BDA Villa E-Auction: ಡಿ. 29ರಿಂದ ಬಿಡಿಎ ವಿಲ್ಲಾ ಇ-ಹರಾಜು, ಬೆಲೆ ಮತ್ತು ನಿಯಮಗಳು

ಬೆಂಗಳೂರು, ಡಿಸೆಂಬರ್ 05: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸುಸಜ್ಜಿತ ವಿಲ್ಲಾಗಳನ್ನು ಇ-ಹರಾಜು ಮೂಲಕ ಹಂಚಿಕೆ ಮಾಡಲಿದೆ. ಡಿಸೆಂಬರ್ 29ರಿಂದ ಹರಾಜು ಆರಂಭವಾಗಲಿದ್ದು 'ಎಲ್ಲಿ ಹೇಗಿವೆಯೋ ಹಾಗಿರುವ ಸ್ಥಿತಿಯಲ್ಲಿ' ಹರಾಜು ಮಾಡಲಾಗುತ್ತದೆ ಎಂದು ಬಿಡಿಎ ಹೇಳಿದೆ. ಆಸಕ್ತರು ಆರಂಭಿಕ ಠೇವಣಿ ಮೊತ್ತವನ್ನು ಪಾವತಿ ಮಾಡಿ 4ಬಿಹೆಚ್‌ಕೆ, 3 ಬಿಹೆಚ್‌ಕೆ ವಿಲ್ಲಾಗಳನ್ನು ಪಡೆಯಬಹುದು. ಇ-ಹರಾಜಿನಲ್ಲಿ ಪಾಲ್ಗೊಳ್ಳಲು ಇರುವ ನಿಯಮಗಳ ಮಾಹಿತಿ ಇಲ್ಲಿದೆ.

ಬಿಡಿಎ ಹುಣ್ಣಿಗೆರೆ ಗ್ರಾಮದಲ್ಲಿರುವ ಡಾ. ಪುನೀತ್ ರಾಜ್‌ಕುಮಾರ್ ವಸತಿ ಯೋಜನೆಯಲ್ಲಿರುವ ಸುಸಜ್ಜಿತ ವಿಲ್ಲಾಗಳನ್ನು ಇ-ಹರಾಜು ಮೂಲಕ ಹಂಚಿಕೆ ಮಾಡಲಿದೆ. ಈ ವಿಲ್ಲಾಗಳ ಹರಾಜು ಮತ್ತು ಮಾರಾಟವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಾಣಿಜ್ಯ ನಿವೇಶನಗಳು ಮತ್ತು ಮೂಲೆ ನಿವೇಶನಗಳ ವಿಲೇವಾರಿ ನಿಯಮಾವಳಿ 1984ರ ಅನುಸಾರ ನಡೆಸಲಾಗುತ್ತದೆ ಎಂದು ಬಿಡಿಎ ಹೇಳಿದೆ.

BDA Villas E Auction From December 29th Know Price And Rules

ಇ-ಹರಾಜು ರೂ. 1,00,000ಗಳ ಗುಣಕಗಳಲ್ಲಿ ಬಿಡ್ ದರದ ಕನಿಷ್ಠ ಏರಿಕೆ ಇರುತ್ತದೆ ಎಂದು ಬಿಡಿಎ ಹೇಳಿದೆ. ಇ-ಹರಾಜಿನಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವವರು ನೋಂದಣಿ ಮಾಡಿಸಲು ಕೊನೆಯ ದಿನಾಂಕ 13/12/2024 ಸಂಜೆ 5 ಗಂಟೆ. ವಿಲ್ಲಾಗಳ ಅಳತೆ, ಬಾಗಿಲು ಇರುವ ದಿಕ್ಕು ಆರಂಭಿಕ ಬೆಲೆಗಳ ಮಾಹಿತಿಯನ್ನು ಬಿಡಿಎ https://kbda.karnataka.gov.in/Kannada/E-auction.html ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಇ-ಹರಾಜು ನಿಯಮಗಳು: ಹರಾಜಿನಲ್ಲಿ ಭಾಗವಹಿಸುವವರು ಭಾರತೀಯ ಪ್ರಜೆಯಾಗಿರಬೇಕು. ಪ್ರತಿ ವಿಲ್ಲಾಗೆ ಇಎಂಡಿ ಮೊತ್ತ ರೂ. 4 ಲಕ್ಷ ನಿಗದಿಗೊಳಿಸಿದ್ದು, ಸದರಿ ಮೊತ್ತವನ್ನು ಇ-ಹರಾಜಿನ ಶುಲ್ಕದೊಂದಿಗೆ ಇ-ಪ್ರೊಕ್ಯೂರ್ ಮೆಂಟ್ ಪೋರ್ಟಲ್‌ನಲ್ಲಿರುವಂತೆ ಪಾವತಿ ಮಾಡಬೇಕು. ಆದರೆ ಇ-ಹರಾಜು ಪೋರ್ಟಲ್‌ಗೆ ಬದಲಿಗೆ ಬಿಡಿಎ ಖಾತೆಗೆ ಸಲ್ಲಿಸಿದರೆ ಮರುಪಾವತಿಯ ಸಮಯದಲ್ಲಿ ಇಎಂಡಿ ಮೇಲಿನ ಶೇ. 5 ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ ಎಂದು ತಿಳಿಸಿದೆ.

ಇಎಂಡಿ ಮೊತ್ತ ರೂ. 4 ಲಕ್ಷ ಕಡಿತಗೊಳಿಸದ ನಂತರ ಇ-ಹರಾಜು ಮುಗಿದ ಸಮಯದಿಂದ 72 ಗಂಟೆಗಳ ಒಳಗೆ (ಬ್ಯಾಂಕ್ ರಜಾ ದಿನಗಳನ್ನು ಹೊರತುಪಡಿಸಿ) ಒಟ್ಟು ವೆಚ್ಚದ ಶೇ.25 ರಷ್ಟನ್ನು ಬಿಡಿಎ ಬ್ಯಾಂಕ್ ಖಾತೆಗೆ ಪಾವತಿಸಲು ಯಶಸ್ವಿ ಬಿಡ್‌ದಾರರಿಗೆ (ಅತಿ ಹೆಚ್ಚು ಬಿಡ್‌ದಾರರಿಗೆ) ಇ-ಮೇಲ್ ಮೂಲಕ Advise Letter ಕಳುಹಿಸಲಾಗುವುದು, ಹಣದ ವರ್ಗಾವಣೆಗಾಗಿ ಚಲನ್‌ಗಳನ್ನು ಆರ್ಥಿಕ ಶಾಖೆಯ ಲೆಕ್ಕಾಧಿಕಾರಿ, (ಡಿ ಬ್ಲಾಕ್, 2 ನೇ ಮಹಡಿ, ಕೊಠಡಿ ಸಂಖ್ಯೆ 308) ಇಲ್ಲಿಗೆ ಸಲ್ಲಿಸಬೇಕು. ನಿಗದಿತ ಸಮಯದೊಳಗೆ ಶೇ.25 ಮೌಲ್ಯವನ್ನು ಪಾವತಿಸಲು ವಿಫಲವಾದಲ್ಲಿ ಇಎಂಡಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಬಿಡ್ಡುದಾರರು ತಮ್ಮ ಸ್ವಂತ ಬ್ಯಾಂಕ್‌ ಖಾತೆಯಿಂದ ಮಾತ್ರ ಇಎಂಡಿ/ ಶೇ 25 ಹಣವನ್ನು ಪಾವತಿಸಬೇಕು.

ಯಶಸ್ವಿ ಬಿಡ್ಡುದಾರರು ಶೇ.25 ರಷ್ಟು ಬಿಡ್ ಹಣವನ್ನು ಪಾವತಿಸಿದ ಬಳಿಕ ಉಳಿದ ಹಣ ಶೇ.75 ಹಣವನ್ನು ಬಿಡಿಎಯಿಂದ ಪತ್ರ ತಲುಪಿದ 45 ದಿನಗಳೊಳಗಾಗಿ ಪಾವತಿಸತಕ್ಕದು. ಯಶಸ್ವಿಯಾಗದ ಬಿಡ್ಡುದಾರರಿಗೆ ಇಎಂಡಿ ಹಣ 4 ಲಕ್ಷ ರೂ.ಗಳನ್ನು ಒಂದು ತಿಂಗಳ ಒಳಗಾಗಿ ಅವರ ಖಾತೆಗೆ ಹಿಂತಿರುಗಿಸಲಾಗುವುದು.

ಇನ್ನಿತರೆ ಸಾಮಾನ್ಯ ಷರತ್ತು ಮತ್ತು ನಿಯಮ-ನಿಬಂಧನೆಗಳಿಗೆ ವೆಬ್‌ಸೈಟ್ www.kbda.karnataka.gov.in ಗೆ ಭೇಟಿ ನೀಡಿ. ಇ-ಪರಾಜು ನಿವೇಶನಗಳಿಗೆ ಕನಿಷ್ಠ 2 ಬಿಡ್‌ದಾರರು ಇರಬೇಕು. ಒಂದೇ ಬಿಡ್ಡರ್ ಅನ್ನು ತಿರಸ್ಕರಿಸಲಾಗುತ್ತದೆ. ಬಿಡ್ಡಿಂಗ್ ಸಮಯದಲ್ಲಿ, ಅದೇ ವಿಲ್ಲಾಗಳಿಗೆ ಅಡ್ಡ ಹೆಸರುಗಳ ಯಾವುದೇ ನಕಲು ಇದ್ದರೆ, ಅಂತಹ ಬಿಡ್ ಅನ್ನು ಯಾವುದೇ ಕಾರಣಗಳನ್ನು ನೀಡದೆ ತಿರಸ್ಕರಿಸಲಾಗುತ್ತದೆ.

ಇ-ಹರಾಜು ಬಿಡ್ಡುದಾರರು ವೆಬ್‌ಸೈಟ್ https://kppp.karnataka.gov.inಗೆ ಲಾಗ್‌ ಇನ್ ಮಾಡುವ ಮೂಲಕ ಹೊಸ ಇ-ಹರಾಜು ಬಿಡ್ಡಿಂಗ್ ಬಳಕೆದಾರರ ಕೈಪಿಡಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಪಬ್ಲಿಕ್ ಪ್ರೊಡ್ಯೂರ್‌ಮೆಂಟ್ ಪೋರ್ಟಲ್ ಅನ್ನು ನೋಡಿ ಅಥವ 080-46010000080 ಮತ್ತು 68948777 ಸಂಖ್ಯೆಗೆ ಕರೆ ಮಾಡಿ.

ಬಿಡ್ಡುದಾರರು ನಿಗದಿತ ಮಾದರಿ ಸಹಿ ನಮೂನೆಯನ್ನು (ಇದರಲ್ಲಿನ ಅರ್ಜಿದಾರರ ಹೆಸರು ಮತ್ತು ತಂದೆಯ ಹೆಸರು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ) ಮತ್ತು ಸಂಪರ್ಕ ಮಾಹಿತಿ ಸ್ವರೂಪವನ್ನು ವೆಬ್‌ಸೈಟ್ https:/kppp.karnataka.gov.in ನಿಂದ ಡೌನ್‌ ಲೋಡ್ ಮಾಡಿ, ವಿವರಗಳನ್ನು ಭರ್ತಿ ಮಾಡಿ ಮತ್ತು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವುದು.

ವಿಲ್ಲಾದ ಜಂಟಿ ಖರೀದಿದಾರರು ಒದಗಿಸಿದ ಸ್ವರೂಪದಲ್ಲಿ ಜಂಟಿ ಹೆಸರನ್ನು ನಿರ್ದಿಷ್ಟಪಡಿಸಬೇಕು ಮತ್ತು ಇ-ಹರಾಜು ಪೋರ್ಟಲ್‌ನಲ್ಲಿ ತಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮದುವೆ ಪ್ರಮಾಣಪತ್ರ, ಪಾಸ್‌ಪೋರ್ಟ್ ಅಥವಾ ಯಾವುದೇ ಇತರ ಸರ್ಕಾರ ನೀಡಿದ ದಾಖಲೆಗಳನ್ನು ಜಂಟಿಯಾಗಿ ಅಪ್‌ಲೋಡ್ ಮಾಡಬೇಕು. ಜಂಟಿ ನೋಂದಣಿಗಾಗಿ ತಡವಾಗಿ ಸಲ್ಲಿಸುವ ವಿನಂತಿಗಳನ್ನು ತಿರಸ್ಕರಿಸಲಾಗುತ್ತದೆ.

ಯಶಸ್ವಿ ಬಿಡ್ಡುದಾರರಿಗೆ ಹರಾಜಾದ ವಿಲ್ಲಾಗಳನ್ನು ಅವು ಹೇಗಿದೆಯೋ ಅದೇ ಸ್ಥಿತಿಯಲ್ಲಿ ಹಂಚಲಾಗುತ್ತದೆ. ಇ-ಹರಾಜಿನಲ್ಲಿ ಭಾಗವಹಿಸುವ ಬಿಡ್ಡುದಾರರು ಬಿಡ್ ಮಾಡುವ ಮೊದಲು ವಿಲ್ಲಾಗಳಿರುವ ಸ್ಥಳ, ರಸ್ತೆಯ ಅಗಲ ಇತ್ಯಾದಿ ವಿಷಯಗಳನ್ನು ಭೌತಿಕವಾಗಿ ಪರಿಶೀಲಿಸ ಬೇಕು. ಇ-ಹರಾಜಿನ ಮೂಲಕ ನೀಡಲಾದ ವಿಲ್ಲಾಗಳನ್ನು ರದ್ದುಗೊಳಿಸಲಾಗುವುದಿಲ್ಲ/ ಬದಲಿಯಾಗಿ ನೀಡಲಾಗುವುದಿಲ್ಲ.

ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಇ-ಹರಾಜಿನ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು (ಗೆಜೆಟೆಡ್ ಅಧಿಕಾರಿ/ ನೋಟರಿಯಿಂದ/ ಭಾರತೀಯ ಅನಿವಾಸಿಯಾಗಿದ್ದಲ್ಲಿ (ಎನ್.ಆರ್.ಐ) ಎಂಬೆಸ್ಸಿ ಕಛೇರಿಯಿಂದ ದೃಢೀಕೃತಗೊಂಡಿರಬೇಕು). ಇ-ಹರಾಜಿನಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಭಾರತೀಯ ಅನಿವಾಸಿಗರು ಇ-ಹರಾಜಿನಲ್ಲಿ ಭಾಗವಹಿಸುವ ಬಿಡ್ಡುದಾರರು ಮೇಲೆ ನಿರ್ದಿಷ್ಟಪಡಿಸಿದ ಎಲ್ಲಾ ನಿಯಮಗಳು ಮತ್ತು ನಿಬಂಧನೆಗಳಿಗೆ ಬದ್ಧವಾಗಿರಬೇಕು. ಸ್ವ-ಪ್ರಮಾಣ ದೃಢೀಕರಣ ಪತ್ರ (Self Attested) ವನ್ನು ಅಪ್‌ಲೋಡ್ ಮಾಡಬಹುದು.

ಯಶಸ್ವಿ ಬಿಡ್‌ದಾರರು ತದನಂತರ ಭಾರತೀಯ ರಾಯಭಾರಿ ಕಛೇರಿ (ಎಂಬೆಸ್ಸಿ) ಯಿಂದ ಪಡೆದ ದೃಢೀಕೃತ ಪತ್ರವನ್ನು ನೀಡಬೇಕು. ಇ-ಹರಾಜಿಗೆ ಸಂಬಂಧಿಸಿದಂತೆ ಬಿಡ್ಡುದಾರರು ಯಾವುದೇ ಮಧ್ಯವರ್ತಿಗಳನ್ನು ಸಂಪರ್ಕಿಸದೇ ನೇರವಾಗಿ ಪ್ರಾಧಿಕಾರವನ್ನು ಸಂಪರ್ಕಿಸುವುದು. ಬಿಡ್‌ದಾರರು ಬಿಡ್ ಮಾಡುವ ಮೊದಲು ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ಓದಬೇಕು ಮತ್ತು ಅದರ ಪ್ರಕಾರ ಭಾಗವಹಿಸಬೇಕು.

ಇತರ ಮಾಹಿತಿ ಮತ್ತು ನಿಯಮ ನಿಬಂಧನೆಗಳಿಗೆ https://kppp.karnataka.gov.in ಲಾಗಾನ್ ಆಗಿ ಬಿಡಿಎ ವಿಲ್ಲಾಗಳ ವಿವರಗಳಿಗೆ ಸಂಬಂಧಿಸಿದಂತೆ 080-23368435/23368036 ಹಾಗೂ ಕೆಪಿಪಿಪಿನ ತಾಂತ್ರಿಕ ವಿಚಾರಣೆಗೆ ಸಂಬಂಧಿಸಿದಂತೆ 080-46010000/ 68948777 ಸಂಪರ್ಕಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+