BDA Site: ಬೆಂಗಳೂರು ನಿವೇಶನ ಖರೀದಿದಾರರಿಗೆ ಗುಡ್ ನ್ಯೂಸ್ ಕೊಟ್ಟ ಬಿಡಿಎ, ಮಹತ್ವದ ಮಾಹಿತಿ
ಬೆಂಗಳೂರು, ಜೂನ್ 24: ರಾಜಧಾನಿ ಬೆಂಗಳೂರಿಗೆ ಬೇರೆ ಬೇರೆ ಊರುಗಳಿಂದ ಬಂದು ಬುದುಕು ಕಟ್ಟಿಕೊಂಡ ಮಂದಿ ಸಾಕಷ್ಟಿದೆ. ಒಂದು ಹಂತಕ್ಕೆ ಬಂದು ಆರ್ಥಿಕತೆ ಸುಧಾರಿಸಿದ ಮೇಲೆ ನಗರದಲ್ಲೇ ಒಂದು ಸುಂದರ ಮನೆ ಕಟ್ಟಿಕೊಳ್ಳಬೇಕು. ತಮಗಾಗಿ ಇಲ್ಲಿ ಸೂರಿದ್ದರೆ ಚೆಂದ ಎಂದು ಆಲೋಚಿಸುವವರೇ ಹೆಚ್ಚು. ಈ ಕಾರಣದಿಂದಲೇ ಬಿಡಿಎ ಮತ್ತು ಬಿಬಿಎಂಪಿ ಸೈಟ್‌ಗಳ ಬೆಲೆ ಹೆಚ್ಚಿಸಿದ್ದರು ಸಹಿತ ಬೇಡಿಕೆ ಕಂಡು ಬರುತ್ತದೆ. ಹರಾಜಿನಲ್ಲಿ ಸೈಟ್ ಇಲ್ಲವೇ ನಿವೇಶನಗಳನ್ನು ಖರೀದಿಸುತ್ತಾರೆ. ನೀವು ಇಂತಹ ಹರಾಜಿನಲ್ಲಿ ಪಾಲ್ಗೊಳ್ಳಲು ಅವಕಾಶ ಬಂದೊದಗಿದೆ. ಬಿಎಡಿ ಮನೆ ಖರೀದಿದಾರರಿಗೆ ಸಿಹಿ ಸುದ್ದಿ ಇದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಇ-ಹರಾಜಿನ ಮೂಲಕ 133 ಮೂಲೆ ಅಥವಾ ಮಧ್ಯಂತರ ನಿವೇಶನಗಳನ್ನು ಮಾರಾಟಕ್ಕೆ ಮುಂದಾಗಿದೆ. ಈ ಸಂಬಂಧ ಆಸಕ್ತರನ್ನು ಹರಾಜಿನಲ್ಲಿ ಪಾಲ್ಗೊಳ್ಳುವಂತೆ ಅವಕಾಶ ನೀಡಿದೆ. ಇ-ಹರಾಜು ಹಾಗೂ ನೇರ ಹರಾಜು ಪ್ರಕ್ರಿಯೆಯನ್ನು ಆರಂಭಿಸಲಿದೆ. ಯಾವುದೇ ತಕರಾರು ಇಲ್ಲದ, ಸೂಕ್ತ ನಿವೇಶನ ನೀವು ಹುಡುಕುತ್ತಿದ್ದರೆ ಅಂತವರನ್ನು ಬಿಡಿಎ ಆಹ್ವಾನಿಸಿದೆ.

ಬಿಡಿಎ ಸೈಟ್ ಹರಾಜಿನ ದಿನಾಂಕಗಳು
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಒಟ್ಟು 133 ಕಾರ್ನರ್ ಸೈಟ್‌ಗಳನ್ನು ಹರಾಜು ಮೂಲಕ ಮಾರಾಟಕ್ಕೆ ಗುರುತಿಸಿದೆ. ಈ ನಿವೇಶನಗಳ ಮಾರಾಟವನ್ನು ಇ-ಹರಾಜಿನಲ್ಲಿ ಮುಂದಿನ ತಿಂಗಳ ಜುಲೈ 19 ರಂದು ನಡೆಸಲಿದೆ. ನಂತರ ಜುಲೈ 21ರಂದು ನೇರ (ಲೈವ್) ಹರಾಜು ನಡೆಸಲಿದೆ. ಈ ದಿನಾಂಕವೇ ಕೊನೆದಿನವಾಗಿದೆ. ನಿಗದಿತ ದಿನಾಂಕದಲ್ಲಿ ಬಂದು ಬಿಡ್ ಮಾಡಬಹುದಾಗಿದೆ. ಹರಾಜಿನಲ್ಲಿ ಪಾಲ್ಗೊಂಡು ಕನಸಿನ ಮನೆ ನಿರ್ಮಾಣದ ಪ್ರಕ್ರಿಯೆಯನ್ನು ನೀವು ಆರಂಭಿಸಬಹುದಾಗಿದೆ.
ಯಾವ ವಿಳಾಸದಲ್ಲಿವೆ ಹರಾಜಿನ ನಿವೇಶನಗಳು
ಬಿಡಿದ ವಿವಿಧ ಬಡಾವಣೆಗಳಲ್ಲಿ ನಿವೇಶನಗಳನ್ನು ಗುರುತಿಸಿದೆ. ಅಂಜನಾಪುರ ಟೌನ್‌ಶಿಪ್, ಜೆಪಿ ನಗರ 9 ನೇ ಹಂತ, ಸರ್ ಎಂ ವಿಶ್ವೇಶ್ವರಯ್ಯ, ನಾಗರಭಾವಿ 2 ನೇ ಹಂತ, ಬಿಟಿಎಂ 4 ನೇ ಹಂತ, ಬನಶಂಕರಿ 3 ನೇ ಹಂತ, ಆಸ್ಟಿನ್ ಟೌನ್, ಎಚ್‌ಬಿಆರ್ 1 ನೇ ಹಂತ 2 ನೇ ಬ್ಲಾಕ್, ಜಕ್ಕೂರಿನ ಅರ್ಕಾವತಿ ಲೇಔಟ್ 7 ನೇ ಬ್ಲಾಕ್ ಸೇರಿದಂತೆ ಇತರ ಕಡೆಗಳಲ್ಲಿ ನಿವೇಶನಗಳನ್ನು ಮಾರಾಟಕ್ಕೆ ಗುರುತಿಸಲಾಗಿದೆ. ಒಟ್ಟು 600 ಚದರ ಅಡಿಗಳಿಂದ ಸುಮಾರು 4,500 ಚದರ ಅಡಿಗಳವರೆಗೆ ಬೇರೆ ಬೇರೆ ಮತ್ತು ಭಿನ್ನ ಆಯಾಮಗಳ ನಿವೇಶನಗಳು ಇಲ್ಲಿ ಲಭ್ಯ ಇವೆ. ಹಾರಾಜು ಪ್ರಕ್ರಿಯೆಯನ್ನು ಸದುಪಯೋಗ ಮಾಡಿಕೊಳ್ಳುವಂತೆ ಬಿಡಿಎ ಕೋರಿದೆ.
ಪ್ರತಿ ಚದರ ಅಡಿಯ ಬೆಲೆ ಎಷ್ಟು?
ಯಾವೆಲ್ಲ ಬಡಾವಣೆಗಳಲ್ಲಿ ಸೈಟ್‌ಗಳು ಇವೆ, ಅವುಗಳನ್ನು ಯಥಾ ಸ್ಥಿತಿಯಲ್ಲಿರುವಂತೆ ಮಾರಾಟ ಮಾಡಲಾಗುತ್ತದೆ. ಒಂದು ಚದರ ಮೀಟರ್‌ಗೆ 500 ರೂಪಾಯಿ ಆಧಾರದಲ್ಲಿ ಹರಾಜು ಕೂಗಲಾಗುತ್ತದೆ. ಉದ್ಯಮಿಗಳು, ಉದ್ಯೋಗಿಗಳು ಸೇರಿದಂತೆ ಆಸಕ್ತ ನಾಗರಿಕರು ಇನ್ನೊಂದು ವಾರದಲ್ಲಿ ಬಿಡಿಎ ವೆಬ್‌ಸೈಟ್‌ನಲ್ಲಿ ಉದ್ದೇಶಿತ ನಿವೇಶನಗಳ ಭೌಗೋಳಿಕ ಸ್ಥಳಗಳ ವಿವರ, ಸಂಪೂರ್ಣ ಮಾಹಿತಿ ತಿಳಿಯಬಹುದೆಂದು ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications