ಬೆಂಗಳೂರಲ್ಲಿ 7.11 ಕೋಟಿ ಎಟಿಎಂ ಹಣ ದರೋಡೆ ಪ್ರಕರಣ: ಖತರ್ನಾಕ್ ಕಳ್ಳರನ್ನು ಬಂಧಿಸಿದ್ದು ಹೇಗೆ ?
ಬೆಂಗಳೂರಿನಲ್ಲಿ ಈಚೆಗೆ ನಡೆದ ಬಹುಕೋಟಿ ಎಟಿಎಂ ದರೋಡೆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದು, ಈ ರೋಚಕ ಕಾರ್ಯಾಚರಣೆ ಹೇಗೆ ನಡೆಯಿತು ಎನ್ನುವ ವಿಷಯಗಳು ಇದೀಗ ಬಹಿರಂಗವಾಗಿದೆ. ಅಲ್ಲದೇ ಬೆಂಗಳೂರು ಪೊಲೀಸರು ಖತರ್ನಾಕ್ ಗ್ಯಾಂಗ್‌ಗೆ ಬಲೆ ಬೀಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಹೇಗೆ, ದರೋಡೆಕೋರರು ಏನೆಲ್ಲಾ ಟ್ರಿಕ್ಸ್ ಬಳಸಿದ್ದರು ಎನ್ನುವ ಮಾಹಿತಿ ಇಲ್ಲಿದೆ.
ಎಟಿಎಂಗೆ 7.11 ಕೋಟಿ ಮೊತ್ತದ ನಗದು ಸಾಗಿಸುತ್ತಿದ್ದ ವ್ಯಾನ್ ದರೋಡೆ ಪ್ರಕರಣ ಪತ್ತೆ ಆಗಿದೆ. ಈ ಪ್ರಕರಣದ ಪ್ರಮುಖ ಆರೋಪಿಗಳ ಬಂಧನ ಸಹ ನಡೆದಿದೆ. 60 ಗಂಟೆಗಳೊಳಗೆ ಕೆ 5.76 ಕೋಟಿ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದೇ 19ರಂದು ನಡೆದ ಎಟಿಎಂ ನಗದು ವಾಹನ ದರೋಡೆ ಪ್ರಕರಣವನ್ನು ತ್ವರಿತವಾಗಿ ಪತ್ತೆ ಮಾಡಿ, ಮೊದಲೆ ನಿಖರವಾಗಿ ಯೋಜಿಸಲಾದ ಮತ್ತು ಮಾಹಿತಿ ಆಧಾರಿತ ದರೋಡೆ ಎಂದು ತೋರುತ್ತಿದ್ದ ಈ ಪ್ರಕರಣದಲ್ಲಿ ಮುಖ್ಯ ಆರೋಪಿಗಳನ್ನು ಪತ್ತೆಮಾಡಲಾಗಿದೆ. ಅಲ್ಲದೇ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿ, ಅವರಿಂದ 5,76 ಕೋಟಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ನವೆಂಬರ್ 19ರಂದು ಮಧ್ಯಾಹ್ನ 1.20ರ ಸುಮಾರಿಗೆ 7.11 ಕೋಟಿ ಹಣ ಹೊಯ್ಯುತ್ತಿದ್ದ ವ್ಯಾನ್ ಅನ್ನು ಡಿ.ಜೆ ಹಳ್ಳಿಯ ಬಳಿ, ಅಪರಿಚಿತರು RBI ನಿಯಂತ್ರಣಾಧಿಕಾರಿಗಳಂತೆ ನಟಿಸಿ, ಹಣ ಹೊಯ್ಯುತ್ತಿದ್ದ ವ್ಯಾನ್‌ನ್ನು ಅಪಹರಿಸಿರುವ ಬಗ್ಗೆ CMS ಸಂಘಟನೆಯಿಂದ ವರದಿ ಬಂದಿತ್ತು.
ನಂತರದ ತನಿಖೆಯಲ್ಲಿ, ಈ ಘಟನೆ 12.48 ಗಂಟೆ ಸಮಯದಲ್ಲಿ ಅಶೋಕ ಪಿಲ್ಲರ್ - ಜಯನಗರ - ಡೇರಿ ಸರ್ಕಲ್‌ನಲ್ಲಿ ನಡೆದಿರುವುದು ದೃಢಪಟ್ಟಿರುತ್ತದೆ. ಅಪರಾಧಿಗಳು ವ್ಯಾನ್ ಅನ್ನು ತಡೆದು, ಶಸ್ತ್ರ ತೋರಿಸಿ ಬೆದರಿಸಿ, ನಗದು ಪೆಟ್ಟಿಗೆಗಳನ್ನು ತೆಗೆದುಕೊಂಡು, ಮಧ್ಯಾಹ್ನ 1.16 ಗಂಟೆಗೆ ವಾಹನವನ್ನು ಬಿಟ್ಟು ಪರಾರಿಯಾಗಿದ್ದರು. ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು.
ಖತರ್ನಾಕ್ ಪ್ಲ್ಯಾನ್ ಮಾಡಿದ್ದ ಕಳ್ಳರು
ಈ ದರೋಡೆ ನಿಖರವಾದ ಪೂರ್ವ ಯೋಜಿತವಾಗಿದ್ದು, ಪ್ರಾಥಮಿಕ ಸುಳಿವುಗಳು ಅತ್ಯಲ್ಪವಾಗಿದ್ದವು • ಅಪರಾಧಿಗಳು ಅನೇಕ CCTV ಕಾಣದ ಪ್ರದೇಶಗಳಲ್ಲಿಯೇ ವಾಹನವನ್ನು ನಿಲ್ಲಿಸಿದ್ದರು. ಈ ದರೋಡೆಯ ಸಂದರ್ಭದಲ್ಲಿ ಮೊಬೈಲ್ ಫೋನ್‌ಗಳನ್ನು ಬಳಸಿರಲಿಲ್ಲ. ತನಿಖೆ ದಿಕ್ಕು ತಪ್ಪಿಸಿಕೊಳ್ಳಲು ಹಲವು ಭಾಷೆಗಳಲ್ಲಿ ಮಾತನಾಡಿಕೊಂಡಿದ್ದರು. ಅನೇಕ ವಾಹನಗಳನ್ನು ಬಳಸಲಾಗಿದ್ದು, ಅವುಗಳ ನಂಬರ್ ಪ್ಲೇಟ್‌ಗಳನ್ನು ಪದೇ ಪದೇ ಬದಲಾಯಿಸಲಾಗಿತ್ತು.
ದರೋಡೆ ಮಾಡಿದ ನೋಟುಗಳು ಸರಣಿ ಸಂಖ್ಯೆಗಳ ದಾಖಲಾತಿ ಇರದ ಕಾರಣ ಗುರುತಿಸುವುದು ಕಷ್ಟವಾಯಿತು. ಅಧಿಕೃತವಲ್ಲದ ಮಾಧ್ಯಮ ವರದಿಗಳು ಆರಂಭಿಕ ತನಿಖೆಯ ಸಂವೇದನಾಶೀಲ ಹಂತಗಳಿಗೆ ಅಡಚಣೆ ಆಗಿತ್ತು. ಈ ಎಲ್ಲಾ ಸವಾಲುಗಳ ನಡುವೆಯೂ ತಾಂತ್ರಿಕ ವಿಶ್ಲೇಷಣೆ ಮತ್ತು ತಂಡದ ಸಂಯೋಜಿತ ಕಾರ್ಯದಿಂದ ಪ್ರಕರಣವನ್ನು ತ್ವರಿತವಾಗಿ ಪತ್ತೆ ಮಾಡಲಾಗಿದೆ ಎಂದು ಕರ್ನಾಟಕ ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡಿದ್ದು, ದಕ್ಷಿಣ ವಿಭಾಗದ 11 ಪಿ.ಐಗಳು ಮತ್ತು 2 ಎಸಿಪಿಗಳೊಂದಿಗೆ, ಸಿಸಿಬಿ ವಿಭಾಗದ 6 ಪಿ.ಐಗಳು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ್ದರು.
ಅಲ್ಲದೇ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲೂ ಸುಳಿವುಗಳನ್ನು ಹಿಂಬಾಲಿಸಲಾಯಿತು (ಕೆಲವು ತಂಡಗಳು ಗೋವಾ ತನಕ ವ್ಯಾಪ್ತಿಯನ್ನು ವಿಸ್ತರಿಸಿದವು). ಈ ಪ್ರಕರಣದಲ್ಲಿ 30ಕ್ಕಿಂತ ಹೆಚ್ಚು ಮಂದಿಯನ್ನು ವಿಚಾರಣೆ ಮಾಡಲಾಗಿದೆ. CCTV, ವಾಹನ ಚಲನವಲನ ಮತ್ತು ಸ್ಥಳೀಯ ಗುಪ್ತಚರ ಮಾಹಿತಿ ನಿರಂತರವಾಗಿ ವಿಶ್ಲೇಷಿಸಲಾಯಿತು.
ಮುಖ್ಯವಾಗಿ ಘಟನೆ ಸಂಭವಿಸಿದ 24 ಗಂಟೆಯಲ್ಲಿಯೇ ಆರೋಪಿಗಳು ಮತ್ತು ಬಳಸಿದ ವಾಹನಗಳ ಬಗ್ಗೆ ಪ್ರಮುಖ ಸುಳಿವುಗಳು ಲಭಿಸಿವೆ. 54 ಗಂಟೆಗಳೊಳಗೆ ಮೂವರು ಆರೋಪಿಗಳನ್ನು ಬಂಧಿಸಲಾಯಿತು. 60 ಗಂಟೆಗಳೊಳಗೆ ಕೆ 5.76 ಕೋಟೆ ವಶಪಡಿಸಿಕೊಳ್ಳಲಾಯಿತು.
ಕೃತ್ಯಕ್ಕೆ ಬಳಸಿದ್ದ ವಾಹನವನ್ನು ವಶಪಡಿಸಿಕೊಳ್ಳಲಾಯಿತು. ಒಟ್ಟಾರೆ 6-8 ಜನರ ಗುಂಪು ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಯೋಜನೆ, ಕಾರ್ಯಾಚರಣೆ ಮತ್ತು ಹಣವನ್ನು ದರೋಡೆ, ಹಣದ ಚಲನವಲನದಲ್ಲಿ ಪಾತ್ರ ವಹಿಸಿದ್ದಾರೆಂದು ತನಿಖೆಯಲ್ಲಿ ಖಚಿತವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕರ್ನಾಟಕ ಪೊಲೀಸರ ತುರ್ತು ಕಾರ್ಯಾಚರಣೆಗೆ ಇದೀಗ ಮೆಚ್ಚುಗೆ ವ್ಯಕ್ತವಾಗಿದೆ.
-
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ?












Click it and Unblock the Notifications