ಉದ್ಘಾಟನೆಗೂ ಮುನ್ನವೇ ಬೆಂಗಳೂರಿನ ಹೊಸೂರು ಬಳಿಯಿರುವ 18 ಮಹಡಿಗಳ ಅಪಾರ್ಟ್‌ಮೆಂಟ್ ನೆಲಸಮಕ್ಕೆ ನಿರ್ಧಾರ

Bengaluru Apartment: ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಬರುವ ಕೂಡ್ಲು ಗೇಟ್‌ ಬಳಿಯ 18 ಮಹಡಿಗಳ ಬೃಹತ್ ಅಪಾರ್ಟ್‌ಮೆಂಟ್ ವಾಲಿದ್ದು, ಇಲ್ಲಿನ ಸ್ಥಳೀಯರು ಆತಂಕ್ಕೆ ಒಳಗಾಗಿದ್ದರು. ಇದೀಗ ಇದನ್ನು ಮುಂಜಾಗ್ರತಾ ಕ್ರಮವಾಗಿ ನೆಲಸಮ ಮಾಡಲು ನಿರ್ಧರಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಗ್ರೇಟರ್ ಬೆಂಗಳೂರು ಪ್ರಾಧಿಕಾದಿಂದ ವಾಸಯೋಗ್ಯ ಪ್ರಮಾಣಪತ್ರ ಪಡೆದುಕೊಂಡ ಕೇವಲ ಮೂರು ತಿಂಗಳಲ್ಲಿ ಈ 18 ಮಹಡಿಗಳ ಬೃಹತ್ ಅಪಾರ್ಟ್‌ಮೆಂಟ್ ವಾಲಿದೆ. ಇದರಿಂದ ಸ್ಥಳೀಯರು ಆತಂಕ್ಕರ ಒಳಗಾಗಿದ್ದು, ನೆಲಸಮ ಮಾಡಲು ಬಿಲ್ಡರ್ ನಿರ್ಧರಿಸಿದ್ದಾರೆ. ಇದು ಎಸ್‌ಎನ್‌ಎನ್‌ ರಾಜ್ ಎಟರ್ನಿಯಾ ಕಾಂಪ್ಲೆಕ್ಸ್ ಎಂಬ ಹೆಸರಿನ ಅಪಾರ್ಟ್‌ಮೆಂಟ್‌ ಇದಾಗಿದೆ.

ಖರೀದಿದಾರರು ತಮ್ಮ ಕನಸಿನ ಮನೆಗಳಿಗೆ ಗೃಹಪ್ರವೇಶ ಮಾಡುವ ಮುನ್ನವೇ ಕಟ್ಟಡವು ಒಂದು ಬದಿಗೆ ವಾಲಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದರ ನಿರ್ಮಾಣಕ್ಕೆ ನಾಲ್ಕು ವರ್ಷಗಳ ಕಾಲ ಸಮಯ ತೆಗೆದುಕೊಳ್ಳಲಾಗಿತ್ತು.

Bengaluru Apartment Tilts Within 3 Months of OC Builder to Demolish 18-Storey Tower Near Kudlu Gate

ಈ ಅಪಾರ್ಟ್‌ಮೆಂಟ್‌ನಲ್ಲಿ ಮನೆಗಳ ಸಂಖ್ಯೆ

18 ಮಹಡಿಗಳ ಬೃಹತ್ ಅಪಾರ್ಟ್‌ಮೆಂಟ್‌ನಲ್ಲಿ ಒಟ್ಟು 49 ವಾಸದ ಮನೆಗಳಿದ್ದವು. ಇಡೀ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ 15 ಟವರ್‌ಗಳಿದ್ದು, ಒಟ್ಟು 972 ಫ್ಲ್ಯಾಟ್‌ಗಳಲ್ಲಿ 822 ಫ್ಲ್ಯಾಟ್‌ಗಳನ್ನು ಈಗಾಗಲೇ ಗ್ರಾಹಕರಿಗೆ ಹಸ್ತಾಂತರಿಸಲಾಗಿದೆ. ಇದರಲ್ಲಿ ಒಂದು ಮಾತ್ರ ವಾಲಿದ್ದು, ಬಾಕಿ ಉಳಿದ 14 ಟವರ್‌ಗಳು ಸಂಪೂರ್ಣ ಸುರಕ್ಷಿತವಾಗಿವೆ ಎಂದು ತಿಳಿದುಬಂದಿದೆ.

ಮರುನಿರ್ಮಾಣ ಮಾಡುವ ಯೋಜನೆ

ಬಿಲ್ಡರ್‌ಗಳು ಈ ಟವರ್ ಅನ್ನು ಮುಂದಿನ 6 ತಿಂಗಳಲ್ಲಿ ಹಂತ-ಹಂತವಾಗಿ ಕೆಡವಿ ಮುಂಬರುವ 2 ವರ್ಷಗಳಲ್ಲಿ ಸಂಪೂರ್ಣವಾಗಿ ಹೊಸದಾಗಿ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಈ ಕುರಿತು ಜಿಬಿಎ ಮುಖ್ಯ ಆಯುಕ್ತರಿಗೆ ಪತ್ರ ಬರೆದಿರುವ ಬಿಲ್ಡರ್‌ಗಳು, ಕಟ್ಟಡ ನೆಲಸಮ ಮಾಡಲು ಅನುಮತಿ ಕೋರಿರುವ ಜೊತೆಗೆ ನೀಡಲಾಗಿದ್ದ ಆಕ್ಯುಪೆನ್ಸಿ ಸರ್ಟಿಫಿಕೇಟ್ ಅನ್ನು ರದ್ದುಗೊಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಅಪಾರ್ಟ್‌ಮೆಂಟ್‌ ವಾಲಲು ಪ್ರಮುಖ ಕಾರಣ ಏನು?

ಆರಂಭದಲ್ಲಿ ಮಣ್ಣಿನ ಪರೀಕ್ಷೆ ಮಾಡಿದ್ದ ಸಂಸ್ಥೆಯು ಪ್ರಮುಖ ವರದಿಗಳನ್ನು ಅದಲು-ಬದಲು ಮಾಡಿದ್ದರಿಂದ ಈ ಸಮಸ್ಯೆ ಎದುರಾಗಿದೆ ಎಂದು ತಿಳಿದುಬಂದಿದೆ. ಹಸ್ತಾಂತರಕ್ಕೂ ಮುನ್ನ ಬಿಲ್ಡರ್‌ಗಳು ನಡೆಸಿದ ವಾಟರ್ ಲೋಡ್ ಟೆಸ್ಟ್ ವೇಳೆ ಕಟ್ಟಡ ವಾಲುವುದು ಹಾಗೂ ತಳಭಾಗ ಕುಸಿಯುತ್ತಿರುವುದು ಪತ್ತೆಯಾಗಿದೆ. ಪ್ರಸ್ತುತ ಕಟ್ಟಡವು ಹೊರನೋಟಕ್ಕೆ ಸುರಕ್ಷಿತವಾಗಿ ಕಂಡರೂ ಮುಂದಿನ 10-15 ವರ್ಷಗಳಲ್ಲಿ ಅಪಾಯ ಎದುರಾಗುವ ಸಾಧ್ಯತೆಯಿದೆ ಎನ್ನಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಪೂರ್ಣವಾಗಿ ಕೆಡವಿ ಮತ್ತೆ ಕಟ್ಟಲು ನಿರ್ಧರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+