ಬಿಬಿಎಂಪಿಯ 1125 ಉದ್ಯಾನಗಳಿಗೆ ಟ್ಯಾಂಕರ್ ನೀರು

ಬೆಂಗಳೂರು, ಮಾರ್ಚ್ 22: ನೀರಿನ ಕೊರತೆ ಇರುವ ಉದ್ಯಾನಗಳಿಗೆ ಟ್ಯಾಂಕರ್ ನೀರು ಪೂರೈಸುವಂತೆ ಬಿಬಿಎಂಪಿಯು ಜಲಮಂಡಳಿಯನ್ನು ಕೋರಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಬಿಬಿಎಂಪಿಯ 1,125 ಉದ್ಯಾನಗಳಲ್ಲಿ ನೀರಿನ ಕೊರತೆ ಉಂಟಾಗಿರುವುದರಿಂದ ಟ್ಯಾಂಕರ್ ಗಳಿಂದ ನೀರು ಪೂರೈಸಲು ಬಿಬಿಎಂಪಿ ಜಲಮಂಡಳಿಗೆ ಕೋರಿದೆ. ಬುಧವಾರ ಮೇಯರ್ ಆರ್. ಸಂಪತ್ ರಾಜ್ ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಬಿಬಿಎಂಪಿಯ 1251 ಉದ್ಯಾನಗಳ ಪೈಕಿ 126 ಉದ್ಯಾನಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಇದೆ. ಈ ಉದ್ಯಾನಗಳಲ್ಲಿ ನೀರಿನ ಸಮಸ್ಯೆ ಇಲ್ಲ. ಉಳಿದ ಉದ್ಯಾನಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸದಿರುವುದರಿಂದ ನೀರಿನ ಕೊರತೆ ಉಂಟಾಗಿದೆ.

BBMPs 1,125 parks have no water

ಅದರಲ್ಲೂ ಬೇಸಿಗೆ ಸಮಯದಲ್ಲಿ ಸಸಿಗಳು ಬಾಡುತ್ತಿರುವುದರಿಂದ ತುರ್ತಾಗಿ ನೀರು ಪೂರೈಸಬೇಕಿದೆ. ಅದರಲ್ಲಿ 250ಕ್ಕೂ ಅಧಿಕ ಉದ್ಯಾನಗಳ ಬೋರ್ ವೆಲ್ ಗಳು ಬತ್ತಿಹೋಗಿವೆ. ಉಳಿದ ಉದ್ಯಾನಗಳಲ್ಲಿ ಬೋರ್ ವೆಲ್ ನೀರು ದೊರೆಯುತ್ತಿದ್ದರೂ ಕೆಲವೇ ವಾರಗಳಲ್ಲಿ ಮುಗಿಯುವ ಆತಂಕವಿದೆ.

ಅದ್ಯಕ್ಕೆ ಉಚಿತ ನೀರು: ಮೇಯರ್ ಜತೆ ಚರ್ಚೆ ನಡೆಸಿ ಜಲಮಂಡಳಿ ಅಧಿಕಾರಿಗಳು ಕೆಲ ತಿಂಗಳು ಉಚಿತವಾಗಿ ಟ್ಯಾಂಕರ್ ನೀರು ಪೂರೈಸಲು ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಜಲಮಂಡಳಿಯಲ್ಲಿ 550 ಟ್ಯಾಂಕರ್ ಗಳಿದ್ದು, 64 ಟ್ಯಾಂಕರ್ ಗಳನ್ನು ಉದ್ಯಾನಕ್ಕೆ ನೀರು ನೀಡಲು ಬಳಸಿಕೊಳ್ಳಬಹುದು ಎಂದು ಚರ್ಚೆಯಾಗಿದೆ. ಟ್ಯಾಂಕರ್ ನಿಂದ ಪೂರೈಸುವ ಒಂದು ಸಾವಿರ ಲೀಟರ್ ನೀರಿಗೆ ಜಲಮಂಡಳಿಯು 25ರೂ ವಿಧಿಸುತ್ತದೆ.

ಸಂಸ್ಕರಿತ ನೀರು ಹೆಚ್ಚಿಗೆ ದರ ಇರುವುದರಿಂದ ಖಾಸಗಿ ಕಂಪನಿ, ಕಾರ್ಖಾನೆಗಳು ಖರೀದಿಸಲು ಮುಂದೆ ಬರುತ್ತಿಲ್ಲ. ಉದ್ಯಾನಗಳಿಗೆ ಸಂಸ್ಕರಿತ ನೀರು ಬಳಸಲು ಖರೀದಿ ಪ್ರಕ್ರಿಯೆ ನಡೆಸುವಂತೆ ಜಲಮಂಡಳಿ ಹಿಂದೆಯೇ ಬಿಬಿಎಂಪಿಗೆ ಪ್ರಸ್ತಾವ ಸಲ್ಲಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+