Bengaluru 2nd Airport: ಬೆಂಗಳೂರು ದಕ್ಷಿಣದಲ್ಲೇ 2ನೇ ವಿಮಾನ ನಿಲ್ದಾಣ, ಸ್ಥಳ ಅಂತಿಮ

ಬೆಂಗಳೂರು, ಜನವರಿ 24: ಬೆಂಗಳೂರಿನ 2ನೇ ವಿಮಾನ ನಿಲ್ದಾಣವನ್ನು ಎಲ್ಲಿ ನಿರ್ಮಾಣ ಮಾಡಲಾಗುತ್ತದೆ?. ಈ ಕುರಿತು ಇನ್ನೂ ಚರ್ಚೆಗಳು ನಡೆಯುತ್ತಿವೆ. ತುಮಕೂರಿನಲ್ಲಿ ನಿರ್ಮಾಣ ಮಾಡಬೇಕು, ಬೆಂಗಳೂರು ದಕ್ಷಿಣ ಭಾಗದಲ್ಲಿ ನಿರ್ಮಾಣ ಮಾಡಬೇಕು ಎಂಬ ಬೇಡಿಕೆಗಳಿವೆ. ಆದರೆ ಸರ್ಕಾರ ಅಧಿಕೃತವಾಗಿ ಎಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲಿದೆ? ಎಂದು ಮಾಹಿತಿ ನೀಡಿಲ್ಲ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮಾಹಿತಿ ಪ್ರಕಾರ ಬೆಂಗಳೂರು ದಕ್ಷಿಣ ಭಾಗದಲ್ಲಿ ಬೆಂಗಳೂರಿನ 2ನೇ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ಬೆಂಗಳೂರು ನಗರದ ಜನಪ್ರತಿನಿಧಿಗಳ ನಿಯೋಗ ದಕ್ಷಿಣ ಭಾಗದಲ್ಲಿಯೇ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ಗೆ ಮನವಿ ಸಲ್ಲಿಕೆ ಮಾಡಿದ್ದರು.

Bengaluru 2nd Airport Between Kaggalipura And Bidadi

4,800 ಎಕರೆ ಭೂ ಸ್ವಾಧೀನ: ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) 4,800 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಿದೆ ಎಂಬ ಮಾಹಿತಿ ಇದೆ.

ಈ ಭೂಮಿ ಕಗ್ಗಲೀಪುರ-ಬಿಡದಿ ನಡುವೆ ಇದೆ. ಆದ್ದರಿಂದ ಇಲ್ಲಿಯೇ 2ನೇ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ ಎಂಬುದು ಸದ್ಯದ ಮಾಹಿತಿ. ಕರ್ನಾಟಕ ಸರ್ಕಾರ ಇನ್ನೂ ಸ್ಥಳವನ್ನು ಅಂತಿಮಗೊಳಿಸಿ, ತನ್ನ ಪ್ರಸ್ತಾವನೆಯಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸಲ್ಲಿಸಬೇಕಿದೆ.

ಮಾಹಿತಿಗಳ ಪ್ರಕಾರ 10 ಹಳ್ಳಿಗಳ ವ್ಯಾಪ್ತಿಯಲ್ಲಿ ಈ ವಿಮಾನ ನಿಲ್ದಾಣದ ಭೂಮಿ ಬರಲಿದೆ. ಈಗಲೇ ಭೂಮಿಯನ್ನು ವಶಕ್ಕೆ ಪಡೆದುಕೊಂಡರೆ ಮುಂದೆ ವೆಚ್ಚ ತಗ್ಗಿಸಬಹುದು ಎಂಬುದು ಲೆಕ್ಕಾಚಾರವಾಗಿದೆ. ಆದ್ದರಿಂದ ಕೆಐಎಡಿಬಿಗೆ ಭೂ ಸ್ವಾಧೀನಕ್ಕೆ ಸರ್ಕಾರ ಸೂಚನೆ ನೀಡಿದೆ ಎಂಬ ಮಾಹಿತಿ ಇದೆ.

ಕಗ್ಗಲೀಪುರ ಬೆಂಗಳೂರು ನಗರದಿಂದ ಕನಕಪುರ ರಸ್ತೆಯಲ್ಲಿದೆ. ಕಗ್ಗಲೀಪುರ ಮತ್ತು ಬಿಡದಿ ನಡುವಿನ ಜಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸಹ ಕನಕಪುರ ಸಮೀಪವೇ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎಂದು ಬಯಸಿದ್ದರು.

ಸದ್ಯದ ಮಾಹಿತಿಯಂತೆ ವಿಮಾನ ನಿಲ್ದಾಣದ ವ್ಯಾಪ್ತಿಗೆ ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರ, ಚಿನ್ನಕುರ್ಚಿ, ಸೀಗೆಹಳ್ಳಿ, ಉತ್ತರಿ, ನಾಗನಾಯಕನಹಳ್ಳಿ, ಚೂಡಹಳ್ಳಿ, ನೆಲಗುಳಿ ಮತ್ತು ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಕೊಡಿಯಾಲಕರನಹಳ್ಳಿ, ದೊಡ್ಡಕುಂಟನಹಳ್ಳಿ ಗ್ರಾಮಗಳು ಒಳಪಡುತ್ತವೆ.

ಸದ್ಯ ಕೆಐಎಡಿಬಿ ಗುರುತಿಸಿರುವ ಪ್ರದೇಶ ಸಮತಟ್ಟಾದ ಜಾಗವಾಗಿದೆ. ಸುತ್ತಲೂ ಗುಡ್ಡ-ಬೆಟ್ಟಗಳಿಲ್ಲ. ಈ ಜಾಗದಿಂದ ಬೆಂಗಳೂರು, ರಾಮನಗರ, ಮಂಡ್ಯ ಮತ್ತು ಮೈಸೂರಿಗೆ ಸಂಪರ್ಕ ಸುಲಭವಾಗಿದೆ. ದೇವನಹಳ್ಳಿಯಲ್ಲಿ ವಿಮಾನ ನಿಲ್ದಾಣ ಇರುವ ಕಾರಣ ಸುತ್ತಮುತ್ತಲಿನ ಪ್ರದೇಶ ಅಭಿವೃದ್ಧಿಯಾಗಿದೆ. ಈಗ 2ನೇ ವಿಮಾನ ನಿಲ್ದಾಣದಿಂದ ರಾಮನಗರ, ಬಿಡದಿ ಭಾಗವೂ ಇನ್ನಷ್ಟು ಅಭಿವೃದ್ಧಿಯಾಗಲಿದೆ ಎಂದು ಅಂದಾಜಿಸಲಾಗಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಬಳಕೆದಾರರಲ್ಲಿ ಬೆಂಗಳೂರು ದಕ್ಷಿಣ ಭಾಗದವರೇ ಅಧಿಕ. ನಗರದ ಐಟಿ ಹಬ್ ಎಲೆಕ್ಟ್ರಾನಿಕ್ ಸಿಟಿ ದಕ್ಷಿಣದಲ್ಲಿದೆ. ಐಟಿ ಕಂಪನಿ ಹೆಚ್ಚಿರುವ ಕಾರಣ ದಕ್ಷಿಣ ಭಾಗದಲ್ಲಿ ಏರ್‌ಪೋರ್ಟ್ ಆದರೆ ಅನುಕೂಲ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಇರುವುದರಿಂದ ಸಾರಿಗೆ ಸಂಪರ್ಕಕ್ಕೆ ಅನುಕೂಲ ಎಂಬ ಲೆಕ್ಕಾಚಾರಗಳಿವೆ.

ಬೆಂಗಳೂರಿನ 2ನೇ ವಿಮಾನ ನಿಲ್ದಾಣ ಯೋಜನೆ ಇನ್ನೂ ಪ್ರಸ್ತಾವನೆಯ ಹಂತದಲ್ಲಿದೆ. ಅಲ್ಲದೇ ಸ್ಥಳದ ಬಗ್ಗೆ ಸರ್ಕಾರದ ಇನ್ನೂ ಸಹ ಅಧಿಕೃತ ಘೋಷಣೆಯಾಗಿಲ್ಲ. ಸರ್ಕಾರ ಭಾರತೀಯ ವಿಮಾನ ನಿಲ್ದಾಣಕ್ಕೆ ಪ್ರಸ್ತಾವನೆ ಸಲ್ಲಿಸುವಾಗ ಜಾಗದ ಕುರಿತು, ಅದರ ವ್ಯಾಪ್ತಿಯ ಕುರಿತು ಉಲ್ಲೇಖಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+