Bullet Train: ನಮ್ಮ ಬೆಂಗಳೂರಿನಲ್ಲಿ ಬುಲೆಟ್ ಟ್ರೈನ್ ಬೋಗಿ ತಯಾರಿ

ಬೆಂಗಳೂರು, ಅಕ್ಟೋಬರ್ 16: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಬಳಿಕ ದೇಶದಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವುದು ಬುಲೆಟ್ ರೈಲು ಯೋಜನೆ. ಮುಂಬೈ-ಅಹಮದಾಬಾದ್ ನಡುವೆ ಸಂಪರ್ಕ ಕಲ್ಪಿಸುವ ದೇಶದ ಮೊದಲ ಈ ಮಾದರಿ ರೈಲು ಯೋಜನೆ ಕಾಮಗಾರಿ ನಡೆಯುತ್ತಿದೆ. ಗಂಟೆಗೆ ಸುಮಾರು 249 ಕಿ. ಮೀ. ವೇಗದಲ್ಲಿ ಸಂಚಾರ ನಡೆಸುವ ಸಾಮರ್ಥ್ಯ ಹೊಂದಿರುವ ಈ ರೈಲಿನ ಬೋಗಿ ಉದ್ಯಾನ ನಗರಿ ಬೆಂಗಳೂರಿನಲ್ಲಿ ತಯಾರಾಗಲಿದೆ.

ಚೆನ್ನೈನಲ್ಲಿರುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಬುಲೆಟ್ ರೈಲು ಯೋಜನೆಗೆ ಎರಡು ಸೆಟ್‌ ಬೋಗಿಯನ್ನು ತಯಾರು ಮಾಡಿಕೊಡಲು ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್)ಗೆ ಟೆಂಡರ್ ನೀಡಿದೆ. ಈ ಮಾದರಿ ಒಂದು ಬೋಗಿಯ ವೆಚ್ಚ 27.86 ಕೋಟಿ ರೂ.ಗಳು.

Bengaluru Based BEML Gets Rs 867 Crore Order For Make High Speed Trains

ಎರಡು ರೈಲು ಬೋಗಿಗಳ ನಿರ್ಮಾಣ ಮತ್ತು ವಿನ್ಯಾಸ, ಅಭಿವೃದ್ಧಿ, ಪರೀಕ್ಷೆ ಇತರೆ ವೆಚ್ಚಗಳನ್ನು ಸೇರಿಸಿ ಸುಮಾರು 867 ಕೋಟಿ ರೂ.ಗಳ ಟೆಂಡರ್‌ ಅನ್ನು ಬಿಇಎಂಎಲ್‌ಗೆ ನೀಡಲಾಗಿದೆ. 2026ರ ಡಿಸೆಂಬರ್ ಅಂತ್ಯಕ್ಕೆ ಬೋಗಿಗಳನ್ನು ಬಿಇಎಂಎಲ್ ನಿರ್ಮಾಣ ಮಾಡಿ ಹಸ್ತಾಂತರ ಮಾಡಬೇಕಾಗಿದೆ. ಐಸಿಎಫ್ ಸೆಪ್ಟೆಂಬರ್‌ನಲ್ಲಿ ಬೋಗಿಗಳ ತಯಾರಿಕೆಗೆ ಟೆಂಡರ್ ಕರೆದಿತ್ತು.

ಸರ್ಕಾರಿ ಸ್ವಾಮ್ಯದ ಬಿಇಎಂಎಲ್‌ ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. "ಭಾರತದ ಅತಿ ವೇಗದ ರೈಲು ಅಭಿವೃದ್ಧಿ ಯೋಜನೆಯಲ್ಲಿ ಇದು ಮೈಲುಗಲ್ಲು. ಸ್ವದೇಶಿ ನಿರ್ಮಿತ ರೈಲು ಇದಾಗಿರಲಿದೆ. ಬೆಂಗಳೂರಿನ ರೈಲ್ವೆ ಕೋಚ್‌ ಸಂಕೀರ್ಣದಲ್ಲಿ ಇದನ್ನು ಅಭಿವೃದ್ಧಿಗೊಳಿಸಲಾಗುತ್ತದೆ. 2026ರಕ್ಕೆ ಹಸ್ತಾಂತರ ಮಾಡುವ ಗುರಿ ಹೊಂದಲಾಗಿದೆ" ಎಂದು ಹೇಳಿದೆ.

2027ರಲ್ಲಿ ಸಂಚಾರ ಆರಂಭ: 8 ಬೋಗಿಯನ್ನು ಒಳಗೊಂಡಿರುವ ಎರಡು ಸೆಟ್‌ಗಳನ್ನು ಬಿಇಎಂಎಲ್‌ನಲ್ಲಿ ನಿರ್ಮಾಣ ಮಾಡಲಾಗುತ್ತದೆ. ಸಂಪೂರ್ಣ ಹವಾನಿಯಂತ್ರಿತ ಬೋಗಿ ಇದಾಗಿರಲಿದೆ. ರೈಲುಗಳು ಅತ್ಯಂತ ವೇಗವಾಗಿ ಸಾಗುವುದರಿಂದ ಪ್ರಯಾಣಿಕರ ಆಸನದ ವ್ಯವಸ್ಥೆ ಬಗ್ಗೆ ಹೆಚ್ಚಿನ ಗಮನ ವಹಿಸಲಾಗುತ್ತದೆ. ವಿಶೇಷ ವಿನ್ಯಾಸದೊಂದಿಗೆ ಸುಖಕರ ಪ್ರಯಾಣದ ಅನುಭವ ನೀಡುವ ಮಾದರಿಯಲ್ಲಿ ಬೋಗಿಯನ್ನು ವಿನ್ಯಾಸ ಮಾಡಲಾಗುತ್ತದೆ.

ಜಪಾನ್ ನೆರವಿನಿಂದ ಭಾರತ ಮುಂಬೈ-ಅಹಮದಾಬಾದ್ ನಡುವೆ ಸಂಪರ್ಕ ಕಲ್ಪಿಸುವ ಹೈ-ಸ್ಪೀಡ್ ರೈಲು ಯೋಜನೆ ಜಾರಿಗೊಳಿಸಲಾಗುತ್ತಿದೆ. ಅಲ್ಲದೇ ಇದಕ್ಕೆ ಸ್ವದೇಶಿ ತಂತ್ರಜ್ಞಾನವನ್ನು ಅಳವಡಿಕೆ ಮಾಡಲಾಗುತ್ತಿದೆ. ಈಗ ಈ ರೈಲಿನ ಬೋಗಿಗಳು ಸಹ ಬಿಇಎಂಎಲ್‌ ಮೂಲಕ ದೇಶದಲ್ಲಿಯೇ ತಯಾರಾಗುತ್ತಿದೆ. 2027ರಲ್ಲಿ ಈ ರೈಲು ಓಡಿಸುವ ಗುರಿ ಇದೆ.

ಹೈಸ್ಪೀಡ್ ರೈಲು ಯೋಜನೆ ಕುರಿತು ಮಾಹಿತಿ ನೀಡಿದ್ದ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್‌, "ಸ್ವದೇಶಿ ತಂತ್ರಜ್ಞಾನ ಆಧರಿಸಿದ ಬುಲೆಟ್ ರೈಲು ಅಭಿವೃದ್ಧಿ ನಿರ್ಮಾಣದ ಯೋಜನೆ ಪ್ರಗತಿಯಲ್ಲಿದೆ. ಇದು ಅತ್ಯಂತ ಕ್ಲಿಷ್ಟಕರ ತಂತ್ರಜ್ಞಾನವಾಗಿದೆ, ಜಪಾನ್ ನೆರವಿನೊಂದಿಗೆ ಇದನ್ನು ಸಾಕಾರಗೊಳಿಸುವ ಯೋಜನೆ ರೂಪಿಸಲಾಗುತ್ತಿದೆ" ಎಂದು ಹೇಳಿದ್ದರು.

"ಜಪಾನ್‌ನ ತಜ್ಞರ ಜೊತೆಗೂಡಿ ಈ ಯೋಜನೆಯ ವಿನ್ಯಾಸವನ್ನು ಸಿದ್ಧಪಡಿಸಲಾಗಿದೆ. ಬುಲೆಟ್ ರೈಲು ಎಂಬುದು ಅತ್ಯಂತ ಕ್ಲಿಷ್ಟಕರ ಹಾಗೂ ಉನ್ನತ ತಂತ್ರಜ್ಞಾನ ಬೇಡುವ ಯೋಜನೆಯಾಗಿದೆ. ಗರಿಷ್ಠ ಮಟ್ಟದ ಸುರಕ್ಷತೆ ಹಾಗೂ ನಿರ್ವಹಣೆಯನ್ನು ಪರಿಗಣಿಸಿ ಭಾರತದ ಹವಾಮಾನ ಮತ್ತು ಅಗತ್ಯಕ್ಕೆ ತಕ್ಕಂತೆ ಯೋಜನೆ ಪರಿಷ್ಕರಣೆ ಮಾಡಲಾಗಿದೆ" ಎಂದು ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+