದಾಜು 346.51 ಕೋಟಿ ರೂ ವೆಚ್ಚವಾಗಲಿದೆ. ಎರಡನೇ ವಸತಿ ಯೋಜನೆಯನ್ನು ಮೈಸೂರು ರಸ್ತೆಯ ವಳಗೇರಹಳ್ಳಿಯಲ್ಲಿ 2 ಎಕರೆ ವಶಪಡಿಸಿಕೊಂಡ ಭೂಮಿಯಲ್ಲಿ ಪ್ರಸ್ತಾಪಿಸಲಾಗಿದೆ. ಇದಕ್ಕೆ 99.87 ಕೋಟಿ ವೆಚ್ಚವಾಗಲಿದೆ. ಬಿಡಿಎ ಇಲ್ಲಿ ಸುಮಾರು 100 ಫ್ಲ್ಯಾಟ್‌ಗಳನ್ನು ನಿರ್ಮಿಸಲು ಯೋಜನೆ ರೂಪಿಸುತ್ತಿದೆ.

ಪಾಲಿಕೆ ಸಭೆಯಲ್ಲಿ ಯೋಜನೆಗೆ ಅನುಮತಿ ದೊರೆತಿದ್ದು, ಟೆಂಡರ್ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ ಎಂದು ಬಿಡಿಎ ಅಧಿಕಾರಿಯೊಬ್ಬರು 'ಡೆಕ್ಕನ್ ಹೆರಾಲ್ಡ್'ಗೆ ತಿಳಿಸಿದ್ದಾರೆ.
'ಇದುವರೆಗೆ, ನಾವು ಒಟ್ಟು 14,000 ಫ್ಯಾಟ್‌ಗಳನ್ನು ಒಳಗೊಂಡಿರುವ ಸುಮಾರು 32 ಅಪಾರ್ಟ್ಮೆಂಟ್ ಸಂಕೀರ್ಣಗಳನ್ನು ನಿರ್ಮಿಸಿದ್ದೇವೆ. ಬಹುತೇಕ ಫ್ಲಾಟ್‌ಗಳು ಮಾರಾಟವಾಗಿವೆ. ಕೊಮ್ಮಘಟ್ಟ ಮತ್ತು ಕಣಿಮಿಣಿಕೆಯಲ್ಲಿ ನೆಲೆಸಿರುವ ಫ್ಲಾಟ್‌ಗಳನ್ನು ಮಾರಾಟ ಮಾಡಲು ಸಮಸ್ಯೆ ಉಂಟಾಗಿದೆ. ಈ ಕಟ್ಟಡಗಳಿಗೆ ಸಂಪರ್ಕವನ್ನು ಸುಧಾರಿಸುವ ಮೂಲಕ ನಾವು ಸಮಸ್ಯೆಯನ್ನು ಪರಿಹರಿಸುತ್ತಿದ್ದೇವೆ' ಎಂದು ಅಧಿಕಾರಿ ಹೇಳಿದ್ದಾರೆ.

ಪ್ರಸ್ತುತ ಬಿಡಿಎ ವಿವಿಧ ಅಪಾರ್ಟ್ಮೆಂಟ್ ಸಂಕೀರ್ಣಗಳಲ್ಲಿ ಸುಮಾರು 1,000 ಮಾರಾಟವಾಗದ ಫ್ಲಾಟ್‌ಗಳನ್ನು ಹೊಂದಿದೆ. ಕಳಪೆ ಲಭ್ಯತೆ, ಮೂಲ ಸೌಕರ್ಯಗಳ ಕೊರತೆ ಮತ್ತು ಅಷ್ಟೊಂದು ಆಕರ್ಷಕವಲ್ಲದ ವಿನ್ಯಾಸಗಳಿಂದ ಬೇಡಿಕೆ ಕುಸಿಯಲು ಕಾರಣವಾಗಿದೆ. ಮುಂಬರುವ ಫ್ಲಾಟ್‌ಗಳು ಈ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂದು ಭರವಸೆ ನೀಡಿದರೂ, ಎರಡು ಮಲಗುವ ಕೋಣೆಗಳ ಫ್ಲ್ಯಾಟ್‌ನ ಬೆಲೆ 40 ಲಕ್ಷಕ್ಕಿಂತ ಕಡಿಮೆ ಎಂದು ಪ್ರಾಧಿಕಾರ ತಿಳಿಸಿದೆ.
ಈ ವಾರದ ಆರಂಭದಲ್ಲಿ, ನ್ಯಾಯಮೂರ್ತಿ ರತ್ನಕಲಾ ನೇತೃತ್ವದ ರಾಜ್ಯ ಪೂರ್ವ ಟೆಂಡರ್ ಪರಿಶೀಲನಾ ಸಮಿತಿಯು ಬಿಡಿಎಗೆ ಪತ್ರ ಬರೆದಿದ್ದು, ಯೋಜನೆಯೊಂದಿಗೆ ಮುಂದುವರಿಯುವ ಮೊದಲು ರಾಜ್ಯ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆಯನ್ನು ಪಡೆದಿಲ್ಲ ಎಂದು ಹೇಳಿದೆ.

ಎರಡೂ ವಸತಿ ಯೋಜನೆಗಳು ಬಿಡಿಎಯಿಂದ ಧನಸಹಾಯ ಪಡೆದಿರುವುದರಿಂದ ಸರ್ಕಾರದ ಅನುಮೋದನೆ ಅಗತ್ಯವಿಲ್ಲ. ಬಿಡಿಎ ಕಾಯಿದೆಯ ಸೆಕ್ಷನ್ 15 (2) (i) ಪ್ರಾಧಿಕಾರವು ತನ್ನದೇ ಆದ ಉಪಕ್ರಮದಲ್ಲಿ ಹೊಸ ಅಥವಾ ಹೆಚ್ಚುವರಿ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಹಿರಿಯ ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷ, ಬಿಡಿಎ ಎರಡು ಬಹುತೇಕ ಪೂರ್ಣಗೊಂಡಿರುವ ಅಪಾರ್ಟ್‌ಮೆಂಟ್ ಸಂಕೀರ್ಣಗಳನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಒಂದು ಕೋನದಾಸಪುರದಲ್ಲಿ (672 ಘಟಕಗಳು) ಮತ್ತು ಇನ್ನೊಂದು ನಾಗರಭಾವಿಯಲ್ಲಿ (120 ಘಟಕಗಳು) ಯಲ್ಲಿದೆ.
ಕೆಂಗೇರಿ ಬಳಿ ಇರುವ ಕಣಿಮಿಣಿಕೆ ವಸತಿ ಯೋಜನೆಯು ಕಳಪೆ ಮಟ್ಟದ್ದಾಗಿದೆ. ಬಿಡಿಎ ಕಳಪೆ ಅನುಷ್ಠಾನದಿಂದ ಸರ್ಕಾರಕ್ಕೆ 451 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಕಳೆದ ತಿಂಗಳು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿ ಮಾಡಿದೆ.












Click it and Unblock the Notifications