ಬಿಬಿಎಂಪಿಯಿಂದ ಮತ್ತೊಂದು ತೆರಿಗೆ ಸಂಗ್ರಹಕ್ಕೆ ಸಿದ್ಧತೆ

ಬೆಂಗಳೂರು, ನವೆಂಬರ್ 8: ಬೆಂಗಳೂರಿಗರೇ ಹೊಸ ತೆರಿಗೆ ಕಟ್ಟಲು ಸಿದ್ಧರಾಗಿ, ಮೈತ್ರಿ ಸರ್ಕಾರದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದ್ದ ಭೂ ಸಾರಿಗೆ ಉಪಕರ ಸಂಗ್ರಹಿಸಲು ಬಿಬಿಎಂಪಿ ಮುಂದಾಗಿದೆ.

ಸ್ವತ್ತುಗಳ ಆಸ್ತಿ ತೆರಿಗೆ ಮೇಲೆ ಶೇ.2ರಷ್ಟು ಸಾರಿಗೆ ಸೆಸ್ ಹೇರಿ, 40ಕೋಟಿ ರೂ ಸಾರಿಗೆ ಸೆಸ್ ಸಂಗ್ರಹಿಸಲು ಬಿಬಿಎಂಪಿ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದೆ. ಭೂ ಸಾರಿಗೆ ಕರ ಸಂಗ್ರಹಿಸಲು ಲೆಕ್ಕ ಪರಿಶೋಧಕರಿಂದಲೇ ಸರ್ಕಾರಕ್ಕೆ ಮಾಹಿತಿ ರವಾನಿಸಲಾಗಿದೆ.

ಅದನ್ನು ಪುರಸ್ಕರಿಸಿರುವ ರಾಜ್ಯ ಸರ್ಕಾರ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಆಸ್ತಿ ತೆರಿಗೆ ಮೊತ್ತದ ಶೇ.2ರಷ್ಟು ಹಣವನ್ನು ನಗರ ಭೂಸಾರಿಗೆ ಉಪಕರ ಎಂದು ವಸೂಲಿ ಮಾಡಲು ತೀರ್ಮಾನಿಸಿದೆ.

BBMP Ready To Impose 2 Percent Transport Tax

ನಗರ ಭೂ ಸಾರಿಗೆ ಉಪಕರ ಈ ಹಿಂದೆ ಜಾರಿಯಲ್ಲಿತ್ತು. ಆಸ್ತಿ ಮಾಲೀಕರಿಗೆ ಹೊರೆಯಾಗುವ ದೃಷ್ಟಿಯಿಂದ ಆದೇಶ ಹಿಂಪಡೆಯುವಂತೆ 2014ರಲ್ಲಿಯೇ ಕೌನ್ಸಿಲ್ ನಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಲಾಗಿತ್ತು.

ಆದರೆ, ಬಿಬಿಎಂಪಿ ನಿರ್ಣಯವನ್ನು ಪರಿಗಣಿಸಲು ಬರುವುದಿಲ್ಲ ಎಂದು ತಿಳಿಸಿರುವ ಸರ್ಕಾರ ಉಪಕರ ವಸೂಲಿಗೆ ಚಿಂತನೆ ನಡೆಸಿದೆ. ಉಪಕರ ವಸೂಲಿ ಮಾಡದ ಹಿನ್ನೆಲೆಯಲ್ಲಿ ರಾಜಸ್ವ ನಷ್ಟವಾಗಿದೆ ಎಂದು ಲೆಕ್ಕ ಪರಿಶೋಧನೆ ವೇಳೆ ಆಕ್ಷೇಪಿಸಲಾಗಿತ್ತು. ಈ ಹಿಂದೆ ಆದೇಶದಂತೆ 2013ರಿಂದಲೇ ಶೇ.2ರಷ್ಟು ಹೆಚ್ಚುವರಿ ತೆರಿಗೆ ವಸೂಲಿ ಮಾಡಬೇಕಿತ್ತು ಈ ಚಿಂತನೆ ಕುರಿತು ಕೌನ್ಸಿಲ್ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.

ನಗರ ಭೂಸಾರಿಗೆ ವ್ಯವಸ್ಥೆ ಉತ್ತಮ ಪಡಿಸಲು ಬಿಬಿಎಂಪಿ ಹಣ ನೀಡಬೇಕೆಂದು ಕೆಲವು ದಿನಗಳ ಹಿಂದೆ ಸಾರಿಗೆ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಬೆಂಗಳೂರಿನ ಆಸ್ತಿ ಮಾಲೀಕರು ಇನ್ನುಮುಂದೆ ಹೆಚ್ಚುವರಿ ತೆರಿಗೆ ಪಾವತಿಸಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+