ಬೆಂಗಳೂರು 2ನೇ ವಿಮಾನ ನಿಲ್ದಾಣ: ಈ ಭಾಗದ 25 ಹಳ್ಳಿಗಳಿಗೆ ಎದುರಾಯ್ತು ಸಂಕಷ್ಟ!
Bengaluru Second Airport: ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಬೆಂಗಳೂರಿನ 2ನೇ ವಿಮಾನ ನಿಲ್ದಾಣವು ಮಾಗಡಿ ಗ್ರಾಮಾಂತರ ಭಾಗದಲ್ಲಿ ಬರುವುದು ಬಹುತೇಕ ಖಚಿತ ಅಂತಲೇ ಹೇಳಲಾಗುತ್ತಿದೆ. ಈ ರೀತಿ ಇರುವಾಗಲೇ ಈ ಭಾಗದಲ್ಲಿ 20ರಿಂದ 25 ಹಳ್ಳಿಗಳ ಜನರಿಗೆ ಭಾರೀ ದೊಡ್ಡ ಸಂಕಷ್ಟ ಎದುರಾಗಿದೆ. ಬೆಂಗಳೂರಿನ ಹೊಸ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ 5 ಜಾಗಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ. ಈ ರೀತಿ ಶಾರ್ಟ್ ಲಿಸ್ಟ್ ಮಾಡಿರುವ ಜಾಗಗಳಲ್ಲಿ ಮಾಗಡಿಯ ಎರಡು ಪ್ರದೇಶಗಳು ಮುಂಚೂಣಿಯಲ್ಲಿವೆ. ಆದರೆ, ಈ ಭಾಗದಲ್ಲಿನ ಹಳ್ಳಿಯ ಜನರಿಗೆ ಹೊಸ ತಲೆನೋವು ಶುರುವಾಗಿದೆ. ಅದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ ನೋಡಿ..
ನಗರದ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಹೊಸ ರಾಮನಗರ ಮಾಗಡಿ ಗ್ರಾಮಾಂತರ ಪ್ರದೇಶದಲ್ಲಿ ಎರಡು ಜಾಗಗಳನ್ನು ಗುರುತಿಸಿದೆ. ಇಲ್ಲಿ ಡ್ರೋನ್‌ಗಳ ಮೂಲಕ ನಿರಂತರ ಸರ್ವೇ ಕಾರ್ಯ ನಡೆದಿದೆ. ಕೇಂದ್ರ ತಂಡ ಹಾಗೂ ರಾಜ್ಯ ಸರ್ಕಾರವು ನಿರಂತರವಾಗಿ ಸರ್ವೇ ಕಾರ್ಯದಲ್ಲಿ ತೊಡಗಿದೆ. ವಿಮಾನ ನಿಲ್ದಾಣ ಪ್ರಕ್ರಿಯೆ ಪ್ರಾರಂಭವಾದಾಗಿನಿಂದಲೂ ಹೊಸ ಹೊಸ ಹೆಸರುಗಳು ಸೇರ್ಪಡೆ ಆಗುತ್ತಲ್ಲೇ ಇವೆ. ಕನಕಪುರ ಭಾಗದಲ್ಲಿ ಈಗಾಗಲೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಈ ಭಾಗದಲ್ಲಿ ಯಾವುದೇ ಕಾರಣಕ್ಕೂ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಡಿ ಅಂತ ಆಗ್ರಹಿಸಿರುವ ಇಲ್ಲಿನ ರೈತರು ಪ್ರತಿಭಟನೆ ಮಾಡುವುದಕ್ಕೆ ಮುಂದಾಗಿದ್ದಾರೆ.

ಎರಡನೇ ವಿಮಾನ ನಿಲ್ದಾಣ ನಿರ್ಮಾಣ ವಿಚಾರವು ಪ್ರತಿಷ್ಠೆಯ ವಿಷಯವಾಗಿ ಬದಲಾಗಿದೆ. ಈ ನಡುವೆ ಕನಕಪುರ, ಬಿಡದಿ ಹಾಗೂ ನೆಲಮಂಗಲ ಭಾಗದಿಂದ ವಿಮಾನ ನಿಲ್ದಾಣ ನಿರ್ಮಾಣ ಜಾಗವು ಇದೀಗ ಮಾಗಡಿಯ ಮೋಟಗಾನಹಳ್ಳಿ ಹಾಗೂ ಚಿಕ್ಕಸೋಲೂರಿನಲ್ಲಿ ಸರ್ವೇ ಕಾರ್ಯ ಭರ್ಜರಿ ಸಾಗಿದ್ದು. ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಬಹುತೇಕ ಅಂತಿಮವಾಗುವ ಸಾಧ್ಯತೆ ಇದೆ ಅಂತಲೇ ಹೇಳಲಾಗುತ್ತಿದೆ. ಇದರೊಂದಿಗೆ ಈ ಭಾಗದಲ್ಲಿ ಇನ್ನೂ ಮೂರು ಭರ್ಜರಿ ಯೋಜನೆಗಳು ಜಾರಿ ಆಗಲಿವೆ. ಒಟ್ಟಾರೆ, ಈ ಭಾಗದಲ್ಲಿ ಭೂಮಿ ಇರುವವರು ಕೋಟ್ಯಾಧಿಪತಿಗಳು ಅಂತಲೇ ಹೇಳಲಾಗುತ್ತಿದೆ. ಈ ರೀತಿ ಇರುವಾಗಲೇ ಹೊಸದೊಂದು ಸಮಸ್ಯೆ ಎದುರಾಗಿದೆ.
ನಗರದ ಹಾಗೂ ಕರ್ನಾಟಕದ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಜಾಗ ಅಂತಿಮವಾಗುವಾಗಲೇ ಈ ಭಾಗದಲ್ಲಿ 20ರಿಂದ 25 ಹಳ್ಳಿಗಳ ರೈತರು ತಮ್ಮ ಪ್ರಾಪರ್ಟಿ ಕಳೆದುಕೊಳ್ಳುವ ಆತಂಕದಲ್ಲಿ ಇದ್ದಾರೆ. ಈ ಭಾಗದಲ್ಲಿ ವಿಮಾನ ನಿಲ್ದಾಣ ಬೇಡ ಎನ್ನುವ ಕೂಗು ಸಹ ಕೇಳಿ ಬರುತ್ತಿದೆ.
ಯಾವ ಹಳ್ಳಿಗಳಿಗೆ ಸಂಕಷ್ಟ: ಮಾಗಡಿ ಗ್ರಾಮಾಂತರ ಪ್ರದೇಶದಲ್ಲಿರು ಹಳ್ಳಿಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಕ್ಕೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಕೆಂಪ ಚಿಕ್ಕನಹಳ್ಳಿ, ಮರಿಕುಪ್ಪೆ, ಹಾಗೂ ಮಾಗಡ ರಂಗಯ್ಯನ ಪಾಳ್ಯ. ಗುಡೆಮಾರನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರುವ ಹಕ್ಕಿನಾಳು ಕಾಲೊನಿ, ಶೆಟ್ಟಿ ಪಾಳ್ಯ, ಗರ್ಗೇಶಪುರ, ಬಾಳಯ್ಯನಪಾಳ್ಯ, ದಾಸೇಗೌಡನ ಪಾಳ್ಯ, ನಾಗನಹಳ್ಳಿ, ಸುತ್ತೆಹಳ್ಳಿ ಪಾಳ್ಯ ಹಾಗೂ ಮೂರನೇಯದಾಗಿ

ಮಾಗಡಿಯ ಮೋಟಗಾನಹಳ್ಳಿ ಗ್ರಾಮ ಪಂಚಾಯಿತಿಯ ಪೆಮ್ಮನಹಳ್ಳಿ, ಬಸವನಹಳ್ಳಿ, ಕಾಟನಪಾಳ್ಯ, ಶ್ರೀರಾಮಪುರ ಕಾಲೊನಿ, ಗೆಜ್ಜೆಗಲ್ ಪಾಳ್ಯ, ಹೊನ್ನಯ್ಯನಪಾಳ್ಯ, ಬೆಟ್ಟಯ್ಯನಪಾಳ್ಯ, ಪುಟ್ಟಯ್ಯನ ಪಾಳ್ಯ ಹಾಗೂ ಕಂಬೇಗೌಡನ ಪಾಳ್ಯ, ಕೋಡಿಹಳ್ಳಿ, ತಿರುಮಲಾಪುರ ವ್ಯಾಪ್ತಿಯಲ್ಲಿರುವ ಹಳ್ಳಿಗಳ ಜನರಿಗೆ ಭೂಮಿ ಕಳೆದುಕೊಳ್ಳುವ ಆತಂಕ ಶುರುವಾಗಿದೆ.












Click it and Unblock the Notifications