Bengaluru 2nd Airport: ಬೆಂಗಳೂರು 2 ವಿಮಾನ ನಿಲ್ದಾಣ ನಿರ್ಮಾಣ: ಜಾಗದ ಜೊತೆ ಮತ್ತೊಂದು ಸಮಸ್ಯೆ!

ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಜಾಗದ ಜೊತೆ ಜೊತೆಗೆ ಮತ್ತೊಂದು ಸಮಸ್ಯೆಯೂ ಎದುರಾಗಿದೆ. ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮುಖ್ಯವಾಗಿ ಐದು ಜಾಗಗಳನ್ನು ಗುರುತಿಸಲಾಗಿದೆ. ಈಗಾಗಲೇ ಜಾಗದ ಬಗ್ಗೆ ರಾಜ್ಯ ಸರ್ಕಾರದ ಹಂತದಲ್ಲಿ ಪ್ರಮುಖ ಚರ್ಚೆಗಳು ನಡೆದಿವೆ. ಆದರೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಏರ್‌ಸ್ಪೇಸ್‌ ಕಡಿಮೆ ಇರುವುದು ಸಹ ಪ್ರಮುಖ ಸಮಸ್ಯೆ ಆಗಿದೆ. ಈ ಸಂಬಂಧ ಬಿಸಿಬಿಸಿ ಚರ್ಚೆ ಮುಂದುವರಿದಿದೆ.

ಬೆಂಗಳೂರಿನ 2ನೇ ವಿಮಾನ ನಿಲ್ದಾಣ ನಿರ್ಮಾಣದ ವಿಷಯದಲ್ಲಿ ಸರ್ಕಾರ ಪ್ಲಾನ್ ಮಾಡಿಕೊಳ್ಳವಾಗಲೇ ಈ ವಿಷಯ ಬೆಳಕಿಗೆ ಬಂದಿದೆ. ಇನ್ನು ತಮಿಳುನಾಡು ಸರ್ಕಾರವು ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಸಹ ಮಾಡಿಕೊಂಡಿದೆ. ಹಾಗಾದರೆ ಏನಿದು ಏರ್‌ಸ್ಪೇಸ್‌ ಇದರಿಂದ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಡ್ಡಿಯಾಗುತ್ತಿರುವುದು ಯಾಕೆ ಎನ್ನುವ ಡೀಟೆಲ್ಸ್‌ ಇಲ್ಲಿದೆ.

ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ವಿಚಾರ ಚರ್ಚೆಯಾದ ಮೇಲೆ ಬೆಂಗಳೂರು ಹಾಗೂ ದಕ್ಷಿಣ ಕರ್ನಾಟಕದ ಭಾಗದಲ್ಲಿ ರಿಯಲ್‌ ಎಸ್ಟೇಟ್‌ ಗರಿಗೆದರಿದೆ. ಮೊದಲ ಹಂತದಲ್ಲಿ ತುಮಕೂರು, ನೆಲಮಂಗಲ, ಬಿಡದಿ, ಹೇರೋಹಳ್ಳಿ, ಜಿಗಣಿ ಹಾಗೂ ಕುಣಿಗಲ್‌ನ ಯಾವುದಾದರೂ ಒಂದು ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಚರ್ಚೆ ನಡೆದಿತ್ತು. ಇದೀಗ ಇನ್ನಷ್ಟು ಸ್ಥಳಗಳು ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಚರ್ಚೆಗೆ ಸೇರಿವೆ. ಆದರೆ, ಏರ್‌ಸ್ಪೇಸ್‌ ಟ್ರಾಫಿಕ್‌ ಜಾಮ್‌ ವಿಷಯ ಎರಡನೇ ವಿಮಾ ನಿಲ್ದಾಣ ನಿರ್ಮಾಣಕ್ಕೆ ಕಗ್ಗಂಟಾಗಿದೆ ಅಂತ ಹೇಳಲಾಗ್ತಿದೆ. ಏರ್‌ಸ್ಪೇಸ್‌ ಪ್ರಾಬ್ಲಂ ಯಾಕೆ ಎನ್ನುವ ಡೀಟೆಲ್ಸ್‌ ಇಲ್ಲಿದೆ.

Bengaluru 2 Airport Construction land Allocation And New Airspace Issues

ಏರ್‌ಸ್ಪೇಸ್‌: ಆಕಾಶದಲ್ಲಿ ವಿಮಾನಗಳ ಹಾರಾಟಕ್ಕೆ ಏರ್‌ಸ್ಪೇಸ್‌ ನಿಗದಿ ಮಾಡಲಾಗಿರುತ್ತದೆ. ಉದಾ: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗಳು ಹೋಗುವುದಕ್ಕೆ ಮಾಡಲಾಗಿದ್ದ ಪ್ರತ್ಯೇಕ ಬಿಎಂಟಿಸಿ (ಬಸ್‌ ಕಾರಿಡಾರ್) ಬಸ್‌ ಪಥದ ರೀತಿ. ಆಕಾಶದಲ್ಲಿ ಏರ್‌ಸ್ಪೇನ್‌ನಲ್ಲಿ ನಿರ್ದಿಷ್ಟ ವಿಮಾನಗಳು ಸಂಚರಿಸುತ್ತವೆ. ಇದೀಗ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಜಾಗದ ಜೊತೆಗೆ ಏರ್‌ಸ್ಪೇಸ್‌ ನಿಗದಿ ಮಾಡುವುದು ಸಹ ಮುಖ್ಯವಾಗಿದೆ.

ಇನ್ನು ಈ ವಿಚಾರವಾಗಿ ಈಗಾಗಲೇ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮ್ಯಾನೇಜ್ಮೆಂಟ್‌, ಹಿಂದೂಸ್ತಾನ್ ಏರೋನಾಟಿಕಲ್ ಲಿ. ಹಾಗೂ ರಕ್ಷಣಾ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಬೆಂಗಳೂರಲ್ಲಿ ಈಗಾಗಲೇ ಇರುವ ವಿಮಾನ ನಿಲ್ದಾಣಗಳು 360 ಡಿಗ್ರಿಗಳಷ್ಟಿದೆ. ಅಲ್ಲದೆ ಸುತ್ತಮುತ್ತಲಿನ ಪ್ರದೇಶದಲ್ಲೂ ಏರ್‌ಸ್ಪೇಸ್‌ ಕಡಿಮೆ ಇದೆ. ವಿಮಾನಗಳ ಹಾರಾಟ ಜಾಸ್ತಿ ಇರುವುದರಿಂದ ಆಕಾಶದಲ್ಲೂ ಟ್ರಾಫಿಕ್‌ ಜಾಮ್‌ ಇದೆ. ಹೀಗಾಗಿ ಫ್ರೀ ಏರ್‌ಸ್ಪೇಸ್‌ನ ಅಗತ್ಯವಿದೆ.

ಈ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿದೆ. ಜಾಗದ ಜೊತೆ ಜೊತೆಗೆ ಆಕಾಶದಲ್ಲೂ ವಿಮಾನಗಳ ಹಾರಟಕ್ಕೆ ಅವಕಾಶ ಸಿಕ್ಕ ಮೇಲೆ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಒಂದು ಹಂತಕ್ಕೆ ಬರಲಿದೆ. ಹೀಗಾಗಿ ಈ ವಿಷಯವೂ ಈಗ ಭಾರೀ ಚರ್ಚೆಯಾಗುತ್ತಿದೆ.

ಬೆಂಗಳೂರು ಎರಡನೇ ವಿಮಾನ ನಿಲ್ದಾಣ ಯಾಕೆ: ಇನ್ನು ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಖ್ಯ ಕಾರಣ. ಬೆಂಗಳೂರಿನಲ್ಲಿ ಈಗಾಗಲೇ ಇರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಒತ್ತಡ ಹೆಚ್ಚಳವಾಗುತ್ತಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ಅತ್ಯವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಎರಡನೇ ವಿಮಾನ ನಿಲ್ದಾಣ ಸಿದ್ಧತೆ ಜೋರಾಗಿದೆ.

ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ: ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ನಾಲ್ಕರಿಂದ ಐದು ಪ್ರದೇಶಗಳನ್ನು ಗುರುತು ಮಾಡಲಾಗಿದೆ. ಅದರಲ್ಲಿ ತುಮಕೂರು ಹಾಗೂ ನೆಲಮಂಗಲ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎನ್ನುವುದಕ್ಕೆ ಬೇಡಿಕೆ ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+