• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಫೋನ್ ನಂಬರ್ ಶೇರ್ ಮಾಡುವಾಗ ಹುಷಾರ್: ಭಾಸ್ಕರ್ ರಾವ್ ಟ್ವೀಟ್

|

ಬೆಂಗಳೂರು, ಡಿಸೆಂಬರ್ 15: ಟ್ವೀಟ್ಟರ್ ನಲ್ಲಿ ಕ್ರಿಯಾಶೀಲರಾಗಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಸಾರ್ವಜನಿಕ ಅರಿವು ಮೂಡಿಸುವುದರಲ್ಲಿ ಮುಂದು. ಜನಸ್ನೇಹಿ ಟ್ವೀಟ್ ಮೂಲಕ ಸೈಬರ್ ಕ್ರೈಂ ನಡೆಯುವುದನ್ನು ತಡೆಯಲು ಜಾಗೃತಿ ಮೂಡಿಸುತ್ತಿದ್ದಾರೆ.

ಸಾಕ್ಷ್ಯವಿದ್ದರೆ ಮಾತ್ರ ಆರೋಪಿ: ಹೈಕೋರ್ಟ್ ಸ್ಪಷ್ಟನೆ

ಈಗ ಪೊಲೀಸ್ ಆಯುಕ್ತರು, ಸೈಬರ್ ಕ್ರೈಮ್ ತಡೆಗಟ್ಟಲು ಜನರು ಏನುಮಾಡಬೇಕು ಎಂಬುದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಸೈಬರ್ ಕ್ರೈಂ ತಡೆಯಲು ಮೊದಲನೆಯದಾಗಿ, ನಿಮ್ಮ ಮೊಬೈಲ್ ನಂಬರ್ ಗಳನ್ನು ಮಾಲ್ ಅಥವಾ ಶಾಪ್ ಗಳಲ್ಲಿ ಶೇರ್ ಮಾಡಬೇಡಿ, ಅವರೂ ಕೇಳಿದರೂ ನಂಬರ್ ಕೊಡಬೇಡಿ ಎಂದು ಸಲಹೆ ನೀಡಿದ್ದಾರೆ.

ನಿಮ್ಮ ಮೊಬೈಲ್ ನಂಬರ್ ಶೇರ್ ಮಾಡುವುದರಿಂದ ನಿಮ್ಮ ನಂಬರ್ ಡೇಟಾ ಆಗಿ ಮಾರಾಟವಾಗುತ್ತದೆ, ಅದರಿಂದ ಸೈಬರ್ ವಂಚನೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಮೊಬೈಲ್ ಫೋನ್ ನಂಬರ್ ನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಹ ಹಂಚಿಕೊಳ್ಳಬೇಡಿ ಎಂದಿದ್ದಾರೆ.

English summary
Bangalore City Police Commissioner Bhaskar Rao has advised that the first thing to prevent cybercrime is not to share your mobile numbers in malls or shops, even if asked.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X