ಮೆಟ್ರೋಗಳಿಗೆ ಇನ್ನು ಮೀಟರ್‌ ದರದಲ್ಲೇ ಓಡಲಿವೆ ಬೆಂಗಳೂರು ಆಟೋಗಳು

ಬೆಂಗಳೂರು, ಜುಲೈ 14: ಬೆಂಗಳೂರು ನಗರದಾದ್ಯಂತ ಮೆಟ್ರೋ ನಿಲ್ದಾಣಗಳಿಗೆ ಆಟೋ ರಿಕ್ಷಾಗಳು ಶೀಘ್ರದಲ್ಲೇ ಮೀಟರ್ ದರದಲ್ಲಿ ಚಲಿಸಲಿವೆ ಎಂದು ಡಿಎಚ್‌ ವರದಿ ಮಾಡಿದೆ.

ಈ ಆಟೋ ರಿಕ್ಷಾಗಳು ONDC ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸುವ MetroMitra ಹೆಸರಿನ ಅಪ್ಲಿಕೇಶನ್ ಮೂಲಕ ಬಾಡಿಗೆ ಓಡಿಸುತ್ತವೆ. ತಂತ್ರಜ್ಞಾನ ಮತ್ತು ಪಿಕಪ್ ವೆಚ್ಚಗಳನ್ನು ಸರಿದೂಗಿಸಲು ಫ್ಲಾಟ್ ರೂ 10 ಶುಲ್ಕದೊಂದಿಗೆ ಮೀಟರ್ ದರವನ್ನು ವಿಧಿಸುತ್ತವೆ. ಇದನ್ನು ಬಹುಶಃ ಆಗಸ್ಟ್ 15 ರಂದು ARDU ಪ್ರಾರಂಭಿಸಲಿದೆ ಎಂದು ಆಟೋ ರಿಕ್ಷಾ ಚಾಲಕರ ಒಕ್ಕೂಟದ (ಎಆರ್‌ಡಿಯು) ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ತಿಳಿಸಿದ್ದಾರೆ.

Bengaluru autos will now run at metered rates to metro stations

B PAC ಮತ್ತು WRI ಇಂಡಿಯಾ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ರುದ್ರಮೂರ್ತಿ ಮಾತನಾಡಿ, ನಾವು ಈಗ ಪ್ರಾಯೋಗಿಕ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದೇವೆ. ಆಟೋ ಚಾಲಕರಿಗೆ ವೃತ್ತಿಪರರಾಗಿ ತರಬೇತಿ ನೀಡುತ್ತಿದ್ದೇವೆ. #Personal2Public ಅಭಿಯಾನವನ್ನು ಪ್ರಾರಂಭಿಸಲಾಗಿದೆ. ವಾರಕ್ಕೆ ಎರಡು ಬಾರಿ ಸಾರ್ವಜನಿಕ ಸಾರಿಗೆಯ ಮೂಲಕ ಪ್ರಯಾಣಿಸಬೇಕೆಂದು ಕೋರಿದರು.

BMRCL WhatsApp ಚಾಟ್‌ಬಾಟ್‌ನೊಂದಿಗೆ MetroMitra ಸೇವೆಗಳನ್ನು ಸಂಯೋಜಿಸಲು ARDU BMRCL ನೊಂದಿಗೆ ಮಾತುಕತೆ ನಡೆಸುತ್ತಿದೆ ಮತ್ತು ಅದರ ಮೂಲಕ ಆಟೋರಿಕ್ಷಾ ಸೇವೆ ಪಡೆಯಲು ಗ್ರಾಹಕರಿಗೆ ಅನುವು ಮಾಡಿಕೊಡುತ್ತದೆ.

ತಂತ್ರಜ್ಞಾನ ಒದಗಿಸಿರುವ ಅಗ್ನಿಭು ಟೆಕ್ನಾಲಜೀಸ್ ಮತ್ತು ARDU ನಡುವಿನ ಚರ್ಚೆಯನ್ನು ಮಾಡಿದ ನಗರ ಚಲನಶೀಲ ತಜ್ಞ ಸತ್ಯ ಅರಿಕುತರಮ್, ಸೇವೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸಿ, "ಮೆಟ್ರೋ ಪ್ರಯಾಣಿಕರು BMRCL WhatsApp ಚಾಟ್‌ಬಾಟ್ ಮೂಲಕ ಮೆಟ್ರೋ ಟಿಕೆಟ್ ಖರೀದಿಸಿದರೆ, ಅವರು ನಿಲ್ದಾಣಕ್ಕೆ ಮತ್ತು ಅವರ ಗಮ್ಯಸ್ಥಾನದಿಂದ ಹೋಗಲು ಆಟೋ ಬೇಕೇ ಎಂದು ಕೇಳುವ ಪಾಪ್-ಅಪ್ ಅವರಿಗೆ ಬರುತ್ತದೆ. ಒಪ್ಪಿಗೆ ನೀಡಿದರೆ ಲೊಕೇಶನ್‌ ಶೇರ್‌ ಮಾಡಿ ಆಟೊ ನಿಗದಿಪಡಿಸಲಾಗುವುದು ಎಂದು ತಿಳಿಸಿದರು.

ಸೇವೆಗೆ ಸೈನ್ ಅಪ್ ಮಾಡುವ ಪ್ರತಿಯೊಂದು ಆಟೋದಲ್ಲಿ ನಿಮ್ಮ ರುಜುವಾತುಗಳನ್ನು ತಿಳಿಯಿರಿ ಎಂಬ ಶೀರ್ಷಿಕೆಯ QR ಕೋಡ್‌ಗಳನ್ನು ಪ್ರದರ್ಶಿಸಲು ಒಕ್ಕೂಟವು ಯೋಜಿಸುತ್ತಿದೆ. ಅಲ್ಲಿ ಗ್ರಾಹಕರು ಚಾಲಕನ ವಿವರಗಳನ್ನು ಪರಿಶೀಲಿಸಬಹುದು. ಇದು ಗ್ರಾಹಕರಿಗೆ ತಕ್ಷಣ ಸಮಸ್ಯೆಗಳನ್ನು ಸರಿಮಾಡಲು ಅಥವಾ ಸವಾರಿಯ ಬಗ್ಗೆ ಯಾವುದೇ ವಿಮರ್ಶೆ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಸತ್ಯ ಹೇಳಿದರು.

ಒಂದೆರಡು ವಾರಗಳಲ್ಲಿ ನಗರದ ದಕ್ಷಿಣ ಭಾಗದಲ್ಲಿರುವ ಕೆಲವು ಮೆಟ್ರೋ ನಿಲ್ದಾಣಗಳಲ್ಲಿ MetroMitra ಬೀಟಾ ಪರೀಕ್ಷೆಗೆ ಒಳಗಾಗಲಿದೆ. ಈ ಕೊನೆಯ ಮೈಲಿ ಪರಿಹಾರದ ಭಾಗವಾಗಲು ಬಯಸುವ ಆಟೋರಿಕ್ಷಾ ಚಾಲಕರು ನೇರವಾಗಿ ARDU ಅನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು.

ಮೆಟ್ರೋಮಿತ್ರದ ಉಪಯೋಗ

ಎ. ಮೊದಲ ಮತ್ತು ಕೊನೆಯ ಮೈಲಿ: ಆಟೋ-ರಿಕ್ಷಾ ಮೆಟ್ರೋ ನಿಲ್ದಾಣಗಳಿಗೆ ಮತ್ತು ಮನೆಯಿಂದ ಹೊರಡುತ್ತದೆ.

ಬಿ. ತಂತ್ರಜ್ಞಾನ ಮತ್ತು ಪಿಕ್-ಅಪ್ ವೆಚ್ಚಗಳಿಗಾಗಿ ರೂ 10 ನೊಂದಿಗೆ ಮೀಟರ್ ಆಧಾರಿತ ದರಗಳು ವಿಧಿಸಲ್ಪಡುತ್ತದೆ.

ಸಿ. ತರಬೇತಿ ಪಡೆದ, ಸಂವೇದನಾಶೀಲತೆ ಮತ್ತು ನಿಗದಿತ ಸಮಯಕ್ಕೆ ಬರುವ ವೃತ್ತಿಪರ ಚಾಲಕರು.

ಡಿ. ಚಾಲಕರಿಗೆ QR ಕೋಡ್ ಆಧಾರಿತ ನೇರ ಪ್ರತಿಕ್ರಿಯೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+