• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಯೋಮೆಟ್ರಿಕ್ ಹಾಜರಿ: ಬಿಬಿಎಂಪಿಗೆ 250 ಕೋಟಿ ಉಳಿತಾಯ

|

ಬೆಂಗಳೂರು, ಮಾರ್ಚ್ 24: ಪೌರಕಾರ್ಮಿಕರ ಹಾಜರಾತಿಯನ್ನು ಟ್ರ್ಯಾಕ್ ಮಾಡಲು ಅನುಕೂಲವಾಗುವಂತೆ ಅಳವಡಿಸಿಸಿರುವ ಆಧಾರ್ ಕಾರ್ಡ್ ಆಧಾರಿತ ಬಯೋಮೆಟ್ರಿಕ್ ವ್ಯವಸ್ಥೆಯಿಂದ ಬಿಬಿಎಂಪಿಗೆ 250 ಕೋಟಿ ರೂ ಉಳಿತಾಯವಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಪೌರಕಾರ್ಮಿಕರ ಹಾಜರಾತಿ ವಿಚಾರದಲ್ಲಿ ವಂಚನೆ ಮಾಡಿ ಹಣ ಲಪಟಾಯಿಸುವ ಗುತ್ತಿಗೆದಾರರ ಅಕ್ರಮಗಳಿಗೆ ಕಡಿವಾಣ ಹಾಕಲು ಸಜ್ಜಾಗಿರುವ ಬಿಬಿಎಂಪಿಯು ನಗರದಲ್ಲಿ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬ ಪೌರ ಕಾರ್ಮಿಕರ ಹಾಜರಾತಿಯನ್ನು ಟ್ರ್ಯಾಕ್‌ ಮಾಡಲು ಬಯೋಮೆಟ್ರಿಕ್ ಯಂತ್ರವನ್ನು ಅಳವಡಿಸಲಾಗಿದೆ.

ಘನತ್ಯಾಜ್ಯ ನಿರ್ವಹಣೆ ಕರವನ್ನು ಕೈಬಿಟ್ಟ ಬಿಬಿಎಂಪಿ

ಈ ಮೊದಲು ನೇರ ಹಣ ಪಾವತಿ ಸಂದರ್ಭದಲ್ಲಿ ತ್ಯಾಜ್ಯ ನಿರ್ವಹಣಾ ಬಿಲ್ ಅಡಿಯಲ್ಲಿ 1 ಸಾವಿರ ಕೋಟಿ ವೆಚ್ಚವಾಗುತ್ತಿತ್ತು. ಆದರೆ ಬಯೋ ಮೆಟ್ರಿಕ್ ಹಾಜರಾತಿಯನ್ನು ಆರಂಭಿಸಿರುವ ಕಾರಣ 250ಕೋಟಿ ರೂ ಉಳಿತಾಯವಾಗಿದೆ.

BBMP saves Rs 250 crore with Biometric attendance

ತ್ಯಾಜ್ಯ ಸಾಗಿಸುವ ವಾಹನಗಳಿಗೆ ಜಿಪಿಎಸ್ ಅಳವಡಿಸಿದರೆ ಇನ್ನೂ 150 ಕೋಟಿ ರೂ ಗಳನ್ನು ಉಳಿಸಬಹುದು ಎಂದು ಬಿಬಿಎಂಪಿ ಆಲೋಚಿಸಿದೆ.ಈಗಾಗಲೇ ಜಿಪಿಎಸ್ ಹಾಗೂ ರೇಡಿಯೋ ಫ್ರಿಕ್ವೆನ್ಸಿ ಕಾರ್ಡ್ ನೀಡಲು ಸಿದ್ಧತೆ ನಡೆಸಲಾಗಿದೆ.

ಈ ಮೊದಲು ಬಿಬಿಎಂಪಿಯಲ್ಲಿ ಗುತ್ತಿಗೆದಾರರು ಕಸ ವಿಲೇವಾರಿಯಲ್ಲಿ ಹಲವು ರೀತಿಯ ಹಗರಣಗಳು ನಡೆಯುತ್ತಿತ್ತು. ಇದರಲ್ಲಿ ಪೌರಕಾರ್ಮಿಕರ ಹಾಜರಾತಿಯೂ ಸಹ ದೊಡ್ಡ ಹಗರಣ. ಬಿಬಿಎಂಪಿಯಲ್ಲಿ ಗುತ್ತಿಗೆ ಪಡೆದಿರುವ ಗುತ್ತಿಗೆದಾರರ ಎರಡರಿಂದ ಮೂರು ಪ್ಯಾಕೇಜ್‌ಗಳ (ಪ್ಯಾಕೇಜ್‌ಗೆ 2-3 ವಾರ್ಡ್ ) ಗುತ್ತಿಗೆ ಪಡೆದಿದ್ದಾರೆ. ಅವರು ಸ್ಥಳೀಯ ವಾರ್ಡ್ ಇಂಜಿನಿಯರ್ ಗೆ ಬೆಳಗ್ಗೆ ಕೆಲಸಕ್ಕೆ ಹಾಜರಾಗುತ್ತಿರುವ ಪೌರ ಕಾರ್ಮಿಕರು ಹಾಗೂ ಸಲಕರಣೆಗಳ ಪೆರೇಡ್ ನಡೆಸಬೇಕು.

ಈ ವೇಳೆ ಗುತ್ತಿಗೆದಾರ ಒಂದು ವಾರ್ಡ್ ನಲ್ಲಿ ಪ್ರದರ್ಶಿಸುವ ಪೌರಕಾರ್ಮಿಕರು ಹಾಗೂ ಸಲಕರಣೆಗಳನ್ನೇ ಮತ್ತೂಂದು ವಾರ್ಡ್ ನಲ್ಲೂ ಪ್ರದರ್ಶಿಸುತ್ತಿದ್ದರು ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಬಯೋಮೆಟ್ರಿಕ್ ಹಾಜರಾತಿಯನ್ನು ಜಾರಿಗೆ ತಂದಿತ್ತು.5,500 ಆಟೋಗಳು ನಗರದಲ್ಲಿರುವ ತ್ಯಾಜ್ಯವನ್ನು ಸಂಗ್ರಹಿಸುತ್ತವೆ.. ಒಂದೊಮ್ಮೆ ಆರ್‌ಎಫ್‌ಐಡಿ ಕಾರ್ಡ್ ಹಾಗೂ ಜಿಪಿಎಸ್ ಅಳವಡಿಸಿದರೆ ಆಟೋಗಳ ಸಂಖ್ಯೆ 3500ಕ್ಕೆ ಕಡಿಮೆಯಾಗುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬೆಂಗಳೂರು ಸುದ್ದಿಗಳುView All

English summary
Under the contractor regime, before pourakarmikas were brought under the direct payment system, the BBMP was crumbling under huge solid waste management bills that crossed the 1 thousand crorre mark annualy.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more