Property: ಬೆಂಗಳೂರಿನ 2 ಲಕ್ಷ ಆಸ್ತಿಗಳಿಗೆ ಬಿಡಿಎ ಶಾಕ್... !
BDA Property Tax Hike: ಬೆಂಗಳೂರಿನಲ್ಲಿರುವ ಆಸ್ತಿದಾರರಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಬಿಬಿಎಂಪಿಯು ಕಳೆದ ಎರಡು ತಿಂಗಳಿನಿಂದ ಬೆಂಗಳೂರಿಗರಿಗೆ ಹಾಗೂ ಬೆಂಗಳೂರಿನ ಆಸ್ತಿದಾರರಿಗೆ ನಿರಂತರವಾಗಿ ಶಾಕ್ ನೀಡಿತ್ತು. ಇದೀಗ ಮತ್ತೊಂದು ಶಾಕ್ ನೀಡಿಲು ಇದೀಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಮುಂದಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ನಗರದ ಆಸ್ತಿದಾರರಿಗೆ ನೀಡಿದ್ದ ಶಾಕ್‌ನಿಂದ ಚೇತರಿಸಿಕೊಳ್ಳುವ ಮುನ್ನವೇ ಇದೀಗ ಬಿಡಿಎ ಸಹ ಆಸ್ತಿದಾರರಿಗೆ ಶಾಕ್ ನೀಡಿದೆ. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಅದೇನು ಎನ್ನುವ ವಿವರ ನೋಡೋಣ.
ಬಿಬಿಎಂಪಿಯ ಅಂದಾಜಿನ ಪ್ರಕಾರ, ಬೆಂಗಳೂರಿನಲ್ಲಿ ಅಂದಾಜು 25 ಲಕ್ಷ ಆಸ್ತಿಗಳು ಇವೆ. ಈ ಆಸ್ತಿಗಳಿಗೆ ತೆರಿಗೆ ವಿಧಿಸುವುದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಂದ ಆಸ್ತಿ ತೆರಿಗೆ ವಸೂಲಿ ಮಾಡುವುದು, ಆಸ್ತಿ ಹರಾಜು ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಇನ್ನು ಮುಂದುವರಿದು ಕಸದ ಟ್ಯಾಕ್ಸ್ ಸಹ ವಿಧಿಸಲಾಗಿದೆ. ಇದರಿಂದ ಚೇತರಿಸಿಕೊಳ್ಳುವ ಮುನ್ನವೇ ಬಿಡಿಎ ಸಹ ಶಾಕ್ ನೀಡಿದೆ. ನಿರಂತರ ಬೆಲೆ ಏರಿಕೆಯಲ್ಲಿರುವ ಜನರಿಗೆ ಇದು ಹೊಸ ಶಾಕ್‌ನಂತೆ ಆಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬೆಂಗಳೂರಿನಲ್ಲಿರುವ ಆಸ್ತಿಗಳಿಗೆ / ಬಿಡಿಎ ವ್ಯಾಪ್ತಿಗೆ ಒಳಪಡುವ ಆಸ್ತಿಗಳಿಗೆ ತೆರಿಗೆ ನೀತಿಯನ್ನು ಪರಿಷ್ಕರಣೆ ಮಾಡಿದೆ. ಇದರಿಂದ ಬೆಂಗಳೂರಿನಲ್ಲಿರುವ ಬಿಡಿಎ ಆಸ್ತಿಗಳಿಗೆ ಶೇ 20ರಿಂದ 45% ರಷ್ಟು ಆಸ್ತಿ ತೆರಿಗೆ ಹೆಚ್ಚಳವಾಗಲಿದೆ. ಇದಕ್ಕೆ ಬೆಂಗಳೂರಿಗರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ರಾಜ್ಯ ಸರ್ಕಾರವು ಒಂದೊಂದೇ ಬೆಲೆ ಏರಿಕೆಯನ್ನು ಮಾಡುತ್ತಿದ್ದು ಇದೀಗ ಆಸ್ತಿದಾರರು ಹೊಸ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ಬೆಂಗಳೂರಿನ 2 ಲಕ್ಷ ಆಸ್ತಿದಾರರಿಗೆ ಸಂಕಷ್ಟ!
ಇನ್ನು ಬಿಡಿಎ ತೆರಿಗೆ ನೀತಿ ಪರಿಷ್ಕರಣೆಯಿಂದಾಗಿ ಬೆಂಗಳೂರಿನ ಬರೋಬ್ಬರಿ 2 ಲಕ್ಷ ಜನ ಆಸ್ತಿದಾರರ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ. ಬಿಡಿಎ ಅಭಿವೃದ್ಧಿ ಮಾಡಿರುವ ಅರ್ಕಾವತಿ, ಬನಶಂಕರಿ ಹಾಗೂ ನಾಡಪ್ರಭು ಕೆಂಪೇಗೌಡ ಸೇರಿದಂತೆ 9 ಬಡಾವಣೆಗಳಿಗೆ ಇದು ಅನ್ವಯವಾಗಲಿದೆ. ಅಲ್ಲದೇ ಈಗಾಗಲೇ ಹಂಚಿಕೆ ಮಾಡಿರುವ ವಸತಿ ಸಮುಚ್ಛಯಗಳು ಹಾಗೂ ಬಿಡಿಎ ಅನುಮೋದಿತ ಬಡಾವಣೆಗಳ ಆಸ್ತಿಗಳು ಇದಕ್ಕೆ ಅನ್ವಯವಾಗಲಿದೆ. ಅಂದರೆ ಈ ಎಲ್ಲಾ ಆಸ್ತಿದಾರರು ಇನ್ಮುಂದೆ ಹೆಚ್ಚುವರಿ ಆಸ್ತಿ ತೆರಿಗೆ ಪಾವತಿ ಮಾಡಬೇಕಾಗುತ್ತದೆ.
ಬೆಂಗಳೂರಿನ ಆಸ್ತಿಗಳಿಂದ ಬಿಡಿಎ (ತನ್ನ ವ್ಯಾಪ್ತಿಯಲ್ಲಿರುವ ಆಸ್ತಿಗಳಿಂದ) 55ರಿಂದ 60 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹ ಮಾಡುವ ಗುರಿಯನ್ನು ಹಾಕಿಕೊಂಡಿದೆ. ಆದರೆ, ಬಿಡಿಎಗೆ ಹಲವು ವರ್ಷಗಳಿಂದ ಬರೋಬ್ಬರಿ 40 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ತೆರಿಗೆ ಸಂಗ್ರಹವಾಗಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಬಿಡಿಎ ಆಸ್ತಿ ತೆರಿಗೆ ಹೆಚ್ಚಳ ಮಾಡುವುದಕ್ಕೆ ಕೈ ಹಾಕಿದೆ ಎಂದು ಹೇಳಲಾಗಿದೆ. ಆದರೆ ಬಿಡಿಎ ಅತ್ಯಂತ ಅವೈಜ್ಞಾನಿಕವಾಗಿ ಆಸ್ತಿ ತೆರಿಗೆ ಹೆಚ್ಚಳ ಮಾಡಿದೆ ಎನ್ನುವ ಆರೋಪ ಕೇಳಿ ಬಂದಿದ್ದು. ಆಸ್ತಿದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications