Free Nursery: ಬಿಬಿಎಂಪಿ ಪಬ್ಲಿಕ್ ಶಾಲೆಗಳಲ್ಲಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ: ಏನೆಲ್ಲಾ ದಾಖಲೆಗಳು ಬೇಕು?

ಬೆಂಗಳೂರು, ಮಾರ್ಚ್ 07: ಬೆಂಗಳೂರಿನ ನಾಗರಿಕರು ತಮ್ಮ ಮಕ್ಕಳನ್ನು ಫೀ ನರ್ಸರಿ ಶಾಲೆಗೆ ಸೇರಿಸಲು ಇಚ್ಛಿಸಿದ್ದರೆ, ಅವರಿಗೆ ಸಿಹಿ ಸುದ್ದಿ ಇದೆ. ಬಿಬಿಎಂಪಿ ಶಿಕ್ಷಣ ವ್ಯಾಪ್ತಿಗೆ ಒಳಪಡುವ ಭಾರತೀಯ ವಿದ್ಯಾಭವನ ಮತ್ತು ಬಿಬಿಎಂಪಿ ಪಬ್ಲಿಕ್ ಶಾಲೆಯ ಜಂಟಿ ಸಹಯೋಗದಲ್ಲಿ ನಡೆಯುತ್ತಿರುವ ಫ್ರೀ ನರ್ಸರಿ ತರಗತಿ (ಸಿ.ಬಿ.ಎಸ್.ಸಿ ಪಠ್ಯಕ್ರಮ) ಗೆ 2024-25ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನಗರದಲ್ಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಪಬ್ಲಿಕ್ ಸ್ಕೂಲ್, ನಂ. 215ನೇ ಮುಖ್ಯ ರಸ್ತೆ ಕ್ರಾಂತಿಕವಿ ಸರ್ವಜ್ಞ ರಸ್ತೆ, ಶ್ರೀರಾಮಪುರ, ಬೆಂಗಳೂರು-21 ಈ ವಿದ್ಯಾಸಂಸ್ಥೆಯಲ್ಲಿ ಫ್ರೀ ನರ್ಸರಿ ತರಗತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಅರ್ಜಿ ಸಲ್ಲಿಕೆಯು ಮಾರ್ಚ್ 11ರಿಂದ 25ರವರೆಗೆ ಅರ್ಜಿಗಳನ್ನು ವಿತರಿಸಲಾಗುವುದು ಎಂದು ತಿಳಿಸಲಾಗಿದೆ.

BBMP Public School Invites Applications for Free Nursery Admission

ಮಕ್ಕಳ ಪೋಷಕರು ಅರ್ಜಿ ನಮೂನೆಗಳನ್ನು ಸಲ್ಲಿಸಲು ಮಾರ್ಚ್ 26 ರಿಂದ ಏಪ್ರಿಲ್ 10ರವರೆಗೆ ಅವಕಾಶ ನೀಡಲಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು ಹಿರಿಯ ಸಹಾಯಕ ನಿರ್ದೇಶಕರ (ಶಿಕ್ಷಣ) 1ನೇ ಮಹಡಿಯ ಅನೆಕ್ಸ್- 3 ಕಟ್ಟಡ, ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಲ್ಲಿಸಬೇಕು. ಸಲ್ಲಿಕೆಯಾಗುವ ಅರ್ಜಿಗಳನ್ನು ನಂತರ ಮೇ 20 ರಂದು ಶೈಕ್ಷಣಿಕ ಆಡಳಿತ ಮಂಡಳಿ, ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ.

ಬೇಕಾದ ಅಗತ್ಯ ದಾಖಲೆಗಳು ಯಾವವು?

* ಮಗುವಿನ ಜನನ ಪ್ರಮಾಣ ಪತ್ರ

* ಮಗುವಿನ ಪಾಸ್ ಪೋರ್ಟ್ ಸೈಜ್ ಫೋಟೋ - 5 ಸಂಖ್ಯೆ

* ಮಗುವಿನ ಜೊತೆಗಿರುವ ತಂದೆ ತಾಯಿಯ ಭಾವಚಿತ್ರ(ಕುಟುಂಬ ಭಾವ ಚಿತ್ರ)2B Size

* ಆದಾಯ ಪ್ರಮಾಣ ಪತ್ರ

* ತಂದೆ / ತಾಯಿಯ ಆಧಾರ್ ಕಾರ್ಡ್ ಜೆರಾಕ್ಸ್

* ಮಗುವಿನ ಆಧಾರ್ ಕಾರ್ಡ್ ಜೆರಾಕ್ಸ್

* ಜಾತಿ ಪ್ರಮಾಣ ಪತ್ರ

* ತಂದೆ / ತಾಯಿಯ ಖಾಯಂ ವಿಳಾಸವಿರುವ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿ(ಭಾರತೀಯ ವಿದ್ಯಾಭವನ

ಶಾಲೆಗೆ 3 ಕಿ.ಲೋ. ಸುತ್ತಮುತ್ತಲಿನ ಅಂತರದಲ್ಲಿ ವಾಸವಾಗಿರಬೇಕು.)

* ಮಗುವಿನ ವೈಧ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು(ಎತ್ತರ, ತೂಕ, ರಕ್ತದ ಗುಂಪು)

BBMP Public School Invites Applications for Free Nursery Admission

ವಿಶೇಷ ಸೂಚನೆ

ಅರ್ಜಿ ಸಲ್ಲಿಸುವ ಪೋಷಕರು ತಮ್ಮ ಅರ್ಜಿ ಪರಿಶೀಲನೆಯ ದಿನಾಂಕ ಮೇ 20 ಮಗುವಿನ ಜೊತೆಗೆ ಅಗತ್ಯ ಎಲ್ಲ ಮೂಲ ದಾಖಲೆಗಳನ್ನು ತರುವುದು ಕಡ್ಡಾಯ ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+