BDA Villa Mela: ಬೆಂಗಳೂರಿನ ಈ ಭಾಗದಲ್ಲಿ ವಿಲ್ಲಾ ಮೇಳ: ಯಾವಾಗ ಹಾಗೂ ಎಲ್ಲಿ ತಿಳಿಯಿರಿ

BDA Villa Mela: ರಾಜ್ಯ ರಾಜಧಾನಿ ಬೆಂಗಳೂರು ಇದೀಗ ರಿಯಲ್‌ ಎಸ್ಟೇಟ್‌ ಅಡ್ಡವಾಗಿಬಿಟ್ಟಿದೆ. ದಿನದಿಂದ ದಿನಕ್ಕೆ ನಗರ ಬೆಳೆಯುತ್ತಿದ್ದು, ಈ ನಡುವೆಯೇ ವಸತಿಗಳ ಬೆಲೆಯು ಗಗನಕ್ಕೇರುತ್ತಲಿದೆ. ಅಲ್ಲದೆ, ಆಗಾಗ ಬಿಡಿಎ ಸೈಟ್‌ಗಳನ್ನು ಹಾರಾಜು ಮೂಲಕ ಮಾರಾಟ ಮಾಡುತ್ತಲೇ ಇರುತ್ತದೆ. ಹಾಗೆಯೇ ಏಪ್ರಿಲ್‌ 26ರಂದು ವಿಲ್ಲಾ ಮೇಳವನ್ನು ಆಯೋಜನೆ ಮಾಡಿದೆ. ಹಾಗಾದ್ರೆ ಎಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಬಿಡಿಎ ಖಾಸಗಿ ರಿಯಲ್‌ ಎಸ್ಟೇಟ್‌ ಕಂಪನಿಗಳಿಗೆ ಪೈಪೋಟಿ ನೀಡುವಂತೆ ಆಕರ್ಷಕ ವಿಲ್ಲಾಗಳನ್ನು ಅಭಿವೃದ್ಧಿಪಡಿಸುತ್ತಲಿದೆ. ಇದೀಗ ಪುನೀತ್‌ ರಾಜ್‌ಕುಮಾರ್‌ ವಸತಿ ಸಮುಚ್ಚಯ ಹೆಸರಿನ ದುಬಾರಿ ಬೆಲೆಯ ಆಕರ್ಷಣೀಯ ಆಗಿರುವ ವಿಲ್ಲಾಗಳನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ವಿಜಯಕರ್ನಾಟಕ ವರದಿ ಮಾಡಿದೆ.

BDA Villa Mela in This Area of Bengaluru on April 26

ಬಿಡಿಎ ಹುಣ್ಣಿಗೆರೆಯಲ್ಲಿ ನಿರ್ಮಿಸಿರುವ ಡಾ.ಪುನೀತ್‌ ರಾಜ್‌ಕುಮಾರ್‌ ವಸತಿ ಸಮುಚ್ಚಯದ ಘಟಕಗಳನ್ನು ಮಾರಾಟ ಮಾಡಲು ಏಪ್ರಿಲ್‌ 26ರಂದು ವಿಲ್ಲಾ ಮೇಳ ಆಯೋಜಿಸಿದ್ದು, ಮೇಳವು ಅಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ನಡೆಯಲಿದೆ.

ಪ್ರಾಧಿಕಾರದ ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳು ನಾಗರಿಕರಿಗೆ ಲಭ್ಯ ವಿಲ್ಲಾಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಈ ಘಟಕಗಳನ್ನು ವೀಕ್ಷಣೆ ಮಾಡಿ ಇಷ್ಟ ಆದರೆ, ವಿಲ್ಲಾದ ಒಟ್ಟು ಮೌಲ್ಯದ 12.5 ಠೇವಣಿ ಮೊತ್ತ ಪರಿಶಿಷ್ಟರಿಗೆ ಶೇಕಡ 50 ರಿಯಾಯಿತಿ ಇರಲಿದೆ. ಆರ್‌ಟಿಜಿಎಸ್‌, ಎನ್‌ಎಫ್‌ಟಿ ಅಥವಾ ಡಿಡಿ ಸಲ್ಲಿಕೆ ಮಾಡಿದರೆ ಸ್ಥಳದಲ್ಲೇ ಹಂಚಿಕೆ ಪತ್ರ ನೀಡಲಾಗುತ್ತದೆ.

ಬಿಡಿಎ ನಿರ್ಮಾಣ ಮಾಡಿರುವ ವಿಲ್ಲಾ ಸಮುಚ್ಚಯದಲ್ಲಿ ಇಟ್ಟು 352 ಘಟಕಗಳಿವೆ 4 ಬಿಎಚ್‌ಕೆ, 3 ಬಿಎಚ್‌ಕೆ ದೇಸಿ ಶೈಲಿ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಮೇಳದಲ್ಲಿ 240 ಘಟಕಗಳು ಮಾರಾಟಕ್ಕೆ ಲಭ್ಯ ಇದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆ ಮಾದರಿಯಲ್ಲಿ ಹಂಚಿಕೆ ಮಾಡುವ ವಿಧಾನ ಅಳವಡಿಕೆ ಮಾಡಿಕೊಳ್ಳಲಾಗಿದೆ ಎಂದು ಬಿಡಿಎ ಅಭಿಯಂತರ ಸದಸ್ಯ ಡಾ.ಎ.ಲೋಕೇಶ್‌ ತಿಳಿಸಿದ್ದಾರೆ.

ಸೌಲಭ್ಯಗಳ ವಿರವ: ಪುನೀತ್‌ ರಾಜ್‌ಕುಮಾರ್‌ ವಸತಿ ಸಮುಚ್ಚಯವು ಒಟ್ಟು 26 ಹೆಕ್ಟೇರ್‌ ವಿಸ್ತೀರ್ಣ ಹೊಂದಿರುವುದು ವಿಶೇಷ. ಎಲ್ಲಾ ವಿಲ್ಲಾಗಳಿಗೂ ದ್ವಿ ಕೊಳವೆ, ನೀರಿನ ಸಂಪರ್ಕ, ಒಳ ಚರಂಡಿ, ನೀರಿನ ಟ್ಯಾಂಕ್‌, ಸಂಪ್‌ ಸೌಲಭ್ಯ ಕಲ್ಪಿಸಲಾಗಿದೆ. ಮನೆ ಮುಂದೆ ಮಿನಿ ಲಾನ್‌, ಪಾರ್ಕಿಂಗ್‌ ಸೌರ ವಿದ್ಯುತ್‌, ಮಳೆ ನೀರು ಕೊಯ್ಲು ಎಸ್‌ಟಿಪಿ ವ್ಯವಸ್ಥೆ ಇದೆ.

ದರಗಳ ವಿವರ: 1844.20 ವಿಸ್ತೀರ್ಣ ಹೊಂದಿರುವ 4 ಬಿಎಚ್‌ಕೆ ವಿಲ್ಲಾ 1.26 ಕೋಟಿ ರೂಪಾಯಿ, 1804.80 ವಿಸ್ತೀರ್ಣ ಹೊಂದಿರುವ 4 ಬಿಎಚ್‌ಕೆ ಟೈಪ್‌ 2 ವಿಲ್ಲಾ 1.26 ಕೋಟಿ ರೂಪಾಯಿ ಆಗಿರಲಿದೆ. ಇನ್ನೂ 1737.40 ವಿಸ್ತೀರ್ಣ ಹೊಂದಿರುವ 3 ಬಿಎಚ್‌ಕೆ ವಿಲ್ಲಾ 1.15 ಕೋಟಿ ರೂಪಾಯಿ ಆಗಿರಲಿದೆ. 1274.50 ಬಿಎಚ್‌ಕೆ ಟೈಪ್‌ 2ನ ವಿಲ್ಲಾ 90 ಲಕ್ಷ ರೂಪಾಯಿ ಇರಲಿದೆ. 1274.50 3 ಬಿಎಚ್‌ಕೆ ಟೈಪ್ 2.90 ಲಕ್ಷ ರೂಪಾಯಿ ಇರಲಿದೆ ಎನ್ನಲಾಗಿದೆ.

ಪುನೀತ್‌ ರಾಜ್‌ಕುಮಾರ್‌ ಹೌಸಿಂಗ್‌ ಕಾಂಪ್ಲೆಕ್ಸ್‌ ಅಥವಾ ಪುನಿತ್‌ ರಾಜ್‌ಕುಮಾರ್‌ ವಸತಿ ಸಮುಚ್ಚಯ ಹೆಸರಿನ ಈ ಮಹಾತ್ವಕಾಂಕ್ಷಿ ಪ್ರಾಜೆಕ್ಟ್‌ ಅನ್ನು ಬಿಡಿಎ 2018ರಲ್ಲಿ ಆರಂಭ ಮಾಡಿತ್ತು. ಇದೀಗ ಈ ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿದೆ. ಎಲ್ಲವೂ ಅಂದುಕೊಂಡಂತೆಯೇ ಆದರೆ ಇದೇ ಕನ್ನಡ ರಾಜ್ಯೋತ್ಸವದ ದಿನದಂದು ಈ ಯೋಜನೆ ಉದ್ಘಾಟನೆಗೊಳ್ಳಲಿದೆ ಎಂದು ತಿಳಿದುಬಂದಿದೆ. ಹೀಗೆ ಬಿಡಿಎ ಆಗಾಗ ಬಿಡಿಎ ಸೈಟ್‌ಗಳನ್ನು ಹರಾಜಿಗೆ ಇಡುತ್ತಲೇ ಇರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+