Get Updates
Get notified of breaking news, exclusive insights, and must-see stories!

ಬೆಳ್ಳಂದೂರು ಮೆಟ್ರೋ ನಿಲ್ದಾಣಕ್ಕೆ ಪ್ರೆಸ್ಟೀಜ್ ಹೆಸರು: ಬಿಎಂಆರ್‌ಸಿಎಲ್‌ ಜೊತೆ 80 ಕೋಟಿ ರೂ. ಮೊತ್ತದ ಒಪ್ಪಂದ

ಬೆಂಗಳೂರು: ನಗರದ ಮೆಟ್ರೋ ಜಾಲದ ಆರ್ಥಿಕತೆಯನ್ನು ಬಲಪಡಿಸುವ ಉದ್ದೇಶದೊಂದಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌) ಹಾಗೂ ಪ್ರೆಸ್ಟೀಜ್ ಗ್ರೂಪ್ ನಡುವೆ ಮಹತ್ವದ ಒಪ್ಪಂದ ನಡೆದಿದೆ. ನಮ್ಮ ಮೆಟ್ರೋದ ಹಂತ-2ಎ ಹೊರ ವರ್ತುಲ ರಸ್ತೆ (ಒಆರ್‌ಆರ್‌) ಕಾರಿಡಾರ್‌ನ ಬೆಳ್ಳಂದೂರು ಮೆಟ್ರೋ ನಿಲ್ದಾಣದ ನಾಮಕರಣ ಹಕ್ಕುಗಳನ್ನು ನೀಡುವ ಕುರಿತು ಈ ಒಪ್ಪಂದ ಒಳಗೊಂಡಿದೆ.

ಈ ಒಪ್ಪಂದದ ಪ್ರಕಾರ, ವಾಣಿಜ್ಯ ಕಾರ್ಯಾಚರಣೆ ಪ್ರಾರಂಭವಾದ ದಿನಾಂಕದಿಂದ ಮುಂದಿನ 30 ವರ್ಷಗಳ ಕಾಲ ಈ ಮೆಟ್ರೋ ನಿಲ್ದಾಣವನ್ನು "ಪ್ರೆಸ್ಟೀಜ್ ಬೆಳ್ಳಂದೂರು ಮೆಟ್ರೋ ನಿಲ್ದಾಣ" ಎಂದು ಕರೆಯಲಾಗುತ್ತದೆ. ನಾಮಕರಣ ಹಕ್ಕುಗಳು ಹಾಗೂ ಇತರ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಒಟ್ಟು ₹80 ಕೋಟಿ ಮೌಲ್ಯದ ಒಪ್ಪಂದ ಇದಾಗಿದೆ.

Bellandur Metro Station

ಇದಲ್ಲದೆ ಮೆಟ್ರೋ ನಿಲ್ದಾಣದಿಂದ ಪ್ರೆಸ್ಟೀಜ್ ಆವರಣಕ್ಕೆ ಸಂಪರ್ಕ ಕಲ್ಪಿಸುವ ವಿಶೇಷ ಪಾದಚಾರಿ ಮೇಲ್ಸೇತುವೆ (ಸ್ಕೈವಾಕ್) ನಿರ್ಮಾಣ ಆಯ್ಕೆಯನ್ನು ಒಳಗೊಂಡಿದ್ದು, ಅದಕ್ಕಾಗಿ ಹೆಚ್ಚುವರಿ ₹10 ಕೋಟಿ ಪಾವತಿಸಬೇಕಾಗುತ್ತದೆ. ಈ ಮೂಲಕ ಒಟ್ಟು ಸಹಭಾಗಿತ್ವದ ಮೌಲ್ಯ ₹90 ಕೋಟಿಗೆ ಏರಲಿದೆ.

ಆದಾಯಕ್ಕೆ ಒತ್ತು

ಮೆಟ್ರೋ ಪ್ರಯಾಣಿಕರಿಂದ ಸಂಗ್ರಹವಾಗುವ ಟಿಕೆಟ್ ಆದಾಯದ ಹೊರತಾಗಿ ನಾನ್-ಫೇರ್ ಬಾಕ್ಸ್ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಈ ಸಹಭಾಗಿತ್ವ ರೂಪಿಸಲಾಗಿದೆ. ಮೆಟ್ರೋ ಜಾಲದ ದೀರ್ಘಕಾಲಿಕ ಆರ್ಥಿಕ ಸ್ಥಿರತೆ ಸಾಧಿಸುವ ದಿಸೆಯಲ್ಲಿ ಇದು ಪ್ರಮುಖ ಹೆಜ್ಜೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಎಂಆರ್‌ಸಿಎಲ್‌ ಸ್ವಾಮ್ಯದಲ್ಲೇ ನಿಲ್ದಾಣ

ಈ ಒಪ್ಪಂದದಡಿ ನಿಲ್ದಾಣದ ನಾಮಕರಣ ಹಕ್ಕುಗಳ ಜೊತೆಗೆ ಗರಿಷ್ಠ 1,000 ಚದರ ಅಡಿ ಒಳಾಂಗಣ ಜಾಹೀರಾತು ಹಕ್ಕುಗಳು ಹಾಗೂ 3,000 ಚದರ ಅಡಿ ವಾಣಿಜ್ಯ ಸ್ಥಳದ ಹಂಚಿಕೆ ನೀಡಲಾಗಿದೆ. ಜೊತೆಗೆ ನಿಗದಿತ ಸುರಕ್ಷತೆ ಮತ್ತು ವಿನ್ಯಾಸ ಮಾನದಂಡಗಳನ್ನು ಪಾಲಿಸಿ ನಿಲ್ದಾಣದ ಒಳಾಂಗಣ ಗುಣಮಟ್ಟವನ್ನು ಮೇಲ್ದರ್ಜೆಗೇರಿಸಲು ಪ್ರೆಸ್ಟೀಜ್ ಗ್ರೂಪ್ ನಿರ್ವಹಣಾ ಜವಾಬ್ದಾರಿ ವಹಿಸಿಕೊಳ್ಳಲಿದೆ. ಆದರೆ, ನಿಲ್ದಾಣವು ಬಿಎಂಆರ್‌ಸಿಎಲ್‌ನ ಸ್ವಾಮ್ಯದಲ್ಲಿಯೇ ಉಳಿಯಲಿದ್ದು, ಕಾರ್ಯಾಚರಣೆ ಮತ್ತು ನಿಯಂತ್ರಣ ಸಂಪೂರ್ಣವಾಗಿ ನಿಗಮದ ವ್ಯಾಪ್ತಿಯಲ್ಲೇ ಇರಲಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಐಟಿ ಕಾರಿಡಾರ್‌ಗೆ ಪ್ರಮುಖ ನಿಲ್ದಾಣ

ಬೆಳ್ಳಂದೂರು ಮೆಟ್ರೋ ನಿಲ್ದಾಣವು ಹೊರ ವರ್ತುಲ ರಸ್ತೆ ಕಾರಿಡಾರ್‌ನ ಪ್ರಮುಖ ನಿಲ್ದಾಣವಾಗಿದ್ದು, ನಗರದ ಐಟಿ ಮತ್ತು ವಾಣಿಜ್ಯ ಕೇಂದ್ರ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಐಟಿ ಕಂಪನಿಗಳು ಹಾಗೂ ವಾಣಿಜ್ಯ ಸಂಕೀರ್ಣಗಳ ಸಮೀಪದಲ್ಲಿರುವುದರಿಂದ ಈ ನಿಲ್ದಾಣದಲ್ಲಿ ಗಣನೀಯ ಪ್ರಮಾಣದ ಪ್ರಯಾಣಿಕರ ಸಂಚಾರ ನಿರೀಕ್ಷಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಪ್ರೆಸ್ಟೀಜ್ ಗ್ರೂಪ್‌ನ ಪ್ರತಿನಿಧಿ ಜಗ್ಗಿ ಮರ್ವಾಹಾ, "ಬೆಂಗಳೂರು ನಗರದ ವೇಗವಾಗಿ ಬೆಳೆಯುತ್ತಿರುವ ಸಾರಿಗೆ ಆಧಾರಿತ ಅಭಿವೃದ್ಧಿ ವಲಯಗಳಲ್ಲಿ ನಗರ ಚಲನವಲನ ಮೂಲಸೌಕರ್ಯಕ್ಕೆ ಬೆಂಬಲ ನೀಡುವುದು ಹಾಗೂ ಪ್ರಯಾಣಿಕರ ಅನುಭವವನ್ನು ಹೆಚ್ಚಿಸುವುದು ನಮ್ಮ ಬದ್ಧತೆ. ಈ ಸಹಭಾಗಿತ್ವ ಅದರ ಪ್ರತಿಬಿಂಬ" ಎಂದಿದ್ದಾರೆ.

ಸಾರ್ವಜನಿಕ ಮಾಲೀಕತ್ವದ ಸಂಸ್ಥೆಯೊಂದಿಗೆ ಖಾಸಗಿ ಭಾಗವಹಿಸುವಿಕೆಯನ್ನು ಸಮರ್ಥವಾಗಿ ಬಳಸಿಕೊಂಡು ಮೆಟ್ರೋ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಈ ಒಪ್ಪಂದ ಮೈಲಿಗಲ್ಲಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+