ಬಳ್ಳಾರಿ ರಸ್ತೆ 18 ತಿಂಗಳು ಸಂಪೂರ್ಣ ಬಂದ್ ಇಲ್ಲ, ಏಕಮುಖ ಸಂಚಾರಕ್ಕೆ ಅವಕಾಶ: BDA ಅಧ್ಯಕ್ಷ ಹ್ಯಾರಿಸ್ ಸ್ಪಷ್ಟನೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿರುವ ಬಳ್ಳಾರಿ ರಸ್ತೆಯನ್ನ 18 ತಿಂಗಳ ಕಾಲ ಸಂಪೂರ್ಣವಾಗಿ ಮುಚ್ಚಲಾಗುತ್ತದೆ ಎಂಬ ವರದಿಗಳ ಬಗ್ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಸ್ಪಷ್ಟನೆ ನೀಡಿದೆ.

ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನಿಂದ ಮೇಖ್ರಿ ವೃತ್ತದವರೆಗೆ ನಿರ್ಮಿಸುತ್ತಿರುವ ಎಲಿವೇಟೆಡ್ ರಸ್ತೆ ಕಾಮಗಾರಿಯ ಹಿನ್ನೆಲೆಯಲ್ಲಿ ಬಳ್ಳಾರಿ ರಸ್ತೆ ಸಂಚಾರವನ್ನ 18 ತಿಂಗಳ ಕಾಲ ಸಂಪೂರ್ಣವಾಗಿ ಮುಚ್ಚುವುದಿಲ್ಲ. ಬದಲಾಗಿ, ಕಾಮಗಾರಿ ನಡೆಯುವ ನಿರ್ದಿಷ್ಟ ಲೇನ್‌ನಲ್ಲಿ ಮಾತ್ರ ವಾಹನ ಸಂಚಾರಕ್ಕೆ ನಿರ್ಬಂಧವಿರಲಿದೆ ಎಂದು ಬಿಡಿಎ ತಿಳಿಸಿದ್ದು, ಇದರಿಂದ ಲಕ್ಷಾಂತರ ವಾಹನ ಸವಾರರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

Bellary Road Not Fully Closed For 18 Months Only Heavy Vehicles Restricted BDA Chairman NA Haris

ಒಂದು ಲೇನ್ ನಿರ್ಬಂಧ, ಉಳಿದೆಡೆ ವಾಹನ ಸಂಚಾರಕ್ಕೆ ಅವಕಾಶ

ಶನಿವಾರದಂದು ಮೇಖ್ರಿ ವೃತ್ತ ಸೇರಿದಂತೆ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಹಾಗೂ ಆಯುಕ್ತ ಪಿ. ಮಣಿವಣ್ಣನ್, ಸಂಚಾರ ಪೊಲೀಸ್ ಅಧಿಕಾರಿಗಳೊಂದಿಗೆ ಮಹತ್ವದ ಚರ್ಚೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಹ್ಯಾರಿಸ್, "ಬಳ್ಳಾರಿ ರಸ್ತೆಯು ಪ್ರತಿ ಬದಿಯಲ್ಲಿ 3 ಲೇನ್‌ಗಳನ್ನ ಹೊಂದಿದೆ. ಕಾಮಗಾರಿಗೆ ಬಳಸುವ ಬ್ಯಾರಿಕೇಡ್‌ಗಳನ್ನ ಕೇವಲ 4.5 ಮೀಟರ್‌ಗೆ ಮಾತ್ರ ಸೀಮಿತಗೊಳಿಸಲಾಗುತ್ತದೆ. ಇದರಿಂದ ಕೇವಲ ಒಂದು ಲೇನ್‌ನಲ್ಲಿ ಮಾತ್ರ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಉಳಿದ 2 ಲೇನ್ ಹಾಗೂ ಸರ್ವೀಸ್ ರಸ್ತೆಯಲ್ಲಿ ಎಂದಿನಂತೆ ವಾಹನಗಳು ಮುಕ್ತವಾಗಿ ಸಂಚರಿಸಬಹುದು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಟ್ರಾಫಿಕ್ ನಿರ್ವಹಿಸಲು ಪೊಲೀಸರಿಗೆ ಸೂಚಿಸಲಾಗಿದೆ" ಎಂದು ಸ್ಪಷ್ಟಪಡಿಸಿದರು.

ಬಳ್ಳಾರಿ ರಸ್ತೆಯಲ್ಲಿ ಪ್ರಸ್ತಾಪಿತ ಸಂಚಾರ ನಿಯಮಗಳು

ಹೊಸ ನಿಯಮಗಳ ಪ್ರಕಾರ, ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಸುಗಮ ಸಂಚಾರಕ್ಕೆ ಯಾವುದೇ ಅಡ್ಡಿಯಿರುವುದಿಲ್ಲ. ಶಾಲಾ ಮಕ್ಕಳ ಬಸ್‌ಗಳು, ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳ ಓಡಾಟಕ್ಕೂ ಎಂದಿನಂತೆ ಅವಕಾಶ ಕಲ್ಪಿಸಲಾಗಿದೆ.

ಆದರೆ, ಭಾರಿ ಟ್ರಾಫಿಕ್ ದಟ್ಟಣೆಯನ್ನ ತಪ್ಪಿಸುವ ಉದ್ದೇಶದಿಂದ, ಕೇವಲ ಭಾರಿ ಮತ್ತು ಲಘು ಸರಕು ಸಾಗಣೆ ವಾಹನಗಳ (ಲಾರಿ/ಟ್ರಕ್) ಪ್ರವೇಶಕ್ಕೆ ಮಾತ್ರ ಈ ಮಾರ್ಗದಲ್ಲಿ ನಿರ್ಬಂಧ ವಿಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ನಿಲ್ದಾಣಕ್ಕೆ ಸಿಗ್ನಲ್ ಮುಕ್ತ ಸಂಪರ್ಕ ಮತ್ತು 18 ತಿಂಗಳ ಗಡುವು

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೆ ತ್ವರಿತ ಹಾಗೂ ಸಿಗ್ನಲ್‌ಮುಕ್ತ ಸಂಪರ್ಕ ಕಲ್ಪಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ. ಈ ನಿಟ್ಟಿನಲ್ಲಿ ಮೇಖ್ರಿ ವೃತ್ತದಲ್ಲಿ ರೋಟರಿ ಸಹಿತ ಎಲಿವೇಟೆಡ್ ಕಾರಿಡಾರ್ ನಿರ್ಮಿಸಲಾಗುತ್ತಿದ್ದು, ಕಾಮಗಾರಿಯನ್ನ ನಿಗದಿತ 18 ತಿಂಗಳ ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗುವುದು.

ಇದರ ಜೊತೆಗೆ ಹೆಬ್ಬಾಳ ಕೆರೆ ಬಳಿಯಿರುವ ಸುರಂಗ ಮಾರ್ಗದ ಕೆಲಸವನ್ನೂ ತ್ವರಿತವಾಗಿ ಪೂರ್ಣಗೊಳಿಸಲು ಬಿಡಿಎ ಬದ್ಧವಾಗಿದೆ ಎಂದು ಹ್ಯಾರಿಸ್ ಭರವಸೆ ನೀಡಿದರು.

ಪರ್ಯಾಯ ಮಾರ್ಗಗಳ ದುರಸ್ತಿಗೆ ಬಿಡಿಎ ಹಾಗೂ ಜಿಬಿಎ ಸಮನ್ವಯ

ಪರಿಶೀಲನೆ ವೇಳೆ ಬಿಡಿಎ ಅಧ್ಯಕ್ಷರು ಮತ್ತು ಆಯುಕ್ತರು, ನಗರ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಕಾರ್ತಿಕ್ ರೆಡ್ಡಿ ಅವರೊಂದಿಗೆ ರಸ್ತೆ ಮಾರ್ಗ ಬದಲಾವಣೆ ಮತ್ತು ಪರ್ಯಾಯ ಮಾರ್ಗಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿದರು. ಬ್ಯಾಪ್ಟಿಸ್ಟ್ ಆಸ್ಪತ್ರೆ, ಸಿಬಿಐ ಜಂಕ್ಷನ್, ಹೆಬ್ಬಾಳ ಫ್ಲೈಓವರ್ ಇಳಿಜಾರು ಮತ್ತು ಸರ್ವೀಸ್ ರಸ್ತೆಗಳನ್ನು ಪರಿಶೀಲಿಸಲಾಯಿತು.

ನ್ಯೂ ಬಿಇಎಲ್ ರಸ್ತೆ ಮತ್ತು ಆರ್‌ಟಿ ನಗರ (RT Nagar) ಪೊಲೀಸ್ ಠಾಣೆ ರಸ್ತೆ ಸೇರಿದಂತೆ ಗುರುತಿಸಲಾದ ಪರ್ಯಾಯ ಮಾರ್ಗಗಳಲ್ಲಿರುವ ಗುಂಡಿಗಳನ್ನು ಮುಚ್ಚಿ, ದುರಸ್ತಿ ಕಾರ್ಯವನ್ನು ತ್ವರಿತವಾಗಿ ಮುಗಿಸಲು ಬಿಡಿಎ ಹಾಗೂ ಜಿಬಿಎ ಸಮನ್ವಯದಿಂದ ಕೆಲಸ ಮಾಡಲಿವೆ. ಈ ಬಗ್ಗೆ ಸಂಚಾರ ಪೊಲೀಸರೊಂದಿಗೆ ಸಮಾಲೋಚಿಸಿ ವಾಹನ ಸವಾರರಿಗೆ ಸೂಕ್ತ ಪರಿಹಾರವನ್ನು ಒದಗಿಸಲಾಗುವುದು ಎಂದು ಬಿಡಿಎ ಅಧ್ಯಕ್ಷರು ಭರವಸೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+