Bengaluru Bandh: ಸೆಪ್ಟೆಂಬರ್‌ 26 ನಾಳೆ ಬೆಂಗಳೂರಿನಲ್ಲಿ ಯಾವ ಸೇವೆ ಇರುತ್ತೆ, ಏನು ಇರಲ್ಲ ತಿಳಿಯಿರಿ

ಬೆಂಗಳೂರು, ಸೆಪ್ಟೆಂಬರ್‌ 25: ಸುಪ್ರೀಂ ಕೋರ್ಟ್‌ ಆದೇಶದಂತೆ ತಮಿಳುನಾಡಿಗೆ ಪ್ರತಿದಿನ 5,000 ಕ್ಯೂಸೆಕ್ಸ್‌ ನೀರು ಹರಿಸುವುದನ್ನು ಖಂಡಿಸಿ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಸೇರಿದಂತೆ ಹಲವು ಸಂಘ ಸಂಸ್ಥೆಗಳು ಸೆಪ್ಟೆಂಬರ್‌ 26ರಂದು ಬೆಂಗಳೂರು ಬಂದ್‌ಗೆ ಕರೆ ನೀಡಿವೆ.

ಈ ಸಂಬಂಧ ಬೆಂಗಳೂರು ನಗರದಲ್ಲಿ ಸೆಪ್ಟೆಂಬರ್‌ 26ರಂದು ಮಂಗಳವಾರ ಯಾವ ಸೇವೆಗಳು ಲಭ್ಯವಿರುತ್ತದೆ ಹಾಗೂ ಯಾವ ಸೇವೆ ಇರಲ್ಲ ಎಂದು ತಿಳಿಯುವುದು ಅಗತ್ಯವಾಗಿದೆ. ನಾಳೆ ನಗರದ ಹಲವು ಕಾರ್ಯಕ್ರಮಗಳು ಸ್ಥಗಿತಗೊಳ್ಳುವ ನಿರೀಕ್ಷೆಯಿದೆ. ರಾಜ್ಯಾದ್ಯಂತ 175 ಕ್ಕೂ ಹೆಚ್ಚು ಗುಂಪುಗಳು ಬಂದ್‌ಗೆ ಬೆಂಬಲ ನೀಡಿದ್ದು, ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸುವ ರೈತ ಸಂಘಟನೆಗಳನ್ನು ಬೆಂಬಲಿಸುವುದಾಗಿ ಹೇಳಿಕೊಂಡಿವೆ.

Bengaluru Bandh: Know what services will be available tomorrow and what will not be available

ಕಾವೇರಿ ನೀರು ನಿಯಂತ್ರಣ ಸಮಿತಿಯ (ಸಿಡಬ್ಲ್ಯುಆರ್‌ಸಿ) ಶಿಫಾರಸಿನ ಮೇರೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ಇತ್ತೀಚೆಗೆ ತಮಿಳುನಾಡಿಗೆ 5,000 ಕ್ಯೂಸೆಕ್ ನೀರನ್ನು ಹೆಚ್ಚುವರಿ 15 ದಿನಗಳವರೆಗೆ ಬಿಡುವಂತೆ ಕರ್ನಾಟಕಕ್ಕೆ ಸೂಚನೆ ನೀಡಿದೆ. ತಮಿಳುನಾಡಿಗೆ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 26 ರಂದು ಕಾವೇರಿ ನೀರು ನಿಯಂತ್ರಣ ಸಮಿತಿಯ ನಂತರದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕರ್ನಾಟಕ ಸಚಿವ ಸಂಪುಟದ ಪ್ರಕಟಣೆ ತಿಳಿಸಿದೆ.

ಸೆಪ್ಟೆಂಬರ್ 26 ರಂದು ಬೆಂಗಳೂರಿನಲ್ಲಿ ಏನನ್ನು ತೆರೆಯಲಾಗುತ್ತದೆ ಮತ್ತು ಮುಚ್ಚಲಾಗುತ್ತದೆ ಎಂದು ತಿಳಿಯಿರಿ:

1. ಕ್ಯಾಬ್ ಸೇವೆಗಳು (ಓಲಾ, ಉಬರ್) ಇರಲ್ಲ: ಓಲಾ ಉಬರ್ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಅವರು ಕಾವೇರಿ ಪರ ಪ್ರತಿಭಟನೆಗೆ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ.

2. ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ ಸೇವೆ ವ್ಯತ್ಯಯ: ಬೆಂಗಳೂರು ಬಂದ್‌ಗೆ ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ ಬೆಂಬಲ ನೀಡಿದ್ದು, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಎರಡೂ ಸೇವೆಗಳು ಇರಲ್ಲ ಎಂದು ತಿಳಿದು ಬಂದಿದೆ.

3. ವಿಮಾನ ನಿಲ್ದಾಣ ಟ್ಯಾಕ್ಸಿ ಸೇವೆಗಳು ಇರುವುದಿಲ್ಲ ಎನ್ನಲಾಗಿದ್ದು, ಆದರೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನಿಯಮಿತವಾದ ನಮ್ಮ ಮೆಟ್ರೋ ಸೇವೆಗಳನ್ನು ಒದಗಿಸುವುದನ್ನು ಮುಂದುವರಿಸುವುದಾಗಿ ತಿಳಿಸಿದೆ.

4. ಶಾಲಾ-ಕಾಲೇಜುಗಳಿಗೆ ರಜೆ: ಕಾವೇರಿ ಪರ ಕಪ್ಪು ಪಟ್ಟಿ ಕಟ್ಟಿಕೊಂಡು ಬೆಂಬಲ ಸೂಚಿಸುವುದಾಗಿ ಖಾಸಗಿ ಶಾಲಾ-ಕಾಲೇಜುಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಹೇಳಿದ್ದು, ಹಲವು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿವೆ.

5. ರೆಸ್ಟೋರೆಂಟ್‌ಗಳು: ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘಗಳು ಬಂದ್‌ಗೆ ತಮ್ಮ ಬೆಂಬಲವನ್ನು ನೀಡಿವೆ ಮತ್ತು ಅವರು ತಮ್ಮ ಔಟ್‌ಲೆಟ್ ಅನ್ನು ಮುಚ್ಚುವುದಾಗಿ ಹೇಳಿವೆ.

6. ಆಸ್ಪತ್ರೆಗಳು: ಆಸ್ಪತ್ರೆಗಳು, ನರ್ಸಿಂಗ್ ಹೋಮ್‌ಗಳು, ಫಾರ್ಮಸಿಗಳು ಮತ್ತು ಸರ್ಕಾರಿ ಕಚೇರಿಗಳು ಅಗತ್ಯ ಸೇವೆಗಳಲ್ಲಿ ಲಭ್ಯವಿರುತ್ತವೆ.

7. ಚಿತ್ರಮಂದಿರಗಳು: ನಗರದಲ್ಲಿ ಚಿತ್ರಮಂದಿರಗಳು ಮುಚ್ಚುತ್ತವೆ.

ನಾಳೆ ಬೆಂಗಳೂರಿನಲ್ಲಿ ಲಭ್ಯವಿರುವ, ಲಭ್ಯವಿಲ್ಲದ ಸೇವೆಗಳ ಪಟ್ಟಿ

ಲಭ್ಯವಿರುವ ಸೇವೆಗಳು

1 ಆಸ್ಪತ್ರೆ
2 ಮೆಡಿಕಲ್‌ ಶಾಪ್‌ಗಳು
3 ತರಕಾರಿ ಅಂಗಡಿಗಳು
4 ದಿನಸಿ ಅಂಗಡಿಗಳು
5 ಮೆಟ್ರೋ
6 ಅಂಚೆ ಕಚೇರಿ

ಲಭ್ಯವಿಲ್ಲದಿರುವ ಸೇವೆಗಳು

1 ಸರ್ಕಾರಿ ಬಸ್‌, ಖಾಸಗಿ ಬಸ್‌
2 ಬಿಎಂಟಿಸಿ ಬಸ್‌
3 ಹೋಟೆಲ್‌ಗಳು
4 ಕೆಲವು ಕೈಗಾರಿಕೆಗಳು
5 ಶಾಲೆ, ಕಾಲೇಜು
6 ಐಟಿ ಕಂಪೆನಿಗಳು (ವರ್ಕ್‌ ಫ್ರಮ್‌ ಹೋಂ ಸಾಧ್ಯತೆ)
7 ಆಟೋ ರಿಕ್ಷಾ
8 ಕ್ಯಾಬ್‌ (ಓಲಾ, ಉಬರ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+