• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಎಂಟಿಸಿಯ 9 ಸಿಬ್ಬಂದಿಗೆ ಕೊರೊನಾ ಸೋಂಕು ದೃಢ: ಹೆಚ್ಚಿದ ಆತಂಕ

|

ಬೆಂಗಳೂರು, ಜೂನ್ 20: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ 9 ಮಂದಿ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಭಯದಿಂದಲೇ ಬಸ್ ಹತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ಲಾಕ್‌ಡೌನ್ ಸಡಿಲಗೊಂಡು ಬಿಎಂಟಿಸಿ ಬಸ್ ಸಂಚಾರ ಪುನರಾರಂಭಗೊಂಡ ಸಂದರ್ಭದಲ್ಲಿ ಟಿಕೆಟ್ ಬದಲು, ದಿನ, ವಾರದ ಪಾಸುಗಳನ್ನು ಮಾತ್ರ ನೀಡುತ್ತಿತ್ತು.

ಆದರೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಟಿಕೆಟ್ ನೀಡಲು ಆರಂಭಿಸಿತ್ತು. ಬಳಿಕ ಟಿಕೆಟ್ ನೀಡುವುದು, ಹಣ ಪಡೆಯುವುದು, ಚಿಲ್ಲರೆ ನೀಡುವುದು ಹೀಗೆ ಅನೇಕ ಪ್ರಕ್ರಿಯೆಗಳಿಂದಾಗಿ ಕೊರೊನಾ ಸೋಂಕಿಗೆ ಒಳಗಾಗುತ್ತಿದ್ದಾರೆ.

ನಗದು ವಹಿವಾಟು ಕಡಿಮೆ ಮಾಡಲು ಡಿಜಿಟಲ್ ಟಿಕೆಟಿಂಗ್(ಕ್ಯೂಆರ್ ಕೋಡ್) ವ್ಯವಸ್ಥೆಯನ್ನು ಸಹ ಬಿಎಂಟಿಸಿ ಜಾರಿಗೆ ತಂದಿದೆ. ಇದನ್ನು ಪ್ರಯಾಣಿಕರು ಬಳಸುತ್ತಿಲ್ಲ. ನಗದು ವ್ಯವಹಾರದಿಂದಾಗಿ ಸಿಬ್ಬಂದಿಗೆ ಸೋಂಕು ಹರಡುವ ಪ್ರಮಾಣ ಹೆಚ್ಚಾಗುತ್ತಿದೆ ಎನ್ನಲಾಗಿದೆ.

ಜನರು ಬಿಎಂಟಿಸಿ ಬಸ್ ಹತ್ತದಿರಲು ಕಾರಣ: ಒಂದು ಕೊರೊನಾ ಮತ್ತೊಂದು?

ಡಿಜಿಟಲ್ ಟಿಕೆಟಿಂಗ್ ವ್ಯವಸ್ಥೆಯಲ್ಲಿ ಪ್ರಯಾಣಿಕರು ಮೊಬೈಲ್‍ನಲ್ಲಿಯೇ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ, ಫೋನ್ ಪೇ, ಗೂಗಲ್ ಪೇ ಮೂಲಕ ನಿಗದಿತ ಟಿಕೆಟ್ ದರ ಪಾವತಿಸಿ ಪ್ರಯಾಣಿಸಬಹುದು.

ಆದರೆ ಈ ಡಿಜಿಟಲ್ ವ್ಯವಸ್ಥೆಯನ್ನು ಬಹುತೇಕ ಪ್ರಯಾಣಿಕರು ಬಳಸುತ್ತಿಲ್ಲ, ದುಡ್ಡು ಕೊಟ್ಟು ಟಿಕೆಟ್ ಪಡೆಯುತ್ತಿದ್ದಾರೆ. ಹೀಗಾಗಿ ಒಬ್ಬರ ಸ್ಪರ್ಶದಿಂದ ಮತ್ತೊಬ್ಬರಿಗೆ ಕೊರೊನಾ ಹರಡುವ ಸಾಧ್ಯತೆ ಹೆಚ್ಚಿದೆ. ಬಿಎಂಟಿಸಿ ಪ್ರಯಾಣಿಕರು, ಸಿಬ್ಬಂದಿ ಎಚ್ಚರಿಕೆಯಿಂದ ಇರಬೇಕಾಗಿದೆ.

English summary
Nine staff members of the Bangalore Metropolitan Transport Corporation (BMTC) have been diagnosed with coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X