Get Updates
Get notified of breaking news, exclusive insights, and must-see stories!

ಬಿಡಿಎಯಿಂದ ಆನ್‌ಲೈನ್ ಮೂಲಕವೇ ಫ್ಲಾಟ್‌ಗಳನ್ನು ಖರೀದಿಸಿ

ಬೆಂಗಳೂರು, ಏಪ್ರಿಲ್ 6: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಗರದ ವಿವಿಧ ಪ್ರದೇಶಗಳಲ್ಲಿ ನಿರ್ಮಿಸಿರುವ ಫ್ಲಾಟ್‌ಗಳನ್ನು ಖರೀದಿಸಲು ಆನ್‌ಲೈನ್ ಸೇವೆಯನ್ನು ಆರಂಭಿಸಿದೆ. ಮಾಳಗಾಳ (ನಾಗರಬಾವಿ), ಕಣಿಮಿಣಿಕೆ (ಕುಂಬಳಗೋಡು), ಕೊಮ್ಮಘಟ್ಟ (ಕೆಂಗೇರಿ, ನೈಸ್ ರಸ್ತೆಯ ಬಳಿ), ವಲಗೇರಹಳ್ಳಿ (ಕೆಂಗೇರಿ), ದೊಡ್ಡಬನಹಳ್ಳಿ (ಕೆ.ಆರ್ ಪುರಂ) ಬಡಾವಣೆಗಳಲ್ಲಿ ವಿವಿಧ ಆಳತೆಯ 1381 ಫ್ಲಾಟ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಈ ಹಿಂದೆ ಫ್ಲಾಟ್‌ಗಳನ್ನು ಖರೀದಿಸಲು ಪ್ರಾಧಿಕಾರಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕಾಗಿತ್ತು. ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಫ್ಲಾಟ್‌ಗಳನ್ನು ಖರೀದಿಸಲು ಆನ್‌ಲೈನ್ ಸೇವೆಯನ್ನು ಪ್ರಾರಂಭಿಸಿದೆ. ಸಾರ್ವಜನಿಕರು ಪ್ರಾಧಿಕಾರದ ವೆಬ್‌ಸೈಟ್ (www.housing.bdabangalore.org)ಗೆ ಭೇಟಿ ನೀಡಿ, ಫ್ಲಾಟ್‌ಗಳ ವಿವರ, ಬಡಾವಣೆಗಳ ಹೆಸರು, ನಕಾಶೆ, ಫ್ಲಾಟ್‌ಗಳ ಛಾಯಾಚಿತ್ರ ಮೂಲಕವೇ ತಮಗಿಷ್ಟವಾದ ಫ್ಲಾಟ್‌ಗಳನ್ನು ಕಾಯ್ದಿರಿಸಬಹುದು.

ಬಿಡಿಎ ಅಧ್ಯಕ್ಷರು ನಗರದ ವಿವಿಧೆಡೆ ನಿರ್ಮಿಸಿರುವ ವಸತಿ ಸಮುಚ್ಛಯಗಳಿಗೆ ಭೇಟಿ ನೀಡಿ, ವಸತಿ ಸಮುಚ್ಛಯಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುವುದನ್ನು ಗಮನಿಸಿ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾರ್ಯಗಳಿಗೆ ಹಣವನ್ನು ಬಿಡುಗಡೆಗೊಳಿಸಲಾಗಿದೆ ಹಾಗೂ ಕಾಮಗಾರಿಯು ಪೂರ್ಣಗೊಳ್ಳುವ ಹಂತದಲ್ಲಿದೆ.

BDA starts Online Service to purchase Flats, Site

ಆಟದ ಮೈದಾನ, ಉದ್ಯಾನವನ, ಮಕ್ಕಳ ಆಟಿಕೆಗಳು, ಜಿಮ್, ವೆಲ್‌ಫೇರ್ ಅಸೋಸಿಯೇಷನ್‌ಗೆ ಕಚೇರಿ ನಿರ್ಮಿಸಲು ಸ್ಥಳ ಕಾಯ್ದಿರಿಸುವುದು, ವಸತಿ ಸಮುಚ್ಛಯಗಳಿಗೆ ಸೌರ ಫಲಕಗಳನ್ನು ಅಳವಡಿಸುವ ಕಾರ್ಯಗಳನ್ನು ಶೀಘ್ರದಲ್ಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.

ಸದ್ಯ ಲಭ್ಯವಿರುವ ಫ್ಲಾಟ್‌ಗಳ ಬೆಲೆ ಮತ್ತು ವಿವರ
ಕ್ರಮ ಸಂಖ್ಯೆ ಬಡಾವಣೆ ಹೆಸರು ಬಿಎಚ್‌ಕೆ ವಿವರ ಫ್ಲಾಟ್‌ಗಳ ಸಂಖ್ಯೆ ಒಟ್ಟು ಮೊತ್ತ ರೂ. ಲಕ್ಷಗಳಲ್ಲಿ
01 ಕಣಿಮಿಣಿಕೆ ಹಂತ -2 2 BHK 503 25
02 ಕಣಿಮಿಣಿಕೆ ಹಂತ -3 2 BHK 267 28.50
03 ಕೊಮ್ಮಘಟ್ಟ ಹಂತ -1 2 BHK 115 25
04 ಕೊಮ್ಮಘಟ್ಟ ಹಂತ -2 2 BHK 267 30.40
05 ದೊಡ್ಡಬನಹಳ್ಳಿ ಹಂತ -1 2 BHK 43 25
06 ವಲಗೇರಹಳ್ಳಿ ಹಂತ -6 2 BHK 51 44
07 ಮಾಳಗಾಲ ಹಂತ -2 2 BHK 42 42
08 ಕಣಿಮಿಣಿಕೆ ಹಂತ -4 3 BHK 93 40
ಒಟ್ಟು 1381
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+