BLR Airport: ಪ್ರಯಾಣಿಕರಿಗೆ ಗುಡ್‌ನ್ಯೂಸ್: ಎರಡು ಟರ್ಮಿನಲ್‌ಗಳಲ್ಲಿ ಹೊಸ ಸೌಲಭ್ಯ ಪರಿಚಯ
ಬೆಂಗಳೂರು, ಫೆಬ್ರವರಿ 19: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ದಿನೇ ದಿನೆ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದೆ. ಇಲ್ಲಿನ ಎರಡು ಟರ್ಮಿನಲ್‌ಗಳಿಂದಲೂ ದೇಶಿಯ ಮತ್ತು ಅಂತಾರಾಷ್ಟ್ರೀಯ ವಿಮಾನ ಕಾರ್ಯಾಚರಣೆ ನಡೆಸಲಾಗುತ್ತವೆ. ಈ ಎರಡು ಟರ್ಮಿನಲ್‌ಗಳಲ್ಲಿ ವಿಶೇಷ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ.
ಸೌಲಭ್ಯವು ಟರ್ಮಿನಲ್ 1 ರಲ್ಲಿನ 080 ಲಾಂಜ್ ಮತ್ತ ಟರ್ಮಿನಲ್ 2 ಈ ವಿಶೇಷತೆಗಳು ಲಭ್ಯವಿದೆ. ವಿವಿಧ ಮಾದರಿಗಳಿಂದ ಸ್ಪೂರ್ತಿ ಪಡೆದು ಈ ಟರ್ಮಿನಲ್‌ಗಳಲ್ಲಿ ವಿಶಿಷ್ಟತೆಗಳನ್ನು ರೂಪಿಸಲಾಗಿದೆ. ಈ ಏರ್‌ಪೋರ್ಟ್‌ನ ಟರ್ಮಿನಲ್‌ಗಳು ನಿತ್ಯ 1,15,000 ಪ್ರಯಾಣಿಕರ ಓಡಾಟಕ್ಕೆ ಸಾಕ್ಷಿಯಾಗಿವೆ. ಇಲ್ಲಿಂದ ಸುಮಾರು 90,000 ದೇಶೀಯ ವಿಮಾನಯಾನ ಪ್ರಯಾಣಿಕರು, ಉಳಿದವರು ಅಂತಾರಾಷ್ಟ್ರೀಯ ವಿಮಾನಯಾನ ಪ್ರಯಾಣಿಕರಾಗಿದ್ದಾರೆ.

ಬೆಂಗಳೂರು ಮತ್ತು ಕರ್ನಾಟಕದ ಇತರ ಪ್ರಮುಖ ಪ್ರದೇಶಗಳಿಂದ ಸ್ಫೂರ್ತಿ ಪಡೆದು ಇಲ್ಲಿ ಒಂದಷ್ಟು ವಿನ್ಯಾಸಗಳನ್ನು ಮಾಡಲಾಗಿದೆ. ಈ ಮೂಲಕ ದೇಶೀಯ ವಿಮಾನಯಾನ ಸಂಸ್ಥೆಗಳು ಹಾಗೂ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಭಾರತದ ವೈವಿಧ್ಯಮಯ ಪರಂಪರೆಗೆ ಗೌರವ ಸಲ್ಲಿಸುತ್ತಿವೆ ಎಂದು ಹೇಳಲಾಗಿದೆ.
ಏರ್‌ಪೋರ್ಟ್ ಲಾಂಡ್‌ನಲ್ಲಿ ಏನೆಲ್ಲ ಇದೆ?
ಕೆಐಎ ಈ ಟರ್ಮಿನಲ್‌ಗಳಲ್ಲಿ ಗಂಗಾ ಘಾಟ್‌ಗಳಿಂದ ಸ್ಪೂರ್ತಿ ಪಡೆದ 'ಬನ್ಯನ್ ಬೈ ದಿ ರಿವರ್' ನಿಂದ ಗ್ರೇಟ್ ನಿಕೋಬಾರ್ ದ್ವೀಪಗಳಿಂದ ಪ್ರೇರಿತವಾದ 'ನಿಕೋಬಾರ್ ಲೌಂಜ್' ವರೆಗೆ ಆರು ವಿಭಿನ್ನ ವೈಶಿಷ್ಟ್ಯತೆಗಳನ್ನು ಮಾಡಲಾಗಿದೆ. ಕಾಶ್ಮೀರಿ ಥೀಮ್ ಸಹ ಇಲ್ಲಿದೆ.
ಇಲ್ಲಿ ವಾಲ್ನಟ್ ಮರದಿಂದ ಮಾಡಿದ ಭವ್ಯವಾದ ಬಾಗಿಲನ್ನು ವಿಶೇಷ ವಿನ್ಯಾಸದಲ್ಲಿ ರಚಿಸಲಾಗಿದೆ. ಇದು ತೆರೆದುಕೊಳ್ಳುವ ರೀತಿ ನೋಡುಗರಿಗೆ ಅದ್ಭುತವೆನಿಸುತ್ತದೆ. ಕಾಶ್ಮೀರಿ ಥೀಮ್‌ನಲ್ಲಿ ನಿರ್ಮಿಸಲಾಗಿದೆ. ಟರ್ಮಿನಲ್ ಮತ್ತೊಂದು ಬದಿಯಲ್ಲಿ ಗುಲಾಬಿ ಮೊಗ್ಗುಗಳ ಆಕಾರದ ರೂಪಕವಿದೆ.
ಟಿ2 ಮತ್ತೊಂದು ಮೂಲೆಯಲ್ಲಿ ಖತಂಬಂಡ್‌ನಿಂದ ಅಲಂಕರಿಸಲ್ಪಟ್ಟ ಜ್ಯಾಮಿತೀಯ ಮಾದರಿಗಳಲ್ಲಿ ಸಣ್ಣ ಮರದ ತುಂಡುಗಳನ್ನು ಒಟ್ಟಿಗೆ ಜೋಡಿಸಲಾಗಿದೆ. ಇದೊಂದು ಸಣ್ಣ ಸಂಕೀರ್ಣ ಆಕಾರದಲ್ಲಿ ಸೀಲಿಂಗ್ ವಿನ್ಯಾಸದಲ್ಲಿ ರಚಿಸಲಾಗಿದೆ. ಇದೊಂದು ಕಾಶ್ಮೀರಿ ಕಲಾ ಪ್ರಕಾರವಾಗಿದೆ. T2 ಶಾಲಿಮಾರ್ ಲಾಂಜ್‌ನಲ್ಲಿ ಹೊಸ ವಿನ್ಯಾಸವು 2023 ರಿಂದಲೇ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ.
ಮರದಿಂದ ರಚಿತವಾಗಿ ಕಲಾಕೃತಿಗಳು, ಪ್ರಮುಖ ದ್ವಾರಗಳು ಇಲ್ಲಿವೆ. ಸೆವೆನ್ ಸಿಸ್ಟರ್ಸ್ ಟೀ ರೂಮ್‌ನಲ್ಲಿರುವ 'ವಿಶಿಂಗ್ ಟ್ರೀ' ಗಾಜಿನ ಕಿತ್ತಳೆ ಮತ್ತು ಎಲೆಗಳು, 'ಬನ್ಯನ್ ಬೈ ದಿ ರಿವರ್' ವಿಭಾಗದಲ್ಲಿ ತೂಗಾಡುತ್ತಿರುವ ವರ್ಣವೈವಿಧ್ಯದ ಗಾಜಿನ ಬಟ್ಟಲು ಇವೆ. 'ಬನ್ಯನ್ ಟ್ರೀ' ಜೊತೆಗೆ ನಿಕೋಬಾರ್ ಲೌಂಜ್‌ನಲ್ಲಿರುವ 'ಸ್ಕೂಲ್ ಆಫ್ ಫಿಶ್ ಟ್ರೀ' ಪ್ರಯಾಣಿಕರ ಗಮನ ಸೆಳೆಯುತ್ತದೆ.
ಟಿ2ನಲ್ಲಿ ಹೊಸ ಹೋಟೆಲ್
ಟರ್ಮಿನಲ್ 2ನಲ್ಲಿ ಮುಂದಿನ ಆರೇಳು ವಾರಗಳಲ್ಲಿ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು 080 ಟ್ರಾನ್ಸಿಟ್ ಹೋಟೆಲ್ ಆರಂಭ ಮಾಡಲಾಗುತ್ತಿದೆ. ಇದೆಲ್ಲವುಗಳು ಬೆಂಗಳೂರಿಗೆ ಬರುವ ಪ್ರವಾಸಿಗರಿಗೆ, ಪ್ರಯಾಣಿಕರಿಗೆ ರೋಮಾಂಚಕಲಕಾರಿ ಅನುಭವ ನೀಡುತ್ತದೆ. ರೇಷ್ಮೆ ಕೋಕೂನ್ ಹೋಲುವಂತೆ 29 ಕೊಠಡಿಗಳನ್ನು ವಿನ್ಯಾಸಗೊಳಿಸಲಾಗಿದೆ. ಇದು ಪ್ರಯಾಣಿಕರಿಗೆ ಇಷ್ಟವಾಗಲಿವೆ.
ಟರ್ಮಿನಲ್ 1ರಲ್ಲಿನ ಲೌಂಜ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಕಳೆದ ಒಂದು ತಿಂಗಳಲ್ಲಿ, ಒಂದು ಟೀ ಲೌಂಜ್, ಸ್ಪೋರ್ಟ್ಸ್ ಬಾರ್, ಮತ್ತು ಸ್ಪಾ ಮತ್ತು ಸಲೂನ್ ಸೌಲಭ್ಯಗಳನ್ನು ಒದಗಿಸಲಾಗಿದೆ.












Click it and Unblock the Notifications