BDA Flat: ಜನರಿಗೆ ಸಿಹಿಸುದ್ದಿ, ಬಿಡಿಎ ಫ್ಲಾಟ್‌ಗೆ ಹೆಚ್ಚುವರಿ ದರವಿಲ್ಲ
ಬೆಂಗಳೂರು, ಜನವರಿ 27: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಗರದ ವಿವಿಧ ಪ್ರದೇಶಗಳಲ್ಲಿ ವಸತಿ ಸಮುಚ್ಛಯಗಳನ್ನು ನಿರ್ಮಾಣ ಮಾಡಲಿದೆ. ಖಾಲಿ ಇರುವ ಫ್ಲಾಟ್ ಮತ್ತು ಮನೆಗಳನ್ನು ಮಾರಾಟ ಮಾಡಲು ಬಿಡಿಎ ಯೋಜನೆಯೊಂದನ್ನು ರೂಪಿಸಿತ್ತು. ಆದರೆ ಈಗ ಫ್ಲಾಟ್ ಮೇಳಕ್ಕೆ ಬರುತ್ತಿರುವ ಪ್ರತಿಕ್ರಿಯೆ ನೋಡಿರುವ ಬಿಡಿಎ ತನ್ನ ಆಲೋಚನೆಯನ್ನು ಕೈ ಬಿಟ್ಟಿದೆ. ಜನರೇ ಸ್ವಯಂ ಪ್ರೇರಿತವಾಗಿ ಬರುತ್ತಿರುವ ಕಾರಣ ಖಾಸಗಿ ಸಂಸ್ಥೆಗಳ ಮೊರೆ ಹೋಗುವ ತೀರ್ಮಾನ ವಾಪಸ್ ಪಡೆದಿದೆ.
ಬಿಡಿಎ ವಿವಿಧ ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ಮನೆ/ ಫ್ಲಾಟ್‌ಗಳು ಮಾರಾಟವಾಗಿರಲಿಲ್ಲ. ಮಾಹಿತಿಗಳ ಪ್ರಕಾರ ಸುಮಾರು 3,500 ಫ್ಲಾಟ್‌ಗಳು ಮಾರಾಟವಾಗಬೇಕಿತ್ತು. ಆದ್ದರಿಂದ ಖಾಸಗಿ ಸಂಸ್ಥೆ ನೇಮಕ ಮಾಡುವ ಮೂಲಕ ಈ ಫ್ಲಾಟ್ ಅನ್ನು ಮಾರಾಟ ಮಾಡಲು ಬಿಡಿಎ ಚಿಂತನೆ ನಡೆಸಿತ್ತು.

ಆದರೆ ಈಗ ಬಿಡಿಎ ಆಯೋಜನೆ ಮಾಡುತ್ತಿರುವ ಮನೆ/ ಫ್ಲಾಟ್‌ದ ಫ್ಲಾಟ್ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಅಲ್ಲದೇ ಖಾಸಗಿ ಸಂಸ್ಥೆಗಳು ಸಹ ಬಿಡಿಎ ಫ್ಲಾಟ್‌ಗಳನ್ನು ಮಾರಾಟ ಮಾಡಿಕೊಡಲು ಆಸಕ್ತಿ ಹೊಂದಿಲ್ಲ. ಆದ್ದರಿಂದ ಬಿಡಿಎ ತನ್ನ ತೀರ್ಮಾನವನ್ನು ವಾಪಸ್ ಪಡೆದಿದೆ.
ಖಾಸಗಿ ಸಂಸ್ಥೆಗಳಿಗೆ ಕಮೀಷನ್: ಖಾಸಗಿ ಸಂಸ್ಥೆಗಳನ್ನು ನೇಮಕ ಮಾಡಿಕೊಂಡು ಅವುಗಳು ಮಾರಾಟ ಮಾಡಿಕೊಡುವ ಮನೆ/ ಫ್ಲಾಟ್‌ಗಳಿಗೆ ಕಮೀಷನ್ ನೀಡಲು ಬಿಡಿಎ ತೀರ್ಮಾನಿಸಿತ್ತು. ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ಈ ಪ್ರಸ್ತಾವನೆಗೆ ಒಪ್ಪಿಗೆಯೂ ಸಿಕ್ಕಿತ್ತು. ಆದರೆ ಈಗ ತನ್ನ ತೀರ್ಮಾನದಿಂದ ಬಿಡಿಎ ಹಿಂದೆ ಸರಿದಿದೆ.
ಖಾಸಗಿ ಮಾರ್ಕೆಟಿಂಗ್ ಸಂಸ್ಥೆಗಳು ತಾವು ಮಾರಾಟ ಮನೆ/ ಫ್ಲಾಟ್‌ಗಳಿಗೆ ಶೇ 3ರಷ್ಟು ಹೆಚ್ಚುವರಿ ಹಣವನ್ನು ಗ್ರಾಹಕರಿಂದ ವಸೂಲಿ ಮಾಡಲು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಯಾವುದೇ ಮಾರ್ಕೆಟಿಂಗ್ ಕಂಪನಿಗಳು ಈ ಪ್ರಸ್ತಾವನೆಯನ್ನು ಒಪ್ಪಿಲ್ಲ.
ಅಲ್ಲದೇ ಈಗ ಬಿಡಿಎ ಆಯೋಜನೆ ಮಾಡುತ್ತಿರುವ ಫ್ಲಾಟ್ ಮೇಳಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಯಾವುದೇ ಕಂಪನಿಗಳು ಬಿಡಿಎ ಪ್ರಸ್ತಾವನೆ ಬಗ್ಗೆ ಆಸಕ್ತಿ ತೋರಿಸಿಲ್ಲ. ಆದ್ದರಿಂದ ಬಿಡಿಎ ಮಾರ್ಕೆಟಿಂಗ್ ಕಂಪನಿಗಳ ಮೂಲಕ ಫ್ಲಾಟ್ ಮಾರಾಟ ಮಾಡುವ ಪ್ರಸ್ತಾವನೆ ಕೈ ಬಿಟ್ಟಿದೆ.
ಬಿಡಿಎ ಈ ತೀರ್ಮಾನದಿಂದ ಜನರಿಗೂ ಸಹಾಯಕವಾಗಿದೆ. ಖಾಸಗಿ ಮಾರ್ಕೆಟಿಂಗ್ ಕಂಪನಿಗಳು ಶೇ 3ರಷ್ಟು ಹೆಚ್ಚುವರಿ ದರವನ್ನು ಸಂಗ್ರಹ ಮಾಡಿದರೆ ಫ್ಲಾಟ್ ದರಗಳು ಏರಿಕೆಯಾಗುತ್ತಿತ್ತು. ಈಗ ಬಿಡಿಎ ತೀರ್ಮಾನದಿಂದ ಜನರ ಹಣವೂ ಉಳಿತಾಯವಾಗಲಿದೆ.
ಈಗಾಗಲೇ ಬಿಡಿಎ ಉದ್ಯಾನ ನಗರಿ ಬೆಂಗಳೂರಿನಲ್ಲಿ ಫ್ಲಾಟ್/ ಮನೆ/ ವಿಲ್ಲಾ ಕೊಳ್ಳುವವರ ಅನುಕೂಲಕ್ಕಾಗಿ ವಿವಿಧ ಪ್ರದೇಶಗಳಲ್ಲಿ ಫ್ಲಾಟ್ ಮೇಳ ಆಯೋಜನೆ ಮಾಡುತ್ತದೆ. ಜನರು ಸ್ವಯಂ ಪ್ರೇರಿತವಾಗಿ ಈ ಮೇಳಗಳಿಗೆ ಆಗಮಿಸಿ ಫ್ಲಾಟ್ ಖರೀದಿ ಮಾಡುತ್ತಿದ್ದಾರೆ. ಆದ್ದರಿಂದ ಬಿಡಿಎಗೆ ಖಾಸಗಿ ಸಂಸ್ಥೆಯ ಅವಶ್ಯಕತೆ ಇಲ್ಲವಾಗಿದೆ.
ಕೆಲವು ದಿನಗಳ ಹಿಂದೆ ಕೋನದಾಸಪುರದಲ್ಲಿ ಆಯೋಜಿಸಿದ್ದ ಫ್ಲಾಟ್ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಸುಮಾರು 700 ಜನವರು ಭೇಟಿ ನೀಡಿದ್ದು, 100ಕ್ಕೂ ಹೆಚ್ಚು ಜನರು ಠೇವಣಿ ಮೊತ್ತವನ್ನು ಪಾವತಿಸಿ, ಫ್ಲಾಟ್ ಕಾಯ್ದಿರಿಸಿದ್ದರು. 50 ಜನರಿಗೆ ಸ್ಥಳದಲ್ಲಿಯೇ ಹಂಚಿಕೆ ಪತ್ರವನ್ನು ಸಹ ಬಿಡಿಎ ವಿತರಣೆ ಮಾಡಿತ್ತು. ಮತ್ತೊಮ್ಮೆ ಕೋನದಾಸಪುರ ವಸತಿ ಸಮುಚ್ಛಯದಲ್ಲಿ ಆಯೋಜಿಸಿದ್ದ ಫ್ಲಾಟ್ ಮೇಳದಲ್ಲಿ ಒಟ್ಟಾರೆ 150 ಫ್ಲಾಟ್‌ಗಳು ಸ್ಥಳದಲ್ಲಿಯೇ ಮಾರಾಟವಾಗಿ, 75 ಫ್ಲಾಟ್ ಹಂಚಿಕೆ ಪತ್ರವನ್ನು ಅಲ್ಲಿಯೇ ನೀಡಲಾಗಿತ್ತು.
ಬಿಡಿಎ ಅಧಿಕಾರಿಗಳ ಮಾಹಿತಿ ಪ್ರಕಾರ ಸದ್ಯ ಕುಂಬಳಗೋಡು ಸಮೀಪದ ಕಣಿಮಿಣಿಕೆ ಪ್ರದೇಶದಲ್ಲಿ ಅತಿ ಹೆಚ್ಚಿನ ಫ್ಲಾಟ್‌ಗಳು ಖಾಲಿ ಇದೆ. ಸುಮಾರು 800 ಫ್ಲಾಟ್‌ಗಳು ಖಾಲಿ ಇದ್ದು, ಇಲ್ಲಿ ಶೀಘ್ರದಲ್ಲಿಯೇ ಫ್ಲಾಟ್ ಮೇಳವನ್ನು ಆಯೋಜನೆ ಮಾಡಲಾಗುತ್ತದೆ.
2023ರ ಸಿಎಜಿ ವರದಿಯಲ್ಲಿ ಬಿಡಿಎ ನಿರ್ಮಾಣ ಮಾಡಿರುವ ಶೇ 80ರಷ್ಟು ಫ್ಲಾಟ್‌ಗಳು ಮಾರಾಟವಾಗಿಲ್ಲ. ಇದಕ್ಕೆ ಬಿಡಿಎ ಸರಿಯಾಗಿ ಮಾರ್ಕೆಟಿಂಗ್ ಮಾಡದಿರುವುದೇ ಕಾರಣ ಎಂದು ಉಲ್ಲೇಖಿಸಲಾಗಿತ್ತು. ಸದ್ಯ ಕಣಿಮಿಣಿಕೆ ಮತ್ತು ಕೊಮ್ಮಘಟ್ಟದಲ್ಲಿ ಬಿಡಿಎ ಫ್ಲಾಟ್‌ಗಳು ಖಾಲಿ ಇದ್ದು, ಇವುಗಳನ್ನು ಮಾರಾಟ ಮಾಡಬೇಕಿದೆ.












Click it and Unblock the Notifications