Property: ಬಿಬಿಎಂಪಿ ವಲಯ ಆಯುಕ್ತರಿಗೆ ಸರ್ಕಾರ ವಿಶೇಷ ಪವರ್! ಈ ರಸ್ತೆಗಳ ಆಸ್ತಿ ಮಾಲೀಕರೇ ಗಮನಿಸಿ..

ಬೆಂಗಳೂರು, ಏಪ್ರಿಲ್ 18: ನಗರದ ಬಾಬುಸಾಪಾಳ್ಯದಲ್ಲಿ ಅನಧಿಕೃತ ಕಟ್ಟಡ ಕುಸಿದು ಕಾರ್ಮಿಕರು ಸಾವನ್ನಪ್ಪಿದ ಘಟನೆ ಬೆನ್ನಲ್ಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಒಂದಷ್ಟು ಬದಲಾವಣೆ ಆಗಿದೆ. ಅಧಿಕಾರಿಗಳ ಶಿಫಾರಸಿನ ಮೇರೆಗೆ ರಾಜ್ಯ ಸರ್ಕಾರ 'ಬಿಬಿಎಂಪಿ ಕಾಯ್ದೆ-2020'ಗೆ ತಿದ್ದುಪಡಿ ತಂದಿದೆ. ಖಾಸಗಿ ಬೀದಿಗಳನ್ನು ಸಾರ್ವಜನಿಕ ಬೀದಿಗಳೆಂದು ಘೋಷಿಸಲು ಅಧಿಕಾರ ನೀಡಿದೆ. ಆದ ಬದಲಾವಣೆಯನ್ನು ಆಸ್ತಿ ಮಾಲೀಕರು ಗಮನಿಸಬೇಕು.

ಖಾಸಗಿ ಬೀದಿಗಳನ್ನು ಸಾರ್ವಜನಿಕ ಬೀದಿಗಳೆಂದು ಘೋಷಿಸಿ ಬಿಬಿಎಂಪಿ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ. ಆದರೆ ನಗರದಲ್ಲಿ ಎಷ್ಟು ಖಾಸಗಿ ಹಾಗೂ ಸಾರ್ವಜನಿಕ ಬೀದಿಗಳಿವೆ ಎಂಬ ಅಂಕಿ ಸಂಖ್ಯೆ ಬಗ್ಗೆ ಸ್ಪಷ್ಟತೆ ಇಲ್ಲ. ಎಷ್ಟು ಸಾರ್ವಜನಿಕ ಬೀದಿಗಳನ್ನು ಗುರುತಿಸಲಾಗಿದೆ ಎಂಬುದರ ಬಗ್ಗೆ ಬಿಬಿಎಂಪಿ ಮಾಹಿತಿ ನೀಡಿಲ್ಲ ಎಂದು TOI ವರದಿ ಮಾಡಿದೆ.

BBMP Zonal Commissioners Can Now Declare Private Streets as Public in Bengaluru

2024ರಲ್ಲಿ ಬಾಬುಸಾಪಾಳ್ಯ ಅಕ್ರಮ ನಿರ್ಮಾಣ ಕಟ್ಟಡ ಕುಸಿದು ಎಂಟು ಕಾರ್ಮಿಕರು ಮೃತಪಟ್ಟಿದ್ದರು. ಇಂತಹ ಅವಘಡಗಳು ಮುಂದೆ ಘಟಿಸದಂತೆ ತಡೆಯಲು ಬಿಬಿಎಂಪಿ ಸಮಿತಿ ಇತ್ತೀಚೆಗೆ ಹಲವು ಶಿಫಾರಸು ಮಾಡಿತ್ತು. ಶಿಫಾರಸಿನ ಆಧಾರದಲ್ಲಿ ಮಸೂದೆ ತಿದ್ದುಪಡಿ ತರಲಾಗಿದೆ. ಇದರಿಂದ ಬಿಬಿಎಂಪಿಗೆ ವಿಶೇಷ ಅಧಿಕಾರ ಸಿಕ್ಕಂತಾಗಿದೆ.

ಕಟ್ಟಡ ಮಾಲೀಕರಿಗೆ ಆಕ್ಷೇಪಣೆಗೆ ಅವಕಾಶ

ಸಾರ್ವಜನಿಕ ಬೀದಿ ಆದ ಬಳಿಕ ಬಿಬಿಎಂಪಿ ಅಪಾಯಕಾರಿ ಕಟ್ಟಡಗಳ ಬಗ್ಗೆ ಮಾಲೀಕರಿಗೆ ತಿಳಿಸುತ್ತಾರೆ. ಅಗತ್ಯ ಎಚ್ಚರಿಕೆ ನೀಡಲಾಗುತ್ತದೆ. ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಸೂಕ್ತ ಕ್ರಮ ವಹಿಸಲಾಗುತ್ತದೆ. ಕಟ್ಟಡ ಮಾಲೀಕರಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಸಾರ್ವಜನಿಕ ರಸ್ತೆಯಾದ ಬಳಿಕ ಅದರ ನಿರ್ವಹಣೆ, ಅಭಿವೃದ್ಧಿ ಜವಾಬ್ದಾರಿ ಬಿಬಿಎಂಪಿಗೆ ಸೇರುತ್ತದೆ.

BBMP Zonal Commissioners Can Now Declare Private Streets as Public in Bengaluru

ಬಿಬಿಎಂಪಿ ಹೆಚ್ಚುವರಿ ಅಧಿಕಾರ

ಬಿಬಿಎಂಪಿ ಗುರುತಿಸುವ ರಸ್ತೆಗಳಲ್ಲಿ ಮೂಲ ಭೂಮಾಲೀಕರು ಕೇಂದ್ರ ಭೂಸ್ವಾಧೀನ ಕಾನೂನುಗಳು ಹಾಗೂ ಅಭಿವೃದ್ಧಿ ಹಕ್ಕುಗಳ ಪ್ರಮಾಣಪತ್ರಗಳನ್ನು ಒಳಗೊಂಡಂತೆ ಪರಿಹಾರಕ್ಕೆ ಅರ್ಹರಲ್ಲ. ಖಾಸಗಿ ಬೀದಿ ನಿರ್ವಹಣೆಗೆ ವಿಫಲವಾದಲ್ಲಿ ಅಂತಹ ರಸ್ತೆಗಳನ್ನು ಬಿಬಿಎಂಪಿ ದುರಸ್ತಿ ಮಾಡುತ್ತದೆ. ಅಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಪಡಿಸುತ್ತದೆ. ಇಂತಹ ಅಧಿಕಾರ ಮಸೂದೆ ತಿದ್ದುಪಡಿ ಬಳಿಕ ಪಾಲಿಕೆಗೆ ಸಿಕ್ಕಿದೆ.

ಅಭಿವೃದ್ಧಿ, ನಿರ್ವಹಣೆ ವೆಚ್ಚವನ್ನು ಬಿಬಿಎಂಪಿ ಆಯಾ ಆಸ್ತಿ ಮಾಲೀಕರಿಂದ ವಸೂಲಿ ಮಾಡಲು ಅವಕಾಶ ಇದೆ. ಎಷ್ಟು ಬೀದಿಗಳು ತಾಂತ್ರಿಕವಾಗಿ ಖಾಸಗಿಯಾಗಿವೆ ಎಂಬುದು ತಿಳಿದಿಲ್ಲ. ಈ ವಿನ್ಯಾಸಗಳು ಎಲ್ಲವು ದಶಕಗಳ ಹಿಂದೆ ನಡೆದಂತವುಗಳು. ಈ ಸಂಬಂಧ ಪಾಲಿಕೆ ಅಗತ್ಯ ಮಾಹಿತಿ ಸಂಗ್ರಹಿಸಲು ಆರಂಭಿಸಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Take a Poll

ಖಾಸಗಿ ಬೀದಿಗಳ ದತ್ತಾಂಶ ಸಂಗ್ರಹ

ಸದ್ಯ ಅಗತ್ಯ ದತ್ತಾಂಶದ ಕೊರತೆ ಇದೆ. ಪಾರದರ್ಶಕತೆ ಹೊಣೆಗಾರಿಕೆ ಇಲ್ಲದಾಗಿದೆ. ಇದೆಲ್ಲ ಮಾಹಿತಿ ಸಿಕ್ಕ ಬಳಿಕವೇ ಬಿಬಿಎಂಪಿ ಖಾಸಗಿ ಬೀದಿಗಳನ್ನು ಅಧಿಕೃತವಾಗಿ ಸಾರ್ವಜನಿಕ ಬೀದಿಗಳೆಂದು ಘೋಷಿಸಲು ಸಾಧ್ಯವಾಗುತ್ತದೆ. ಅದಲ್ಲಿಯವರೆಗೆ ಯಾವ ನೀರ್ಣಯ ಕೈಗೊಳ್ಳಲು ಅಧಿಕಾರ ಇರುವುದಿಲ್ಲ.

ಪಾಲಿಕೆಯಿಂದ ಸಮರ್ಪಕ ಅನುಮೋದನೆ, ದಾಖಲಾತಿಗಳು ಇಲ್ಲದೇ ಅಭಿವೃದ್ಧಿಯಾದ ಸಾಕಷ್ಟು ಸ್ಥಳಗಳು ಇವೆ. ಅದಕ್ಕೆ ನಿಬಂಧನೆಗಳನ್ನು ವಿಧೀಸಲಾಗಿದೆ. ರಿಯಾಲ್ಟರ್ ನಂಬಿ, ಅನೇಕ ಜನರು ಹೂಡಿಕೆ ಮಾಡಿ ಆ ಸ್ಥಳಗಳಲ್ಲಿ ವಾಸಿಸಲು ಆರಂಭಿಸುತ್ತಾರೆ. ನಂತರ ಅವರಿಗೆ ಸೂಕ್ತ ಸೌಲಭ್ಯಗಳು ಸಿಗುವುದಿಲ್ಲ ಎಂದು BBMP ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಮಾಹಿತಿ ನೀಡಿದರು.

ಇಂತಹ ಬೀದಿಗಳಿಂದ ರಸ್ತೆಗಳ ವ್ಯವಸ್ಥೆ, ಸರಿಯಾದ ರಸ್ತೆ ಇಲ್ಲದ್ದರ ಬಗ್ಗೆ ದೂರುಗಳು ಬರುತ್ತವೆ. ಹಾಗಾದರೆ ಖಾಸಗಿ ಬೀದಿಗಳ ಅವ್ಯವಸ್ಥೆಯ ಯಾರು ಹೊಣೆ. ಖಾಸಗಿಯವರು ಇದೆಲ್ಲವನ್ನು ನಿಭಾಯಿಸದಿದ್ದರೆ ಸಮಸ್ಯೆ ಉಲ್ಬಣಿಸುತ್ತದೆ. ಕಟ್ಟಡ ಕಟ್ಟುವಾಗ ದುರಂತ, ಜೀವನ ಹಾನಿ ಆಗಲೂ ಬಹುದು. ಹೀಗಾಗಿ ಸುರಕ್ಷತೆ ದೃಷ್ಟಿಯಿಂದ ತಕ್ಷಣವೇ ಸಾರ್ವಜನಿಕ ರಸ್ತೆ ಎಂದು ಘೋಷಿಸುವ ಅನಿವಾರ್ಯತೆ ಇದೆ. ಇದೆಲ್ಲ ಪ್ರಕ್ರಿಯೆ ಖಚಿತಪಡಿಸಿಕೊಳ್ಳುತ್ತೇವೆ ಎಂದು ಅವರು ತಿಳಿಸಿದರು. ಬಿಬಿಎಂಪಿ ಕಾಯ್ದೆ-2020

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+