ಬೆಂಗಳೂರಲ್ಲಿ ಆಸ್ತಿ ತೆರಿಗೆ ಪಾವತಿ : ಲೇಟೆಸ್ಟ್ ಸುದ್ದಿ ಏನಿದೆ?
ಬೆಂಗಳೂರು, ಏಪ್ರಿಲ್ 14: ಆನ್‌ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿ ಗೊಂದಲ ನಿವಾರಿಸಲಾಗಿದೆ. ಮೂರು ಬ್ಯಾಂಕ್ ಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಕುಮಾರ ಪುಷ್ಕರ್ ಬುಧವಾರ ತಿಳಿಸಿದ್ದಾರೆ.
ಆಸ್ತಿ ತೆರಿಗೆ ಪಾವತಿಗೆ ಕೆನರಾ ಬ್ಯಾಂಕಿನ 175 ಬ್ರ್ಯಾಂಚ್ ಗಳಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.ಈಗ ಐಸಿಐಸಿಐ, ಯಸ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ಗಳ ಶಾಖೆಗಳಲ್ಲೂ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕುಮಾರ್ ಪುಷ್ಕರ್ ಹೇಳಿದರು. ಐಸಿಐಸಿಐನ 110 ಶಾಖೆಗಳು, ಆಕ್ಸಿಸ್ ಬ್ಯಾಂಕಿನ 80, ಯಸ್ ಬ್ಯಾಂಕಿನ 35 ಬ್ರ್ಯಾಂಚ್ ಗಳಲ್ಲಿ ತೆರಿಗೆ ಪಾವತಿಸಬಹುದು.[ಬೆಂಗಳೂರಿಗರೇ ಗಮನಿಸಿ: ಏಪ್ರಿಲ್ 01 ರಿಂದ ಆಸ್ತಿ ತೆರಿಗೆ ಹೆಚ್ಚಳ]
ಪ್ರತಿ ಶಾಖೆಗಳಲ್ಲಿ 2 ತೆರಿಗೆ ಪಾವತಿ ಕೇಂದ್ರ ಆರಂಭಿಸುವಂತೆ ಸೂಚಿಸಲಾಗಿದೆ. ಜೊತೆಗೆ ಬೇರೆ ಬ್ಯಾಂಕ್ಗಳ ಡಿಡಿಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ. ಪಾಲಿಕೆಯ 268 ಸಹಾಯ ಕೇಂದ್ರಗಳಲ್ಲಿ ತೆರಿಗೆ ಕಟ್ಟಲು ಚಲನ್ ಪಡೆಯುವ ಮತ್ತು ಭರ್ತಿ ಮಾಡುವ ಮಾಹಿತಿ ನೀಡಲಾಗುತ್ತದೆ ಎಂದು ಕುಮಾರ್ ಹೇಳಿದರು.[ಆನ್ ಲೈನ್ ಮೂಲಕ ತೆರಿಗೆ ಕಟ್ಟುವುದು ಹೇಗೆ?]
ಬಿಬಿಎಂಪಿಯ ಯಾವುದೇ ಕಚೇರಿಯಲ್ಲಿ ಆಸ್ತಿ ತೆರಿಗೆ ಪಾವತಿ ಮಾಡುವಂತಿಲ್ಲ. ಬೆಂಗಳೂರು ಒನ್ ಕೇಂದ್ರದಲ್ಲಿ ತೆರಿಗೆ ಪಾವತಿ ಮಾಡುವ ವ್ಯವಸ್ಥೆಯನ್ನು ಪಾಲಿಕೆ ಇನ್ನೂ ಒದಗಿಸಿಲ್ಲ. ಆನ್‌ಲೈನ್ ಮೂಲಕ ಪಾವತಿ ಮಾಡಲು ಸಾಧ್ಯವಾಗದಿದ್ದರೆ ಬ್ಯಾಂಕ್ ಗಳಲ್ಲಿ ಪಾವತಿಸಬಹುದು.[ಮೈಸೂರು ಮಹಾನಗರ ಆಸ್ತಿ ತೆರಿಗೆ ಪಾವತಿದಾರರ ಗಮನಕ್ಕೆ]

ಆನ್‌ಲೈನ್ ಪಾವತಿ ಸಮಸ್ಯೆ ನಿವಾರಣೆ
ಆನ್‌ಲೈನ್ ಪಾವತಿ ಬಹುತೇಕ ನಿವಾರಣೆ ಮಾಡಲಾಗಿದೆ. ಮಂಗಳವಾರ ಸಂಜೆ ವೇಳೆಗೆ ತೆರಿಗೆ ಪಾವತಿ ಮತ್ತು ಮಾಹಿತಿ ಪಡೆಯಲು ಪಾಲಿಕೆಯ ವೆಬ್ಸೈಟ್ಗೆ 1.37 ಲಕ್ಷ ಮಂದಿ ಭೇಟಿ ನೀಡಿದ್ದಾರೆ. 36,500 ಚಲನ್ ಗಳ ಪೈಕಿ 30,250 ವಿತರಣೆ ಮಾಡಲಾಗಿದೆ.

ಬ್ಯಾಂಕ್ಗಳಲ್ಲಿ ತೆರಿಗೆ ಪಾವತಿ
3,500 ಮಂದಿ ತೆರಿಗೆ ಪಾವತಿ ಚಲನ್ ಪಡೆದಿದ್ದು, ಆ ಚಲನ್ಗಳ ಮೂಲಕ 3,250 ಮಂದಿ ಬ್ಯಾಂಕ್ಗಳಲ್ಲಿ ತೆರಿಗೆ ಪಾವತಿಸಿದ್ದಾರೆ. ವೆಬ್ಸೈಟ್ ಮೂಲಕ ಚಲನ್ ಪಡೆದು 24 ಕೋಟಿ ರೂ. ತೆರಿಗೆ ಪಾವತಿಸಲಾಗಿದೆ. 18,789 ತೆರಿಗೆದಾರರು ಆನ್‌ಲೈನ್ ಮೂಲಕ ತೆರಿಗೆ ಪಾವತಿ ಮಾಡಿದ್ದು 11.50 ಕೋಟಿ ರೂ. ಸಂಗ್ರಹವಾಗಿದೆ

ತೆರಿಗೆ ಪಾವತಿ ಅಭಿಯಾನ
ಬಿ ಖಾತಾ ಹೊಂದಿರುವ ಆಸ್ತಿಗಳಿಗೆ ತೆರಿಗೆ ಪಾವತಿಗೆ ಅನುಕೂಲವಾಗಲೆಂದು ವೆಬ್‌ಸೈಟ್‌ನಲ್ಲಿ ಹೊಸ ತಂತ್ರಾಂಶ ಅಳವಡಿಸಲಾಗುತ್ತದೆ. ಮುಂದಿನ 15 ದಿನಗಳಲ್ಲಿ ತೆರಿಗೆ ಪಾವತಿ ಅಭಿಯಾನ ನಡೆಸಲಾಗುತ್ತದೆ. ಪಾಲಿಕೆ ವ್ಯಾಪ್ತಿಯ ಅಪಾರ್ಟ್ವೆುಂಟ್ಗಳಿಗೆ ಭೇಟಿ ನೀಡಿ ತೆರಿಗೆ ಪಾವತಿ ಕುರಿತಂತೆ ಜಾಗೃತಿ ಮೂಡಿಸಿ, ಮಾಹಿತಿ ನೀಡಲಾಗುವುದು

ಚೆಕ್, ಡಿಡಿ ಪಾವತಿ ಗೊಂದಲ
ಡಿಮ್ಯಾಂಡ್ ಡ್ರಾಫ್ಟ್ ಹಾಗೂ ನಗದು ಪಾವತಿ ಮಾಡಿದವರಿಗೆ ತಕ್ಷಣವೇ ರಸೀತಿ ಸಿಗಲಿದೆ. ಆದರೆ, ಚೆಕ್ ಮೂಲಕ ಪಾವತಿ ಮಾಡಿದವರು ತಕ್ಷಣಕ್ಕೆ ರಸೀತಿ ಪಡೆಯಲು ಸಾಧ್ಯವಿಲ್ಲ. ಚೆಕ್ ನಲ್ಲಿರುವ ಮೊತ್ತ ಬಿಬಿಎಂಪಿ ಕೈ ಸೇರಿದ ಮೇಲೆ ರಸೀತಿ ವಿತರಿಸಲಾಗುತ್ತದೆ

ಅರ್ಜಿ ನಮೂನೆ ಮತ್ತು ಚಲನ್ ಆನ್‌ಲೈನ್
ತೆರಿಗೆ ಪಾವತಿ ಮಾಡಲು ಜನರು ಅರ್ಜಿ ನಮೂನೆ ಮತ್ತು ಚಲನ್‌ಗಳನ್ನು ಆನ್‌ಲೈನ್‌ನಲ್ಲಿಯೇ ಪಡೆದುಕೊಳ್ಳಬೇಕು. bbmp.gov.in ಅಥವಾ bbmptax.karnataka.gov.in ವೆಬ್‌ಸೈಟ್‌ನಲ್ಲಿ ಸಿಗಲಿದೆ. ಕಳೆದ ಎರಡು ವಾರಗಳಿಂದ ಸುಮಾರು 35 ಕೋಟಿ ರು ತೆರಿಗೆ ಸಂಗ್ರಹಿಸಿದ್ದು, ಈ ಪೈಕಿ 11.5 ಕೋಟಿ ರು ಆನ್ ಲೈನ್ ಪೇಮೆಂಟ್ ಆಗಿರುವುದು ವಿಶೇಷ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications