ಬಿಡಿಎ ಇ ಹರಾಜು 5ನೇ ಹಂತ ಮುಕ್ತಾಯ, 6ನೇ ಹಂತ ಶುರು
ಬೆಂಗಳೂರು, ಡಿ. 17: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಐದನೇ ಹಂತದ ಹರಾಜು ಪ್ರಕ್ರಿಯೆಯು ಮುಗಿದಿದ್ದು, ಗರಿಷ್ಠ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಉತ್ತಮ ಪ್ರತಿಕ್ರಿಯೆ ಬಂದಿದೆ.
ಒಟ್ಟು 451 ನಿವೇಶನಗಳನ್ನು ಇ-ಹರಾಜಿನಲ್ಲಿ ಅಳವಡಿಸಲಾಗಿತ್ತು. ಒಟ್ಟು 317 ನಿವೇಶನಗಳು ಮಾರಾಟವಾಗಿದ್ದು, ನಾಲ್ಕು ಲಕ್ಷ ರುಗಳ ಇ. ಎಂ.ಡಿ ಪಾವತಿಸಿ ಒಟ್ಟು 1496 ಬಿಡ್ಡುದಾರರು ಬಿಡ್ಡಿಂಗ್ ನಲ್ಲಿ ಭಾಗವಹಿಸಿರುತ್ತಾರೆ. ಹರಾಜಿಗಿಟ್ಟಿದ್ದ ಮೌಲ್ಯದಲ್ಲಿ ಶೇಕಡ 50.93ರಷ್ಟು ಗಳಿಕೆಯಾಗಿದೆ. ಯಶಸ್ವಿಯಾಗದ ಬಿಡ್ ದಾರರಿಗೆ ಪ್ರಾರಂಭಿಕ ಠೇವಣಿಯಾದ 4 ಲಕ್ಷ ರು ಹಣವನ್ನು ಹಿಂದಿರುಗಿಸುವ ಪ್ರಕ್ರಿಯೆ ಜಾರಿಯಲ್ಲಿದೆ.

ಹರಾಜು ನಿವೇಶನಗಳಿಗೆ ಸಂಬಂಧಿಸಿದಂತೆ ಪ್ರಮುಖ ಅಂಶಗಳು ಈ ಕೆಳಕಂಡಂತಿದೆ:
ಅಧಿಸೂಚನೆಗೊಂಡ ಒಟ್ಟು ನಿವೇಶನಗಳ ಸಂಖ್ಯೆ: 451
ಪ್ರತಿಕ್ರಿಯೆ ಬಾರದಿರುವುದು: 109
ನಿರೀಕ್ಷಿತ ದರದ ಗುರಿ ತಲುಪದೆ ರದ್ದುಪಡಿಸಿದ ನಿವೇಶನಗಳ ಸಂಖ್ಯೆ: 25
ಇ-ಹರಾಜಿನಲ್ಲಿ ಮಾರಾಟವಾದ ಒಟ್ಟು ನಿವೇಶನಗಳು: 317
ಒಟ್ಟು ಬಿಡ್ಡುದಾರರು: 1496
ಒಟ್ಟು ಮೂಲ ಬೆಲೆ (ಕೋಟಿ ರು.ಗಳಲ್ಲಿ): 184.57
ಒಟ್ಟು ಹರಾಜು ಮೌಲ್ಯ (ಕೋಟಿ ರು.ಗಳಲ್ಲಿ): 278.58
ಗಳಿಕೆ (ಕೋಟಿ ರು.ಗಳಲ್ಲಿ): 94.01
ಶೇಕಡಾವಾರು ಗಳಿಕೆ: 50.93%
ಆರನೇ ಹಂತದ ಇ-ಹರಾಜು ಪ್ರಕ್ರಿಯೆ ಪ್ರಾರಂಭಕ್ಕೆ ಅಧಿಸೂಚನೆ ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲಿಯೇ ಅಧಿಸೂಚನೆ ಹೊರಡಿಸಲಾಗುವುದು, ಪ್ರಾಧಿಕಾರದ ಅಧಿಕೃತ ವೆಬ್ಸೈಟ್ನಲ್ಲಿ ಮಾಹಿತಿಯನ್ನು ಬಿಡ್ಡುದಾರರು ಪಡೆದುಕೊಳ್ಳಬಹುದು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಾರ್ವಜನಿಕ ಸಂಪರ್ಕಾಧಿಕಾರಿ ಹೇಳಿದ್ದಾರೆ.












Click it and Unblock the Notifications