BDA Flats: ಫ್ಲ್ಯಾಟ್ ದರಗಳನ್ನು ಹೆಚ್ಚಿಸಲು ನಿರ್ಧರಿಸಿದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಬೆಂಗಳೂರು, ಮೇ. 15: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ತನ್ನ ಹೊಸ ಫ್ಲ್ಯಾಟ್‌ಗಳ ಆರಂಭಿಕ ಪ್ರಸ್ತಾವಿತ ದರಗಳನ್ನು ತನ್ನ ಮುಂದಿನ ಎರಡು ವಸತಿ ಯೋಜನೆಗಳಲ್ಲಿ 4% ರಿಂದ 29% ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಈ ಮೂಲಕ ನಗರದಲ್ಲಿ ಸರ್ಕಾರದಿಂದ ಫ್ಲ್ಯಾಟ್ ಖರೀದಿ ಯೋಜನೆಯಲ್ಲಿರುವ ಬೆಂಗಳೂರಿಗರಿಗೆ ಶಾಕ್ ನೀಡಿದೆ.
ಕಳೆದ ವರ್ಷ ಅಕ್ಟೋಬರ್ 1 ರಿಂದ ರಾಜ್ಯ ಸರ್ಕಾರವು ಮಾರ್ಗದರ್ಶಿ ಮೌಲ್ಯವನ್ನು ಪರಿಷ್ಕರಿಸಿದ ನಂತರ ತನ್ನ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸುವ ಮತ್ತು ಅದರ ಆಸ್ತಿಗಳನ್ನು ಮಾರುಕಟ್ಟೆ ದರಗಳ ಸಮೀಪಕ್ಕೆ ತರುವ ಗುರಿಯನ್ನು ಹೊಂದಿದೆ. ಈಗಾಗಲೇ ಬಿಡಿಎ ಎರಡು ಫ್ಲ್ಯಾಟ್‌ಗಳನ್ನು ನಿರ್ಮಾಣ ಮಾಡುತ್ತಿದೆ.

ಪಶ್ಚಿಮ ಬೆಂಗಳೂರಿನ ಕೊಮ್ಮಘಟ್ಟ (ಕೆಂಗೇರಿಯಲ್ಲಿ) ಮತ್ತು ಪೂರ್ವ ಬೆಂಗಳೂರಿನ ಕೋನದಾಸಪುರದಲ್ಲಿ (ವೈಟ್‌ಫೀಲ್ಡ್ ಬಳಿ) 1,500 ಫ್ಲ್ಯಾಟ್‌ಗಳಿಗೆ ದರ ಹೆಚ್ಚಿಸಲು ನಿರ್ಧರಿಸಲಾಗಿದೆ. ಜೂನ್ 4ರ ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಚುನಾವಣಾ ನೀತಿ ಸಂಹಿತೆ ತೆರವಾಗಲಿದ್ದು, ಬಳಿಕ ಈ ಬಗ್ಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು 'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.
"ನಮ್ಮ ಪ್ರಸ್ತಾವನೆಯನ್ನು ಪ್ರಾಧಿಕಾರದ ಮಂಡಳಿ ಅನುಮೋದಿಸಬೇಕಾಗಿದೆ. ಮಂಡಳಿಯು ತನ್ನ ಒಪ್ಪಿಗೆಯನ್ನು ನೀಡುತ್ತದೆ. ಈ ಫ್ಲ್ಯಾಟ್ ದರ ಹೆಚ್ಚಳವನ್ನು ಜಾರಿಗೊಳಿಸುವ ಪ್ರಾಥಮಿಕ ಉದ್ದೇಶವು ನಮ್ಮ ಗುತ್ತಿಗೆದಾರರ ಬಿಲ್‌ಗಳನ್ನು ಪಾವತಿಸುವುದಕ್ಕಾಗಿಯೇ ಹೊರತು ಬಿಡಿಎಗೆ ಯಾವುದೇ ಲಾಭ ಮಾಡಿಕೊಳ್ಳಲು ಅಲ್ಲ" ಎಂದು ಹೇಳಿದ್ದಾರೆ.
ಫ್ಲ್ಯಾಟ್ ದರ ಗಣನೀಯ ಏರಿಕೆ
ಕೊಮ್ಮಘಟ್ಟದಲ್ಲಿರುವ ಬಿಡಿಎ ಫ್ಲ್ಯಾಟ್‌ಗಳು ಗಣನೀಯವಾಗಿ ಏರಿಕೆಯಾಗಲಿವೆ. ಮೆಟ್ರೋದ ನೇರಳೆ ಮಾರ್ಗವನ್ನು ಕೆಂಗೇರಿಗೆ ಮತ್ತು ನಂತರ ಚಲ್ಲಘಟ್ಟಕ್ಕೆ ವಿಸ್ತರಿಸುವುದರಿಂದ ನಗರದ ಈ ಭಾಗದಲ್ಲಿ ಆಸ್ತಿಗೆ ಬೇಡಿಕೆ ಹೆಚ್ಚಿದೆ. ಇವುಗಳ ದರಗಳಿಗೆ ಹೋಲಿಸಿದರೆ, ಕೋನದಾಸಪುರದಲ್ಲಿ ಕಡಿಮೆ ಹೆಚ್ಚಳವಾಗಿದೆ. ಬಿಡಿಎಯ 632 ಫ್ಲ್ಯಾಟ್‌ಗಳಲ್ಲಿ ಮಾರಾಟವಾದ 300 ಫ್ಲ್ಯಾಟ್‌ಗಳಿಗೆ 4% ರಷ್ಟು ಸಣ್ಣ ಹೆಚ್ಚಳಕ್ಕೆ ಪ್ರಸ್ತಾಪಿಸಲಾಗಿದೆ.

ಹಂತ I ರಲ್ಲಿ 3 ಬಿಎಚ್‌ಕೆ ರೂ. 65.7 ಲಕ್ಷವಾಗಲಿದೆ. ಈ ಹಿಂದೆ ಯೋಜಿತ ವೆಚ್ಚ ರೂ. 53 ಲಕ್ಷ ರೂಪಾಯಿಯಾಗಿತ್ತು. ಹಂತ II ರಲ್ಲಿ 2 ಬಿಎಚ್‌ಕೆಗೆ ರೂ. 54.3 ಲಕ್ಷವಾಗಲಿದೆ. ಈ ಮೊದಲು ಇದನ್ನು 42 ಲಕ್ಷಕ್ಕೆ ಅಂದಾಜಿಸಲಾಗಿತ್ತು. ಹಂತ III ರಲ್ಲಿ 2 ಬಿಎಚ್‌ಕೆ ರೂ. 49.15 ಲಕ್ಷವಿದೆ. ಈ ಮೊದಲು 42 ಲಕ್ಷವಿತ್ತು. ಬಿಡಿಎ ಪ್ರಸ್ತುತ 480 3BHK, ಹಂತ II ರಲ್ಲಿ 360 2BHK ಮತ್ತು ಹಂತ III ರಲ್ಲಿ 336 2BHK ಫ್ಲ್ಯಾಟ್‌ಗಳನ್ನು ಹೊಂದಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ಬಿಡಿಎಗೆ 300 ಕೋಟಿ
ಬಿಡಿಎ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ 1,000 ಕೋಟಿ ರೂಪಾಯಿ ಸಾಲಕ್ಕೆ ಅರ್ಜಿ ಸಲ್ಲಿಸಿದೆ. ಆದರೆ ನಾವು ಇಲ್ಲಿಯವರೆಗೆ ಕೇವಲ 300 ಕೋಟಿ ರೂಪಾಯಿಗಳನ್ನು ತೆಗೆದುಕೊಂಡಿದ್ದೇವೆ. ಹೀಗಾಗಿ ಈ ಸಾಲವನ್ನು ಇಲ್ಲಿಗೆ ನಿಲ್ಲಿಸಲು ಬಯಸುತ್ತೇವೆ. ನಮ್ಮ ಬಹು ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆದಾರರಿಗೆ ಹಣ ಪಾವತಿಸಲು ನಾವು ಸಾಲ ಪಡೆದಿದ್ದೇವೆ. ಫ್ಲ್ಯಾಟ್‌ಗಳ ಮಾರಾಟದಲ್ಲಿ ವಿಧಿಸಲಾಗುವ ಹೆಚ್ಚಳವು ಬ್ಯಾಂಕ್ ಸಾಲವನ್ನು ಮರುಪಾವತಿಸಲು ಉದ್ದೇಶಿಸಲಾಗಿದೆ. ಹುನಿಗೆರೆ ವಿಲ್ಲಾ ಯೋಜನೆಯ ನಿಗದಿತ ದರದಲ್ಲಿ ಯಾವುದೇ ಹೆಚ್ಚಳವಿಲ್ಲ, ಅದರ ಬಗ್ಗೆ ಶೀಘ್ರದಲ್ಲೇ ಅಧಿಸೂಚನೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru Rent Crisis: ಬೆಂಗಳೂರಲ್ಲಿ ಬಾಡಿಗೆ ಮನೆ ಡಿಮ್ಯಾಂಡ್ ಬಗ್ಗೆ ಯುವತಿ ವಿಡಿಯೋ ವೈರಲ್ -
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು












Click it and Unblock the Notifications