ಪೌರಕಾರ್ಮಿಕರ ಪಟ್ಟಿ ಪರಿಷ್ಕರಣೆಗೆ ಮುಂದಾದ ಪಾಲಿಕೆ
ಬೆಂಗಳೂರು, ಮೇ.2: ಪೌರಕಾರ್ಮಿಕರೆಂದು ಹೇಳಿ ವೇತನ ಪಡೆಯುತ್ತಿರುವವ ವಿರುದ್ಧ ಕ್ರಮಕ್ಕೆ ಬಿಬಿಎಂಪಿ ಸಿದ್ಧತೆ ನಡೆಸಿದೆ. ಕಳೆದ 2 ವರ್ಷಗಳಿಂದ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸಿದ್ದಾರೆಂದು ಖಾತ್ರೊ ಪಡಿಸುವ ದಾಖಲೆ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ.
ದಿನದಿಂದ ದಿನಕ್ಕೆ ಪೌರಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ. ಪೌರಕಾರ್ಮಿಕರಲ್ಲದವರೂ ತಮ್ಮ ಹೆಸರನ್ನು ಪೌರಕಾರ್ಮಿಕರ ಪಟ್ಟಿಯಲ್ಲಿ ಸೇರಿಸಿರುವುದೇ ಇದಕ್ಕೆ ಕಾರಣ ಎಂಬ ಅನುಮಾನ ಬಿಬಿಎಂಪಿ ಅಧಿಕಾರಿಗಳಲ್ಲಿದೆ. ಆದ್ದರಿಂದ ಪ್ರಸ್ತುತ ಪೌರಕಾರ್ಮಿಕರೆಂದು ಬಯೋಮೆಟ್ರಿಕ್ ಹಾಜರಾತಿ ಹಾಕುತ್ತಿರುವುದರಿಂದ 2 ವರ್ಷಗಳಿಂದ ಗುತ್ತಿಗೆದಾರರಿಂದ ವೇತನ ಪಡೆಯುತ್ತಿರುವ ದಾಖಲೆಗಳನ್ನು ಪಡೆಯಲು ನಿರ್ಧರಿಸಲಾಗಿದೆ.
ದಾಖಲೆಗಳ ಪರಿಶೀಲನೆ ವೇಳೆ ಈ ಹಿಂದೆ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸಿಲ್ಲ ಎಂಬುದು ತಿಳಿದುಬಂದರೆ ಕಾನೂನಿನ ಪ್ರಕಾರ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ, ಅವರನ್ನು ಪೌರಕಾರ್ಮಿಕರ ಪಟ್ಟಿಯಲ್ಲಿ ಸೇರಿಸಲು ಸಹಕರಿಸಿದ ಸಿಬ್ಬಂದಿ ಮತ್ತು ಅಧಿಕಾರಿಗಳ ಮೇಲೂ ಪ್ರಕರಣ ದಾಖಲಿಸಲಾಗುತ್ತದೆ.

ಜತೆಗೆ ಇಲಾಖಾ ತನಿಖೆಗೊಳಪಡಿಸಲಾಗುತ್ತದೆ. ಒಂದು ವೇಳೆ ತನಿಖೆಯಲ್ಲಿ ತಪ್ಪಿತಸ್ಥರು ಎಂಬುದು ತಿಳಿದುಬಂದರೆ ಅಮಾನತು ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications