Trend: ಒಳ್ಳೆಯ ವಿಷಯಕ್ಕೆ ಬೆಂಗಳೂರು "ಆಟೋ ಡ್ರೈವರ್‌" ಟ್ರೆಂಡ್, ಇದರಲ್ಲೂ ತಪ್ಪು ಹುಡ್ಕೋದಾ

ಬೆಂಗಳೂರಿನ ಆಟೋರಿಕ್ಷಾ ಚಾಲಕರೊಬ್ಬರು ತಮ್ಮ ಸ್ಮಾರ್ಟ್‌ ವಾಚ್‌ನ ಮೂಲಕ ಕ್ಯೂ ಆರ್‌ಕೋಡ್‌ ಬಳಸಿ ಹಣ ಸ್ವೀಕರಿಸುತ್ತಿರುವ ವಿಡಿಯೋ ಹಾಗೂ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಆದರೆ, ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎನ್ನುವಂತೆ ಕೆಲವರು ಇದರಲ್ಲೂ ತಪ್ಪುಗಳನ್ನು ಹುಡುಕುತ್ತಿದ್ದಾರೆ. ಟೆಕ್ನಾಲಜಿ ಎಷ್ಟು ಮುಂದುವರಿದಿದೆ ಎನ್ನುವುದಕ್ಕೆ ಬೆಂಗಳೂರಿನ ಆಟೋ ರಿಕ್ಷಾದ ಚಾಲಕ ಸಾಕ್ಷಿ ಎಂದು ಶನಿವಾರ ಈ ಪೋಸ್ಟ್‌ ವೈರಲ್ ಆದಾಗಿನಿಂದಲೂ ಚರ್ಚೆಯಾಗುತ್ತಿದೆ.

ಈ ಪೇ ನಡೆಯುತ್ತಾ ಅಂತ ಪ್ರಶ್ನೆ: ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಿಂದಿ ಹಾಗೂ ಕನ್ನಡ ಭಾಷೆಯ ಬಗ್ಗೆ ಚರ್ಚೆ, ವಾದ - ವಿವಾದದ ಸುದ್ದಿಗಳನ್ನು ನೀವು ಕೇಳಿಯೇ ಇರುತ್ತೀರಿ. ಕನ್ನಡ ಭಾಷೆಯೇ ಕರ್ನಾಟಕದಲ್ಲಿ ಸಾರ್ವಭೌಮ ಕನ್ನಡವನ್ನು ಬಳಸಿ ಎಂದು ಹೇಳುತ್ತಿದ್ದರೂ, ಕೆಲವರು ಹಿಂದಿ ಭಾಷೆ ಚಾಲ್ತಾ ಹೈ, ಹಿಂದಿ ರಾಷ್ಟ್ರ ಭಾಷೆ ಅನ್ನೋದನ್ನು ಕೇಳಿರುತ್ತೀರ. ಇದೀಗ ಬೆಂಗಳೂರಿನ ಆಟೋ ಚಾಲಕ ಡಿಜಿಟಲ್‌ ಅಪ್ಡೇಟ್‌ ಆಗಿರುವುದು ಸಾಕಷ್ಟು ವೈರಲ್‌ ಆಗಿದೆ. ಇದಕ್ಕೆ ಕರ್ನಾಟಕ ಮಾತ್ರವಲ್ಲ ಭಾರತದಾದ್ಯಂತ ಈ ವಿಡಿಯೋ ಪೋಟೋ ಸಾಕಷ್ಟು ವೈರಲ್‌ ಆಗಿದೆ. ಜನ ಈ ಪೋಟೋಗೆ ಫಿದಾ ಆಗಿದ್ದಾರೆ. ಆದರೆ, ಕೆಲವರು ಇದರಲ್ಲೂ ಕೂಹಕವಾಡುವುದು ಮುಂದುವರಿಸಿದ್ದಾರೆ. ಈ ಪೋಟೋದಲ್ಲಿ ಇರುವ "ಪೇ" ಎನ್ನುವ ಅಕ್ಷರ ಹಿಂದಿಯದ್ದು, ಬೆಂಗಳೂರಿನಲ್ಲಿ ಈ ರೀತಿಯ ಪೇ ನಡೆಯುತ್ತಾ ಎಂದು ಕೆಲವು ಕೇಳಿದ್ದಾರೆ. ಇದಕ್ಕೆ ಜನ ಸರಿಯಾಗಿಯೇ ಜಾಡಿಸಿದ್ದಾರೆ. ಇನ್ನು ಕೆಲವರು ಆಟೋ ಅಣ್ಣ ಇದರಲ್ಲಿ ಕನ್ನಡ ಕಾಣಿಸುತ್ತಿಲ್ಲ ಎಂದು ಆಟೋ ಡ್ರೈವರ್ ಕಾಲೆಳೆದಿದ್ದಾರೆ. ಆದರೆ, ಈ ಕಾಮೆಂಟ್‌ಗಳಿಗೆ ಕನ್ನಡಿಗರು ಸಹ ತೀಕ್ಷಣವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

Bengaluru auto driver anna trend some are finding fault with this too

ಏನಿದು ವಾಚ್ ಕ್ಯೂಆರ್‌ ಕೋಡ್‌: ಜನರ ರಿಯಾಕ್ಷನ್‌ ಹೆಂಗಿದೆ

ಬೆಂಗಳೂರಿನ ಆಟೋ ರಿಕ್ಷಾ ಡ್ರೈವರ್‌ ಒಬ್ಬರು ಗ್ರಾಹಕರಿಂದ ಹಣ ಪಡೆಯಲು ತಮ್ಮ ಸ್ಮಾರ್ಟ್‌ ವಾಚ್‌ನಲ್ಲಿದ್ದ ಕ್ಯೂಆರ್‌ ಕೋಡ್‌ ತೋರಿಸಿದ್ದರು. ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ಗ್ರಾಹಕರು ಆಟೋ ಡ್ರೈವರ್‌ಗೆ ದುಡ್ಡು ಕೊಟ್ಟಿದ್ದರು. ಈ ವೇಳೆ ಆಟೋ ಪ್ರಯಾಣಿಕರು ತೆಗೆದಿದ್ದ ಪೋಟೋ ಭಾರೀ ವೈರಲ್‌ ಆಗಿತ್ತು. ದೇಶದಾದ್ಯಂತ ಈ ಪೋಟೋಗೆ ಭಾರೀ ಮೆಚ್ಚುಗೆಯೂ ಸಹ ವ್ಯಕ್ತವಾಗಿತ್ತು. ಇದಾದ ನಂತರ ಬೆಂಗಳೂರು #peakBengaluru move ಎನ್ನುವುದು ಸೋಷಿಯಲ್‌ ಮೀಡಿಯಾದಲ್ಲಿ ಟ್ರೈಂಡ್‌ ಸೃಷ್ಟಿ ಮಾಡಿತ್ತು. ನಿಜವಾದ ಟ್ರೆಂಡ್‌ ಎಂದರೆ ಇದು. ಬೆಂಗಳೂರನ್ನು ಟೆಕ್‌ ಸಿಟಿ ಎಂದು ಯಾಕೆ ಕರೆಯುತ್ತಾರೆ ಎನ್ನುವುದಕ್ಕೆ ಇದೇ ಕಾರಣ. ಈ ಆಟೋ ಡ್ರೈವರ್‌ ತುಂಬಾ ಸ್ಮಾರ್ಟ್‌ ಆಗಿದ್ದಾರೆ. ಇದು ಡಿಜಿಟಲ್‌ ಇಂಡಿಯಾದ ಬೆಳವಣಿಗೆ, ಇದರ ಮೂಲಕ ನಾವು ಬೆಂಗಳೂರು ಯಾಕೆ ಟೆಕ್‌ ನಗರ ಎಂದು ತಿಳಿದುಕೊಳ್ಳಬಹುದು ಎಂದು ಸಹ ಹೇಳಿದ್ದರು. ಈ ರೀತಿ ಮೆಚ್ಚುಗೆಯ ಮಾತುಗಳೇ ಹೆಚ್ಚಾಗಿ ಕೇಳಿ ಬರುತ್ತಿರುವ ನಡುವೆ ಅಲ್ಲಲ್ಲಿ ಕೆಲವರು ಈ ವಿಷಯವನ್ನು ಸಹ ವಿವಿಧ ವಿಷಯದೊಂದಿಗೆ ಲಿಂಕ್‌ ಮಾಡಿ ಟ್ರೋಲ್‌ ಮಾಡುತ್ತಿದ್ದು, ಬೇರೆಯದೇ ಚರ್ಚೆ ಮಾಡುತ್ತಿದ್ದಾರೆ.

ನೀವು ಹಿಂದಿಯಲ್ಲಿ ಮಾತಾಡಲು ಪ್ರಾರಂಭಿಸುತ್ತಿದ್ದಂತೆಯೇ ಅವರು (ಆಟೋ ಡ್ರೈವರ್)‌ ಈ ಎಲ್ಲ ಟೆಕ್‌ ಸೌಲಭ್ಯಗಳನ್ನು ಮರೆತು ಬಿಡುತ್ತಾರೆ ಎಂದು ವಿಪುಲ್‌ ಗೌತಮ್ ಎನ್ನುವ ವ್ಯಕ್ತಿ ಕಾಮೆಂಟ್‌ ಮಾಡಿದ್ದಾರೆ. ಆದರೆ, ಶೇಕಡ 90ಕ್ಕೂ ಹೆಚ್ಚು ಜನ ಆಟೋ ಡ್ರೈವರ್‌ ಅಣ್ಣ ಮಾಸ್‌ ಬಿಡಿ ನೀವು ಅಂತಲೇ ಅಂದಿದ್ದಾರೆ. ಹೀಗಾಗಿ, ಇನ್ನುಳಿದ ಶೇ 10 ಜನರಷ್ಟು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಅಲ್ಲದೇ ಬಹಳಷ್ಟು ದಿನಗಳ ನಂತರ ಬೆಂಗಳೂರಿನ ಆಟೋ ಡ್ರೈವರ್‌ ಬಗ್ಗೆ ಒಳ್ಳೆಯ ಕಾರಣಕ್ಕೆ ಟ್ರೆಂಡ್‌ ಆಗ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+