ಬೆಂಗಳೂರು ಅಭಿವೃದ್ಧಿಗೆ 2491 ಕೋಟಿ ವೆಚ್ಚ ಮಾಡಲಿರುವ ಬಿಬಿಎಂಪಿ

ಬೆಂಗಳೂರು, ಸೆಪ್ಟೆಂಬರ್ 4: ಫ್ಲೈಓವರ್, ಗ್ರೇಡ್ ಸಪರೇಟರ್, ಶೌಚಾಲಯ, ಟೆಂಡರ್ ಶ್ಯೂರ್ ರಸ್ತೆಗಳಿಗೆ 2491ಕೋಟಿ ರೂ.ಗಳನ್ನು ಒಳಗೊಂಡ ಸಮಗ್ರ ಅಭಿವೃದ್ಧಿ ಯೋಜನೆಗೆ, ರಾಜ್ಯ ಸರ್ಕಾರದ ನೆರವಿನೊಂದಿಗೆ ಅನುಷ್ಠಾನಗೊಳಸಲು ಬಿಬಿಎಂಪಿ ಸಜ್ಜುಗೊಂಡಿದೆ.

ಆಶ್ಚರ್ಯಕರ ಸಂಗತಿಯೆಂದರೆ ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕೈಗೊಳ್ಳಲಾಗಿದ್ದ ಯೋಜನೆಯನ್ನು ಹಾಲಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರ ಸರ್ಕಾರ ಮುಂದುವರೆಸಿರುವುದು ಗಮನಾರ್ಹ.

ಇದರಲ್ಲಿ ವೈಟ್‌ ಟಾಪಿಂಗ್, ಟೆಂಡರ್ ಶ್ಯೂರ್, ಕಾರಿಡಾರ್ ಗಳು, ಸುಂದರ ಪಾದಚಾರಿ ಮಾರ್ಗ, ಸ್ಕೈವಾಕ್, ಇ-ಶೌಚಾಲಯ ಕಾಮಗಾರಿಗಳು ಇದರಲ್ಲಿ ಅಡಕವಾಗಿವೆ. 2017ರ ಡಿಸೆಂಬರ್‌ ನ ಕ್ಯಾಬಿನೇಟ್ ನಲ್ಲಿ ಅನುಮತಿ ದೊರೆತಿತ್ತು.ಇದೀಗ ಬಿಬಿಎಂಪಿ ಯೋಜನೆಗೆ ಮರುಜೀವ ನೀಡಲಿದೆ.

BBMP will spend 2491cr for Bengaluru Development

ಬಿಬಿಎಂಪಿಯು ಜುಲೈ 18ರಂದು ಟೆಂಡರ್ ಆಹ್ವಾನಿಸಲು ಚಿಂತನೆ ನಡೆಸಿತ್ತು ಆದರೆ ಕೆಲವು ಬದಲಾವಣೆಗಳಿದ್ದ ಕಾರಣ ಟೆಂಡರ್ ಪ್ರಕ್ರಿಯೆಯನ್ನು ಮುಂದೂಡಿತ್ತು. ಒಟ್ಟು ಹತ್ತು ಯೋಜನೆಗಗಳಿಗೆ ಸಂಪುಟ ಒಪ್ಪಿಗೆ ನೀಡಿದೆ. ಈಗಾಗಲೇ 690 ಕೋಟಿ ಕಾಮಗಾರಿಗೆ ಬಿಬಿಎಂಪಿ ಟೆಂಡರ್ ಕರೆದಿದೆ. ಹಾಗೆಯೇ 13 ಜಂಕ್ಷನ್ ಗಳಲ್ಲಿ 421ಕೋಟಿ ವೆಚ್ಚದಲ್ಲಿ ಗ್ರೇಡ್ ಸಪರೇಟರ್ ನಿರ್ಮಾಣ ಕಾರ್ಯವೂ ಆರಂಭವಗೊಳ್ಳಲಿದೆ.

ಉಳಿದ ಯೋಜನೆಗಳು: ಆಡುಗೋಡಿ ಜಂಕ್ಷನ್‌ನಿಂದ ಸರ್ಜಾಪುರ ರಸ್ತೆ ಮೂಲಕ ಹಲಸೂರು ಮಾರ್ಗವಾಗಿ ಹೊಸೂರಿಗೆ ತೆರಳುವ ಫ್ಲೈಓವರ್ ಹೀಗೆ ಒಟ್ಟು 11 ಜಂಕ್ಷನ್‌ ಗಳ ಮೇಲೆ ಫ್ಲೈ ಓವರ್ ಹಾದುಹೋಗುತ್ತದೆ. ಟೆಂಡರ್ ಶ್ಯೂರ್ ನಲ್ಲಿ ಒಪ್ಪಿಗೆ ದೊರೆತ 23 ಪ್ರಮುಖ ರಸ್ತೆಗಳೆಂದರೆ ಮ್ಯಾಗ್ರತ್ ರಸ್ತೆ, ಬ್ರಿಗೇಡ್ ರಸ್ತೆ, ರಿಚ್‌ಮಂಡ್ ವೃತ್ತ, ರೆಸಿಡೆನ್ಸಿ ಹಾಗೂ ಇನ್ನೂ ಹಲವು ಪ್ರಮುಖ ರಸ್ತೆಗಳನ್ನು ಒಳಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+