ಬಿಬಿಎಂಪಿ ವಾರ್ಡ್ ಕರಡು ಕೊನೆಗೂ ಅಂತಿಮ: ಬಿಜೆಪಿ ಶಾಸಕರಿರುವ ಕಡೆ ವಾರ್ಡ್ ಕಡಿತ?

ಬೆಂಗಳೂರು, ಆಗಸ್ಟ್ 19: ಬಿಬಿಎಂಪಿ ವಾರ್ಡ್ ಡಿಲಿಮಿಟೇಶನ್ ಕರಡು ಪ್ರತಿ ಕೊನೆಗೂ ಬಿಡುಗಡೆ ಆಗಿದೆ. ವಾರ್ಡ್ ವಾರು ಕ್ಷೇತ್ರ ಪುನರ್ ವಿಂಗಡಣೆಯ ಅಧಿಸೂಚನೆ ಸರ್ಕಾರ ಹೊರಡಿಸಿದೆ.
ಕರ್ನಾಟಕ ವಿಶೇಷ ರಾಜ್ಯ ಪತ್ರದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟ ಮಾಡಿದೆ. ಸಾರ್ವಜನಿಕರು - ಸಂಸ್ಥೆಗಳಿಂದ ಆಕ್ಷೇಪಣೆ / ಸಲಹೆಗಳಿಗೆ ಸರ್ಕಾರ ಮುಕ್ತ ಆಹ್ವಾನ ಕೊಟ್ಟಿದೆ.

ಅಧಿಸೂಚನೆಯನ್ನ ಕರ್ನಾಟಕ ರಾಜ್ಯಪತ್ರದ ಅಧಿಕೃತ ಜಾಲತಾಣ erajyapatra.karnataka.gov.in ದಲ್ಲಿ ಕರಡು ಪ್ರತಿ ವೀಕ್ಷಿಸಬಹುದು. ಸಾರ್ವಜನಿಕರು ಯಾವುದೇ ಆಕ್ಷೇಪಣೆ ಇದ್ದರೆ ಸಲ್ಲಿಸಲು ಇಲ್ಲಿ ಅವಕಾಶ ಇದೆ. ಹಿಂದಿನ ಬಿಜೆಪಿ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನ ಹಿಂಪಡೆಯಲಾಗಿದೆ.

BBMP Ward Draft Finalized, Is There Is Ward Reduced Where BJP MLAs There

ಜನವರಿ 29, 2021ರಲ್ಲಿ 243 ವಾರ್ಡ್ ಗಳಾಗಿ ವಿಂಗಡಿಸಿ ಹಿಂದಿನ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಆಗಸ್ಟ್ 4, 2023ರಂದು ಹಿಂದಿನ ಸರ್ಕಾರ ಆದೇಶ ಹಿಂಪಡೆದು ಹೊಸ ಅಧಿಸೂಚನೆ ಹಾಲಿ ಸರ್ಕಾರ ಪ್ರಕಟ ಮಾಡಿದೆ. ಸರ್ಕಾರದ ಹೊಸ ಅಧಿಸೂಚನೆಯಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ 225 ವಾರ್ಡ್ ಗಳ ರಚನೆ ಆಗಿದೆ.

225 ವಾರ್ಡ್ ಗಳ ಕರಡು ಪ್ರತಿ ಸದ್ಯ ಪ್ರಕಟ ಮಾಡಲಾಗಿದೆ. ಸಾರ್ವಜನಿಕರು, ಸಂಘ ಸಂಸ್ಥೆಗಳ ಆಕ್ಷೇಪಣೆಗೆ ಅವಕಾಶ ಇದೆ. ಜನರ ಸಲಹೆ, ಅಭಿಪ್ರಾಯಗಳ‌ ಪಡೆದು ಅಂತಿಮ ಪ್ರತಿ ಸರ್ಕಾರ ಪ್ರಕಟಣೆ ಮಾಡುತ್ತದೆ. ಸಲಹೆ, ಆಕ್ಷೇಪಣೆಗಳನ್ನ ಸಲ್ಲಿಸಲು 15 ದಿನಗಳ ಕಾಲಾವಕಾಶ ಕೂಡ ನೀಡಲಾಗಿದೆ. 15 ದಿನಗಳಲ್ಲಿ ಸಾರ್ವಜನಿಕರು & ಸಂಘ ಸಂಸ್ಥೆಗಳು ವಾರ್ಡ್ ಪುನರ್‌ ವಿಂಗಡಣೆ ಬಗ್ಗೆ ಆಕ್ಷೇಪಣೆ ಸಲ್ಲಿಸಬಹುದು.

BBMP Ward Draft Finalized, Is There Is Ward Reduced Where BJP MLAs There

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಸ್ತಿತದಲ್ಲಿ ಇದ್ದ ಬಿಬಿಎಂಪಿಯ 198 ವಾರ್ಡ್‌ಗಳನ್ನು 243ಕ್ಕೆ ಹೆಚ್ಚಿಸಲಾಗಿತ್ತು. ವಾರ್ಡ್‌ ಮರುವಿಂಗಣೆ ಕುರಿತಂತೆ ಅಸಮಾಧಾನ ವ್ಯಕ್ತ ಪಡಿಸಿ ಮಾಜಿ ಕಾರ್ಪೊರೇಟರ್ ಸೇರಿ ಹಲವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆಗ ಇರುವ ಲೋಪ ದೋಷಗಳನ್ನು ಸರಿ ಮಾಡಿ ಮತ್ತೆ ಸಲ್ಲಿಕೆ ಮಾಡಲು ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.

ಕೊನೆಗೆ ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದಲ್ಲಿ ಸರ್ಕಾರ ಸಮಿತಿ ರಚನೆ ಮಾಡಿ ವಾರ್ಡ್ ಪುನರ್ ವಿಂಗಡಣೆ ಮಾಡಿದೆ. ಬಿಜೆಪಿ ಶಾಸಕರು ಇರುವ ಕಡೆ ಬಹುತೇಕ ವಾರ್ಡ್ ಕಡಿತಗೊಳಿಸಲಾಗಿದೆ. ಈ ಬಾರಿ 18 ವಾರ್ಡ್ ಕಡಿತ ಮಾಡಿ 225 ವಾರ್ಡ್ ಕರಡು ಪ್ರತಿ ಪ್ರಕಟ ಮಾಡಲಾಗಿದೆ.

ಸಾರ್ವಜನಿಕರು ಇದರ ಬಗ್ಗೆ ಆಕ್ಷೇಪ ಎತ್ತಲು ಅವಕಾಶ ಇದೆ. ವಾರ್ಡ್‌ಗಳ ಬಗ್ಗೆ ಸಾರ್ವಜನಿಕರು ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ 436, 4ನೇ ಮಹಡಿ, ವಿಕಾಸಸೌಧ, ಡಾ. ಬಿ.ಆರ್‌.ಅಂಬೇಡ್ಕರ್‌ ವೀದಿ, ಬೆಂಗಳೂರು: 560001ಗೆ ಆಕ್ಷೇಪಣೆ ಸಲ್ಲಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+