• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿಲಿಕಾನ್ ಸಿಟಿಯಲ್ಲೂ ಬಾಹುಬಲಿ ಮಹಾಮಸ್ತಕಾಭಿಷೇಕ!

|

ಬೆಂಗಳೂರು, ಫೆಬ್ರವರಿ 27 : ಜೈನಕಾಶಿ ಶ್ರವಣಬೆಳಗೊಳದಲ್ಲಿ ನಡೆದ ಐತಿಹಾಸಿಕ ಮಹಾಮಸ್ತಕಾಭಿಷೇಕ ಕಣ್ತುಂಬಿಕೊಳ್ಳಲು ಸಾಧ್ಯವಾಗದವರು ನಿರಾಶರಾಗಬೇಕಿಲ್ಲ.

ಅಟ್ಟಣಿಗೆ ನಿರ್ಮಾಣದಿಂದ ಹಿಡಿದು ಹಾಲು-ಕೇಸರಿ ವಿವಿಧ ದ್ರವ್ಯಗಳ ಅಭಿಷೇಕದ ಸಂಪೂರ್ಣ ವಿಧಿವಿಧಾನ ವೀಕ್ಷಿಸುವ ಅವಕಾಶ ಸಿಲಿಕಾನ್ ಸಿಟಿಗೆ ಒದಗಿಬಂದಿದೆ. ಈ ಬಾರಿಯ ಮಹಾಮಸ್ತಕಾಭಿಷೇಕ ಹಾಗೂ ಜೈನಕಾಶಿಯ ವೈಭವವನ್ನು ನಗರದಲ್ಲಿ ಮರುಕಳಿಸುವ ಸಿದ್ಧತೆ ಆರಂಭವಾಗಿದೆ.

In Pics: ಮುಗಿಲೆತ್ತರಕ್ಕೆ ನಿಂತ ವಿರಾಗಿಗೆ ಮಹಾಮಸ್ತಕಾಭಿಷೇಕ

ಈ ಅದ್ಭುತವನ್ನು ನೋಡಲು ನೂರಾರು ಮೆಟ್ಟಿಲುಗಳನ್ನು ಹತ್ತಬೇಕಿಲ್ಲ. ಬದಲಾಗಿ ಒಂದೇ ಸ್ಥಳದಲ್ಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಹಾಗೂ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳನ್ನು 3ಡಿ ಕನ್ನಡಕದ ಮೂಲಕ ವೀಕ್ಷಿಸಬಹುದಾಗಿದೆ. ಛಾಯಾಗ್ರಹಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಬೆಂಗಳೂರಿನ 3 ಡಿ ಸ್ಟುಡಿಯೋದ ಸದಸ್ಯರು 3 ಡಿ ಕ್ಯಾಮರಾ ಮೂಲಕ ಕಳೆದ 3 ತಿಂಗಳಿನಿಂದ ಶ್ರವಣಬೆಳಗೊಳವನ್ನು ಸೆರೆಹಿಡಿದಿದ್ದಾರೆ. ಈ ಅವಧಿಯಲ್ಲಿ ತೆಗೆಯಲಾದ ಫೋಟೋಗಳನ್ನು ನಗರದ ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ರಂಗೋಲಿ ಮೆಟ್ರೋದಲ್ಲಿ ಪ್ರದರ್ಶನ ಮಾಡಲಾಗುತ್ತಿದೆ.

2 ಸಾವಿರಕ್ಕೂ ಅಧಿಕ 3 ಡಿ ಛಾಯಾಚಿತ್ರ: 3 ಡಿ ಛಾಯಾಚಿತ್ರ ಸಂಸ್ಥೆಯು ನಂದಕುಮಾರ್, 3 ಸಾವಿರಕ್ಕೂ ಅಧಿಕ 3 ಡಿ ಫೋಟೊ ಕ್ಲಿಕ್ಕಿಸಿದ್ದಾರೆ.ಇದರಲ್ಲಿ ಮಸ್ತಕಾಭಿಷೇಕ ದೇಶ್ಯಾವಳಿ, ವಿಂಧ್ಯಗಿರಿ, ಚಂದ್ರಗಿರಿ ಬೆಟ್ಟದ ಸೌಂದರ್ಯ, ಬಾಹುಬಲಿಯ ಪಾದಪೂಜೆ, ಪ್ರಥಮ ಕಳಶದ ಅಭಿಷೇಕ, ಚಿಕ್ಕದೇವರಾಜ ಒಡೆಯರ್ ಕಲ್ಯಾಣಿ, ಚಿಕ್ಕಬೆಟ್ಟದ 14 ಬಸದಿಗಳು, ತ್ಯಾಗಸ್ತಂಭ, ಮಾನಸ್ತಂಭ, ಬ್ರಹ್ಮಸ್ತಬ್ಧ, ಜೈನ ಮಠದ ಭಿತ್ತಿ ಚಿತ್ರಗಳು ಸೇರಿ ಮಹಾಮಸ್ತಕಾಭಿಷೇಕದ ವೈಭವವನ್ನು ಸೆರೆ ಹಿಡಿಯಲಾಗಿದೆ.

ಶ್ರವಣಬೆಳಗೊಳ : ಮಹಾಮಸ್ತಕಾಭಿಷೇಕ ಲೈವ್ ನೋಡಿ

ಸಿಂಗಾಪುರದಿಂದ ಕನ್ನಡಕ: 3 ಡಿ ಸ್ಟುಡಿಯೋ 3 ಡಿ ಛಾಯಾಚಿತ್ರ ಪ್ರದರ್ಶನಕ್ಕೆ ಬೇಕಾದ ಕನ್ನಡಕವನ್ನು ಸಿಂಗಾಪುರದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಪ್ರತಿ 3 ಡಿ ಕನ್ನಡಕಕ್ಕೆ 18 ರೂ ವೆಚ್ಚವಾಗಲಿದ್ದು ಬೆಂಗಳೂರಿನಲ್ಲಿ ನಡೆಯುವ 3 ಡಿ ಛಾಯಾಚಿತ್ರ ಪ್ರದರ್ಶನಕ್ಕೆ ಈಗಾಗಲೇ ಬೇಡಿಕೆ ಬಂದಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
3D studeo of Bengaluru is organizing a unique exhibition of 3D pictures and videos which explore entire Mahamastakabhisheka at Shravanabelagola at MG road Rangoli metro
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more