ಬಿಬಿಎಂಪಿ ಚುನಾವಣೆಗೆ ಕೌಂಟ್‌ಡೌನ್; ಸರಕಾರಕ್ಕೆ ಡಿಲಿಮಿಟೇಶನ್ ವರದಿ ಸಲ್ಲಿಕೆ

ಬೆಂಗಳೂರು, ಜೂನ್ 09: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆ ಮುಖ್ಯವಾದ ಘಟ್ಟವನ್ನು ತಲುಪಿದೆ. ಬಿಬಿಎಂಪಿ ಸರ್ಕಾರಕ್ಕೆ ಡಿಲಿಮಿಟೇಷನ್ ವರದಿಯನ್ನು ಸಲ್ಲಿಕೆ ಮಾಡಿದೆ. ಬಹುನಿರೀಕ್ಷಿತ ಬಿಬಿಎಂಪಿ ಚುನಾವಣೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿತ್ತು. 12 ವಾರದಲ್ಲಿ ಚುನಾವಣೆ ನಡೆಸುವಂತೆ ಸೂಚನೆಯ್ನು ನೀಡಿತ್ತು. ಸರ್ಕಾರಕ್ಕೆ ಬಿಬಿಎಂಪಿ ಡಿಲಿಮಿಟೇಷನ್ ವರದಿಯನ್ನು ಸಲ್ಲಿಕೆ ಮಾಡಿರುವುದರಿಂದ ಚುನಾವಣೆಗೆ ದಿ‌ನಗಣನೆ ಆರಂಭವಾಗಿದೆ. ಡಿಲಿಮಿಟೇಷನ್ ಸಂಬಂಧ ಅಧಿಕೃತವಾಗಿ ಪಾಲಿಕೆ ವತಿಯಿಂದ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ.

ಡಿಲಿಮಿಟೇಷನ್ ವರದಿಯ ಅಂಶಗಳೇನು, ಯಾವೆಲ್ಲಾ ಮಾನದಂಡಗಳ‌ ಮೇಲೆ ಡಿಲಿಮಿಟೇಷನ್ ಮಾಡಲಾಗಿದೆ ಎಂಬುದರ ಡೀಟೆಲ್ಸ್ ಇಲ್ಲಿದೆ.

ಬಿಬಿಎಂಪಿ ಚುನಾವಣೆಗೆ ದಿನಗಣನೆ ಆರಂಭ

ಬಿಬಿಎಂಪಿ ಚುನಾವಣೆ ಸಂಬಂಧ ಪಾಲಿಕೆ ಅಧಿಕೃತವಾಗಿ ಡಿಲಿಮಿಟೇಷನ್ ವರದಿಯನ್ನ ಸರ್ಕಾರಕ್ಕೆ ಸಲ್ಲಿಸಿದೆ.‌ ವಾರ್ಡ್ ಮರುವಿಂಗಡಣೆ ಪಟ್ಟಿಯನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸರ್ಕಾರಕ್ಕೆ ಸಲ್ಲಿಸಿದ್ದು, ಈ ಸಂಬಂಧ ಬಿಬಿಎಂಪಿ ಸ್ಪೆಷಲ್ ಕಮಿಷನರ್ ರಂಗಪ್ಪ ಸ್ಪಷ್ಟೀಕರಣ ನೀಡಿದ್ದಾರೆ. ಈ ಹಿಂದೆ ಪಾಲಿಕೆ ವತಿಯಿಂದ ನಗರಾಭಿವೃದ್ಧಿ ಇಲಾಖೆಗೆ ವರದಿ ಸಲ್ಲಿಸಲಾಗಿದ್ದು, ಆ ವರದಿಯಲ್ಲಿ ಕೆಲವೊಂದು ಮಾರ್ಪಡುಗಳನ್ನ ಮಾಡಿ ಪುನಃ ಸಲ್ಲಿಸುವಂತೆ ಸರ್ಕಾರ ಸೂಚನೆ ನೀಡಿತ್ತು.‌ ಈ ಹಿನ್ನಲೆ ಪಾಲಿಕೆ ಅಧಿಕೃತವಾಗಿ ವರದಿ ಸಲ್ಲಿಕೆ‌ ಮಾಡಿದೆ.

BBMP submits 243 Wards Delimitation Report To Government As Election Countdown Begins

ಯಾವ್ಯಾವ ಮಾನದಂಡಗಳ‌ ಮೇಲೆ ಡಿಲಿಮಿಟೇಷನ್

* 198 ವಾರ್ಡ್‌ಗಳನ್ನು 243 ವಾರ್ಡ್ ಗಳಾಗಿ ಪುನರ್ವಿಂಗಡಣೆ.

* 2011 ರ ಜನಗಣತಿ ಆಧಾರದ ಮೇಲೆ ಡಿಲಿಮಿಟೇಷನ್ ಪ್ರಕ್ರಿಯೆ.

* ಒಂದು ವಾರ್ಡಿಗೆ 35 ಸಾವಿರ ಜನಸಂಖ್ಯೆ ನಿಗದಿ.

* ಒಟ್ಟು ಬಿಬಿಎಂಪಿ ವ್ಯಾಪ್ತಿಯಲ್ಲಿ 86 ಲಕ್ಷ ಮತದಾರರರು.

ಬೆಂಗಳೂರು ಮಹಾನಗರ ಪಾಲಿಕೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಡಿದಾಗ 198 ವಾರ್ಡ್‌ಗಳನ್ನು ರಚನೆ ಮಾಡಲಾಗಿತ್ತು. ಇದೀಗ ವಾರ್ಡ್‌ಗಳ ಮರುವಿಂಗಡಣೆಯನ್ನು ಮಾಡಿದ್ದು 243 ವಾರ್ಡ್‌ಗಳನ್ನು ಮರುವಿಂಗಡಣೆ ಮಾಡಲಾಗಿದೆ. ವಾರ್ಡ್‌ಗಳನ್ನು 2011ರ ಜನಸಂಖ್ಯಾ ಆಧಾರದಲ್ಲಿ ವಿಂಗಡಿಸಲಾಗಿದೆ. ವಾರ್ಡ್ ಮರುವಿಂಗಡಣೆಯ ವೇಳೆ ಪ್ರತಿವಾರ್ಡ್‌ಗೆ 35 ಸಾವಿರ ಜನಸಂಖ್ಯಾ ಮಿತಿಯನ್ನು ನಿಗಧಿ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 86 ಲಕ್ಷ ಮತದಾರರಿದ್ದಾರೆ ಎಂದು ಬಿಬಿಎಂಪಿ ತಿಳಿಸಿದೆ.

BBMP submits 243 Wards Delimitation Report To Government As Election Countdown Begins

ಮೊದಲ ಬಾರಿಗೆ 50 - 50 ಮಹಿಳಾ ಮೀಸಲಾತಿಗೆ ಅವಕಾಶ:

ಬಿಬಿಎಂಪಿ ವಾರ್ಡ್‌ಗಳನ್ನು ಮರುವಿಂಗಡಣೆ ಕಾರ್ಯವನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ. ಸರ್ಕಾರ ಮೀಸಲಾತಿಯನ್ನು ನಿಗದಿ ಪಡಿಸಬೇಕಿದೆ. ಇನ್ನು ಮಹಿಳಾ ಮತದಾರದನ್ನು ಸೆಳೆಯುವ ದೃಷ್ಟಿಯಿಂದ ಶೇ 50ರಷ್ಟು ಮಹಿಳೆಯರಿಗೆ ಮೀಸಲಾತಿ ಘೋಷಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಸರ್ಕಾರದ ಅನುಮೋದನೆ ಬಾಕಿ:

‌ಪಾಲಿಕೆ 198 ಇದ್ದ ವಾರ್ಡ್ಗನ್ನು 243 ವಾರ್ಡ್ ಗೆ ಏರಿಕೆ ಮಾಡಿ ಸರ್ಕಾರಕ್ಕೆ ವರದಿ ನೀಡಿದ್ದು, ಈ ವರದಿಗೆ ‌ಸರ್ಕಾರದ ಅನುಮೋದನೆ ಸಿಕ್ಕ ನಂತರ ಸಾರ್ವಜನಿಕರ ಮುಂದಿಡಲಿದೆ.‌ ವಾರ್ಡ್ ವಿಂಗಡಣೆ ಪಟ್ಟಿ ಸಂಬಂಧ ಸಾರ್ವಜನಿಕ ಆಕ್ಷೇಪಣೆಗೆ ಒಂದು ವಾರ ಕಾಲಾವಕಾಶ ನೀಡಲಿದೆ.‌ ಗಡಿಗುರುತಿಸಿರುವ ಬಗ್ಗೆ ಸಲಹೆ ಅಭಿಪ್ರಾಯ ಪಡೆಯಲಿದೆ.‌ ನಂತರ ಅಂತಿಮ ಪಟ್ಟಿ ಸಿದ್ದವಾದ ಬಳಿಕ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ.‌ ಇನ್ನೂ ಡಿಲಿಮಿಟೇಷನ್ ವರದಿ ಸಂಬಂದ ಪಾಲಿಕೆಯ ಮಾಜಿ ನಾಯಕರು ಅಬ್ದುಲ್ ವಾಜಿದ್‌ ಪ್ರತಿಕ್ರಿಯೆ ನೀಡಿದ್ದು ""ಆದಷ್ಟು ಬೇಗ ಬಿಬಿಎಂಪಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಲಿ'' ಎಂದಿದ್ದಾರೆ

BBMP submits 243 Wards Delimitation Report To Government As Election Countdown Begins

ಬಿಬಿಎಂಪಿ ಹಲವಾರು ಗೊಂದಲ ಸರ್ಕಾರದ ನಿರ್ಧಾರಗಳ ನಡುವೆಯೂ ವಾರ್ಡ್ ಪುನರ್ ವಿಂಗಡಣೆ ವರದಿ ಸಿದ್ದವಾಗಿ ಅಧಿಕೃತವಾಗಿ ಸರ್ಕಾರಕ್ಕೆ‌ ಸಲ್ಲಿಕೆಯಾಗಿದೆ.‌ ಈ ಮೂಲಕ ಚುನಾವಣಾ ಕಾರ್ಯ ಚುರುಕಾಗಿದ್ದು ಸೆಪ್ಟೆಂಬರ್‌ನಲ್ಲಿ ಬಿಬಿಎಂಪಿ ಚುನಾವಣೆ ನಡೆಯುವ ಎಲ್ಲಾ ಸಾಧ್ಯತೆಗಳಿವೆ. ‌

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+