Bengaluru Crime: ತಾಯಿಯನ್ನೇ ಕೊಂದು ಟ್ರಾಲಿ ಬ್ಯಾಗಿಗೆ ತುಂಬಿದ ಮಹಿಳೆ: ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ ಅಮಾನುಷ ಕೃತ್ಯ

ಬೆಂಗಳೂರು, ಜೂನ್‌ 13: 39 ವರ್ಷದ ಮಹಿಳೆಯೊಬ್ಬರು ತಾಯಿಯನ್ನು ಕೊಂದು ಶವವನ್ನು ಟ್ರಾಲಿ ಬ್ಯಾಗ್‌ನಲ್ಲಿ ತುಂಬಿರುವ ಘಟನೆ ಬೆಂಗಳೂರಿನ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಅಮಾನವೀಯ ಕೃತ್ಯಕ್ಕೆ ಸಂಬಂಧಿಸಿದಂತೆ ಆರೋಪಿ ಸೆನಾಲಿ ಸೇನ್ (39) ವಿರುದ್ಧ ಪ್ರಕರಣ ದಾಖಲಾಗಿದೆ.

ಮೈಕೊ ಲೇಔಟ್ ಪೊಲೀಸರ ಪ್ರಕಾರ, ಮೃತದೇಹವನ್ನು ಸೋಮವಾರ ಠಾಣೆಗೆ ತರಲಾಗಿದೆ. ಸೆನಾಲಿ ಸೇನ್ ವಿರುದ್ಧ ಐಪಿಸಿ ಸೆಕ್ಷನ್ 302 ಸೇರಿದಂತೆ ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

Bengaluru: 39 Years Old Women Senali Sen Killed Her Mother and Carried the body in a Trolley Bag


ಪ್ರಾಥಮಿಕ ಮಾಹಿತಿಯ ಪ್ರಕಾರ, ಕುಟುಂಬವು ಪಶ್ಚಿಮ ಬಂಗಾಳದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದೆ. ಆರೋಪಿಯನ್ನು 39 ವರ್ಷದ ಸೆನಾಲಿ ಸೇನ್ ಎಂದು ಗುರುತಿಸಲಾಗಿದೆ. ಕೊಲೆಗೀಡಾದ ತಾಯಿ 70 ವರ್ಷದ ಬೀವಾ ಪೌಲ್ ಎಂದು ಗುರುತಿಸಲಾಗಿದೆ. ಸೆನಾಲಿ ಸೇನ್ ಅವರ ತಾಯಿ ಮತ್ತು ಅತ್ತೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ವರದಿಗಳು ತಿಳಿಸಿವೆ.

ವರದಿಗಳ ಪ್ರಕಾರ ಸೆನಾಲಿ ಸೇನ್ ತನ್ನ ತಾಯಿಗೆ ನಿದ್ರೆ ಮಾತ್ರೆಗಳನ್ನು ನೀಡಿ ಕತ್ತು ಹಿಸುಕಿದ್ದಾಳೆ. ಆಕೆಯ ಶವವನ್ನು ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಟ್ರಾಲಿಯನ್ನು ಅನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದಾಳೆ

ಮೃತದೇಹವನ್ನು ಮೈಕೋ ಲೇಔಟ್ ಠಾಣೆಗೆ ತರಲಾಗಿದೆ. ಆರೋಪಿ ಮಹಿಳೆಯನ್ನು ಬಂಧಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+