ಬಿಬಿಎಂಪಿ ರೋಡ್ ರೋಲರ್ ಹರಿದು ಬಾಲಕ ಸಾವು, ಪ್ರತಿಭಟನೆ
ಬೆಂಗಳೂರು, ಮೇ 26: ಬಿಬಿಎಂಪಿಯ ರೋಡ್ ರೋಲರ್ ಹರಿದು ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ನಗರದ ಹಮ್ಮಿಗೆರೆಯಲ್ಲಿ ನಡೆದಿದೆ.
ಹಮ್ಮಿಗೆರೆಯ ವಾರ್ಡ್ ಒಂದರಲ್ಲಿ ರಸ್ತೆ ಕಾಮಗಾರಿ ನಡೆಯುವಾಗ ಸೈಕಲ್ ಚಲಾಯಿಸಿಕೊಂಡು ಬರುತ್ತಿದ್ದ ಬಾಲಕ ಮನು ರೋಡ್ ರೋಲರ್‌ಗೆ ಡಿಕ್ಕಿ ಹೊಡೆದಿದ್ದಾನೆ ರೋಡ್ ರೋಲರ್ ಚಾಲ ಕೂಡ ಬಾಲಕನನನ್ನು ಗಮನಿಸದೆ ಅವರ ರೋಲರ್ ಹತ್ತಿಸಿದ್ದಾನೆ.
ಮನು ಸ್ಥಳದಲ್ಲೇ ಮೃತಪಟ್ಟಿದ್ದು, ರೋಡ್ ರೋಲರ್ ಚಾಲಕ ಸ್ಥಳದಿಂದ ಪಲಾಯನ ಮಾಡಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತ ಬಾಲಕನ ಕುಟುಂಬಸ್ಥರು ಮತ್ತು ಹಮ್ಮಿಗೆರೆ ಸಾರ್ವಜನಿಕರು ಮೃತ ಬಾಲಕ ಮನುವಿನ ಶವ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದು, ಬಿಬಿಎಂಪಿ ಮೇಯರ್ ಹಾಗೂ ಅಧಿಕಾರಿಗಳು ಬರುವವರೆಗೆ ಶವದ ಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.











Click it and Unblock the Notifications