ಹೈಕೋರ್ಟ್ ತೀರ್ಪಿನ ಅಲಗಿನಡಿ ಬಿಬಿಎಂಪಿ ಮೇಯರ್ ಆಯ್ಕೆ
ಬೆಂಗಳೂರು, ಸೆಪ್ಟೆಂಬರ್, 09: ಬಿಬಿಎಂಪಿ ಚುನಾವಣೆ ಮತದಾನಕ್ಕೆ ಸಂಬಂಧಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈ ಕೋರ್ಟ್ ಚುನಾವಣೆ ನಡೆಸಲು ಆತಂಕವಿಲ್ಲ ಎಂದು ಹೇಳಿದೆ.
ಸೆಪ್ಟೆಂಬರ್ 11 ರಂದು ನಿಗದಿಯಂತೆ ಚುನಾವಣೆ ನಡೆಸಿ ಮೇಯರ್ ಆಯ್ಕೆ ಮಾಡಬಹುದು. ಆದರೆ ರಿಟ್ ಅರ್ಜಿಯ ವಿಚಾರಣೆ ಮುಗಿದು ಯಾವ ತೀರ್ಮಾನ ಹೊರಬರುತ್ತದೆಯೋ ಅದಕ್ಕೆ ಬದ್ಧರಾಗಿರಬೇಕಾಗುತ್ತದೆ ಎಂದು ಹೇಳಿದೆ.[ಬಿಬಿಎಂಪಿ ಮೇಯರ್ ಆಯ್ಕೆಗೆ ಸೆ.11ಕ್ಕೆ ಚುನಾವಣೆ]

ಬಿಬಿಎಂಪಿ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರಿಗೆ ಮತದಾನದ ಹಕ್ಕು ನೀಡಬಾರದು ಎಂದು ಬಿಜೆಪಿ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ಹೈ ಕೋರ್ಟ್ ವಿಚಾರಣೆ ನಡೆಸಿತು.
ಕಾಂಗ್ರೆಸ್ ಮತ್ತು ಜೆಡಿಎಸ್ ಮೇಯರ್ ಸ್ಥಾನಕ್ಕೆ ಹೊಂದಾಣಿಕೆ ಮಾಡಿಕೊಂಡಿವೆ. ಅತಿ ಹೆಚ್ಚು ಸ್ಥಾನ ಗಳಿಸಿದ ಬಿಜೆಪಿ ಮತದಾನ ಪ್ರಕ್ರಿಯೆ ಬಗ್ಗೆ ಇರುವ ಗೊಂದಲ ನಿವಾರಣೆ ಮಾಡಬೇಕು ಎಂದು ಹೈ ಕೋರ್ಟ್ ಮೊರೆ ಹೋಗಿತ್ತು. [ಬಿಬಿಎಂಪಿಯ ಮೇಯರ್ ಹುದ್ದೆ ಮ್ಯಾಜಿಕ್ ನಂಬರ್ 131]
ಒಂದು ವೇಳೆ ಮೇಯರ್ ಮತ್ತು ಉಪಮೇಯರ್ ಆಯ್ಕೆ ನಡೆದರು ಹೈ ಕೋರ್ಟ್ ಮತದಾನ ಪ್ರಕ್ರಿಯೆ ಅಸಿಂಧು ಎಂಬ ತೀರ್ಪು ನೀಡಿದರೆ ಪುನಃ ಚುನಾವಣೆ ನಡೆಸಬೇಕಾಗಿ ಬರುವುದು.












Click it and Unblock the Notifications