ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತಿವರ್ಷ ಶೇ.5 ತ್ಯಾಜ್ಯ ಸೆಸ್ ಹೆಚ್ಚಳಕ್ಕೆ ಬಿಬಿಎಂಪಿ ಸಿದ್ಧತೆ

|
Google Oneindia Kannada News

ಬೆಂಗಳೂರು, ಆಗಸ್ಟ್‌ 6: ಘನತ್ಯಾಜ್ಯ ನಿರ್ವಹಣಾ ಕರಡು ನೀತಿ ಸಿದ್ಧಪಡಿಸಲಾಗಿದ್ದು, ತ್ಯಾಜ್ಯ ಉಪಕರವನ್ನು ಪ್ರತಿ ವರ್ಷ ಶೇ.5ರಷ್ಟು ಹೆಚ್ಚಳ ಮಾಡಲು ಬಿಬಿಎಂಪಿ ಸಿದ್ಧವಾಗಿದೆ.

ನಿತ್ಯ 4 ಸಾವಿರ ಟನ್​ಗೂ ಹೆಚ್ಚಿನ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಅದರ ನಿರ್ವಹಣೆಗಾಗಿ 7 ಪ್ರತ್ಯೇಕ ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ. ಮಿಶ್ರತ್ಯಾಜ್ಯ ವಿಲೇವಾರಿಗಾಗಿ ಕ್ವಾರಿ ನಿಗದಿ ಮಾಡಲಾಗಿದೆ. ಹಾಗೆಯೇ, ಕಸ ಸಮಸ್ಯೆ ನಿರ್ವಹಣೆಗಾಗಿ ವಾರ್ಷಿಕ 1 ಸಾವಿರ ಕೋಟಿ ರೂ. ವ್ಯಯಿಸಲಾಗುತ್ತಿದೆ.

ಬಿಬಿಎಂಪಿ ಬಜೆಟ್‌ಗೆ ತಡೆ ನೀಡಿದ ಸಿಎಂ ಯಡಿಯೂರಪ್ಪ!ಬಿಬಿಎಂಪಿ ಬಜೆಟ್‌ಗೆ ತಡೆ ನೀಡಿದ ಸಿಎಂ ಯಡಿಯೂರಪ್ಪ!

ನೀತಿಯಲ್ಲಿ ಮೊದಲನೆಯದಾಗಿ ಸಾರ್ವಜನಿಕರ ಜಾಗೃತಿ ಬಗ್ಗೆ ತಿಳಿಸಲಾಗಿದೆ. ಹಸಿ, ಒಣ, ಮೆಡಿಕಲ್ ಸೇರಿ ಎಲ್ಲ ಬಗೆಯ ತ್ಯಾಜ್ಯವನ್ನು ಸಂಸ್ಕರಿಸುವ ಮತ್ತು ಬಿಬಿಎಂಪಿಗೆ ನೀಡುವ ವಿಧಾನವನ್ನು ತಿಳಿಸಲಾಗಿದೆ.

BBMP Preparing For 5 Per cent Waste Cess Increase Every Year

ಅಂತೆಯೇ ತ್ಯಾಜ್ಯ ವಿಲೇವಾರಿಗೆ ಬಿಬಿಎಂಪಿ ವಾರ್ಷಿಕ 1 ಸಾವಿರ ಕೋಟಿ ರೂ. ವ್ಯಯಿಸುತ್ತಿದೆ. ಸಾರ್ವಜನಿಕರಿಂದ ಕೇವಲ 40ರಿಂದ 42 ಕೋಟಿ ರೂ. ಉಪಕರ ಸಂಗ್ರಹವಾಗುತ್ತಿದೆ. ಹೀಗಾಗಿ ಪ್ರತಿ ವರ್ಷ ಆಸ್ತಿ ಮಾಲೀಕರ ತೆರಿಗೆ ಮೊತ್ತದ ಶೇ. 5 ಉಪಕರ ಹೆಚ್ಚಿಸುವ ಕುರಿತು ಪ್ರಸ್ತಾಪಿಸಲಾಗಿದೆ. ಅದಕ್ಕೆ ಬಿಬಿಎಂಪಿ ಕೌನ್ಸಿಲ್​ನಲ್ಲೂ ಅನುಮೋದನೆ ಪಡೆಯುವ ಅವಶ್ಯಕತೆಯಿಲ್ಲ ಎಂದು ತಿಳಿಸಲಾಗಿದೆ.

ಕರಡು ನೀತಿಯಲ್ಲಿ ಪ್ರಮುಖವಾಗಿ 1 ಸಾವಿರ ಚ. ಅಡಿವರೆಗಿನ ವಿಸ್ತೀರ್ಣದ ವಸತಿ ಕಟ್ಟಡಕ್ಕೆ ಪ್ರತಿ ತಿಂಗಳು 30 ರೂ. ಮತ್ತು ಗರಿಷ್ಠ 5 ಸಾವಿರ ಚ. ಅಡಿವರೆಗಿನ ವಸತಿ ಕಟ್ಟಡಗಳಿಗೆ ಆಯಾ ಕಟ್ಟಡಗಳ ವಿಸ್ತೀರ್ಣಕ್ಕನುಗುಣವಾಗಿ 200 ರೂ.ವರೆಗೆ ಮಾಸಿಕ ಉಪ ಕರ ನಿಗದಿ ಮಾಡಲಾಗಿದೆ.

ಅದೇ ರೀತಿ ಕೈಗಾರಿಕಾ ಕಟ್ಟಡಗಳಿಗೆ 1 ಸಾವಿರ ಚ.ಅಡಿವರೆಗೆ 100 ರೂ. ಮತ್ತು ಅದಕ್ಕಿಂತ ಮೇಲ್ಪಟ್ಟ ಕಟ್ಟಡಗಳಿಗೆ ಗರಿಷ್ಠ 300 ರೂ.ವರೆಗೆ ಮಾಸಿಕ ಉಪ ಕರ ವಸೂಲಿ ಮಾಡಲಾಗುತ್ತದೆ.
ಹೋಟೆಲ್, ಕಲ್ಯಾಣಮಂಟಪ, ಶಾಪಿಂಗ್ ಮಾಲ್ ಸೇರಿ ಬೃಹತ್ ತ್ಯಾಜ್ಯ ಉತ್ಪಾದಕ ಸಂಸ್ಥೆಗಳಲ್ಲಿ 10 ಸಾವಿರ ಚ. ಅಡಿವರೆಗೆ 300 ರೂ. ಮತ್ತು 50 ಸಾವಿರ ಚ.ಅಡಿವರೆಗಿನ ಕಟ್ಟಡಗಳಿಗೆ 600 ರೂ.ವರೆಗೆ ಉಪಕರ ನಿಗದಿಪಡಿಸಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು, ಉಗುಳುವುದು, ಮಲ- ಮೂತ್ರ ವಿಸರ್ಜನೆ ಮೊದಲ ಬಾರಿ 500 ರೂ., ನಂತರ 1 ಸಾವಿರ ರೂ. ತ್ಯಾಜ್ಯ ವಿಂಗಡಿಸದೆ
ತ್ಯಾಜ್ಯ ವಿಂಗಡಿಸದೆ ವಿಲೇವಾರಿಗೆ ನೀಡುವ ಸಣ್ಣ ವಾಣಿಜ್ಯ ಮಳಿಗೆಗಳಿಗೆ: ಮೊದಲ ಬಾರಿ 1 ಸಾವಿರ ರೂ., ನಂತರ 2,500 ರೂ.; ಬೃಹತ್ ವಾಣಿಜ್ಯ ಮಳಿಗೆಗಳಿಗೆ: ಮೊದಲ ಬಾರಿ 2 ಸಾವಿರ ರೂ., ನಂತರ 5 ಸಾವಿರ ರೂ.

ಬೀದಿ ಬದಿ ವ್ಯಾಪಾರಿಗಳಿಗೂ ಮಾಸಿಕ ಗರಿಷ್ಠ 50 ರೂ.ವರೆಗೆ ಕರ ವಿಧಿಸುವ ಪ್ರಸ್ತಾಪ ಮಾಡಲಾಗಿದೆ. ಮೊದಲ ಸಲ 5 ಸಾವಿರ ರೂ., ನಂತರ 10 ಸಾವಿರ ರೂ. ತ್ಯಾಜ್ಯ ಸುಡುವುದು, ಎಲ್ಲೆಂದರಲ್ಲಿ ಎಸೆಯುವ ಸಾರ್ವಜನಿಕರಿಗೆ 5 ಸಾವಿರ ರೂ.; ವಾಣಿಜ್ಯ ಉದ್ದಿಮೆದಾರರಿಗೆ 25 ಸಾವಿರ ರೂ. ಮಾಂಸ ಮಾರಾಟ ಮಳಿಗೆ, ಕಸಾಯಿಖಾನೆಗಳಲ್ಲಿ ತ್ಯಾಜ್ಯ ವಿಂಗಡಿಸದಿದ್ದರೆ ಮೊದಲ ಬಾರಿ 1 ಸಾವಿರ ರೂ., ನಂತರ 2 ಸಾವಿರ ರೂ.

ನಿವೇಶನಗಳಿಗೆ ಪ್ರತಿ ಚದರ ಅಡಿಗೆ ಮಾಸಿಕ 20 ಪೈಸೆಯಂತೆ ಉಪಕರ ವಸೂಲಿ ಮಾಡಲು ನಿರ್ಧರಿಸಲಾಗಿದೆ. ಜತೆಗೆ ಬಿಬಿಎಂಪಿ ವ್ಯಾಪ್ತಿಯ ಹೋಟೆಲ್, ಸಮುದಾಯ ಭವನ ಸೇರಿದಂತೆ ಸಾರ್ವಜನಿಕ ಮತ್ತು ಖಾಸಗಿ ಕಟ್ಟಡ, ಖಾಲಿ ನಿವೇಶನಗಳಲ್ಲಿ ಕನಿಷ್ಠ 1 ವಾರ ಅಥವಾ ಅದಕ್ಕೂ ಹೆಚ್ಚು ದಿನ ನಡೆಯುವ ವಸ್ತುಪ್ರದರ್ಶನ, ಮನರಂಜನಾ ಕಾರ್ಯಕ್ರಮ, ವಿವಾಹ ಸಮಾರಂಭಗಳಲ್ಲಿ ಉತ್ಪತ್ತಿ ಯಾಗುವ ತ್ಯಾಜ್ಯಕ್ಕೂ ಉಪಕರ ನೀಡಬೇಕಿದೆ.

English summary
The Solid Waste Management Policy is being prepared by the BBMP to increase waste utilization by 5 per year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X