Bengaluru-Tumakuru Highway: ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದಟ್ಟಣೆ ನಿಯಂತ್ರಣಕ್ಕೆ ಬಿಬಿಎಂಪಿ ಪ್ಲಾನ್ ಏನು?

Bengaluru-Tumakuru Highway: ಬೆಂಗಳೂರು ಅಂದರೆ ಮೊದಲಿಗೆ ನೆನಪಿಗೆ ಬರುವುದೇ ಟ್ರಾಫಿಕ್‌ ನಗರ ಎಂದು. ಇನ್ನು ಬೆಂಗಳೂರು -ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿನಿತ್ಯವೂ ಕೂಡ ಟ್ರಾಫಿಕ್‌ ಜಂಜಾಟದಿಂದ ವಾಹನ ಸವಾರರು ಬೇಸತ್ತು ಹೋಗಿದ್ದಾರೆ. ಇದಕ್ಕೆ ನಿಯಂತ್ರಣ ಹಾಕಲು ಬಿಬಿಎಂ ಪ್ಲಾನ್ ಹಾಕಿಕೊಂಡಿದೆ. ಹಾಗಾದರೆ ಏನಲ್ಲ ಯೋಜನೆಗಳನ್ನು ಹಾಕಿಕೊಂಡಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಬೆಂಗಳೂರು - ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನದಿಂದ ದಿನಕ್ಕೆ ವಾಹನ ಸಂಚಾರ ದಟ್ಟಣೆ ಹೆಚ್ಚಾಗುತ್ತಲೇ ಇದೆ. ಇದೀಗ ಬಿಬಿಎಂಪಿ ಟ್ರಾಫಿಕ್ ಇದನ್ನು ನಿಯಂತ್ರಣ ಮಾಡುವದಕ್ಕೆ ಮುಂದಾಗಿದ್ದು, ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಆದ್ದರಿಮದ ಟ್ರಾಫಿಕ್ ಜಾಮ್ ಸರ್ವೇಯನ್ನು ಕೂಡ ನಡೆಸಿದೆ. ಒಂದು ಸ್ಟೇಜ್‌ನಿಂದ ಮತ್ತೊಂದು ಸ್ಟೇಜ್‌ಗೆ ತಲುಪಲು ಎಷ್ಟು ಸಮಯ ಬೇಕಾಗುತ್ತದೆ ಎಂದ ಸರ್ವೆ ನಡೆಸಿದೆ.

BBMP Plans to Control Traffic on Bengaluru-Tumakuru National Highway

ಇದೀಗ ಬಿಬಿಎಂಪಿ ನಡೆಸಿರುವ ಸರ್ವೇ ಪ್ರಕಾರ, ಬೆಂಗಳೂರು -ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಯಶವಂತಪುರದಿಂದ 8ನೇ ಮೈಲಿ ನೈಸ್ ರಸ್ತೆ ತಲುಪಲು ದಟ್ಟಣೆಯಿಂದ ಹೆಚ್ಚು ಸಮಯ ಬೇಕಾಗುತ್ತಿದೆ ಎಂದು ತಿಳಿದುಬಂದಿದೆ. ಇನ್ನೂ ಎಲ್ಲೆಲ್ಲ ಎಷ್ಟು ಕಿಲೋ ಮೀಟರ್‌, ಎಷ್ಟು ಗಂಟೆ ಟ್ರಾಫಿಕ್‌ ಜಾಮ್‌ ಆಗುತ್ತದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ಕಾಣಬಹುದಾಗಿದೆ.

1. ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣ- ಯಶವಂತಪುರ ಸ್ಕೈವಾಕ್

ಅಂತರ - 0.8 ಕಿಲೋ ಮೀಟರ್‌ ಇದೆ. ಟ್ರಾಫಿಕ್ ಇದ್ದರೆ ಸಮಯ 197 ಸೆಕೆಂಡ್ ಬೇಕಾಗುತ್ತದೆ. ಟ್ರಾಫಿಕ್ ಇಲ್ಲದಿದ್ದರೆ 117 ಸೆಕೆಂಡ್ ಆಗುತ್ತದೆ. ಒಟ್ಟಿನಲ್ಲಿ 80 ಸೆಕೆಂಡ್ ವಿಳಂಬವಾಗಲಿದೆ.

2. ಯಶವಂತಪುರ ಸ್ಕೈವಾಕ್-ಎಂಇಐ ಜಂಕ್ಷನ್

* ಅಂತರ - 1.2 ಕಿಲೋ ಮೀಟರ್
* ಟ್ರಾಫಿಕ್ ಇದ್ದರೆ - 287 ಸೆಕೆಂಡ್
* ಟ್ರಾಫಿಕ್ ಇಲ್ಲದಿದ್ದರೆ- 224 ಸೆಕೆಂಡ್
* ವಿಳಂಬ - 63 ಸೆಕೆಂಡ್

3. ಎಂಇಐ ಜಂಕ್ಷನ್-ಗೊರಗುಂಟೆ ಪಾಳ್ಯ

* ಅಂತರ - 0.6 ಕಿಲೋ ಮೀಟರ್‌
* ಟ್ರಾಫಿಕ್ ಇದ್ದರೆ - 128 ಸೆಕೆಂಡ್
* ಟ್ರಾಫಿಕ್ ಇಲ್ಲದಿದ್ದರೆ- 107 ಸೆಕೆಂಡ್
* ವಿಳಂಬ - 21 ಸೆಕೆಂಡ್

4. ಗೊರಗುಂಟೆ ಪಾಳ್ಯ-ಓಆರ್‌ಆರ್ ಜಂಕ್ಷನ್

* ಅಂತರ - 0.5 ಕಿಲೋ ಮೀಟರ್
* ಟ್ರಾಫಿಕ್ ಇದ್ದರೆ - 120 ಸೆಕೆಂಡ್
* ಟ್ರಾಫಿಕ್ ಇಲ್ಲದಿದ್ದರೆ- 69 ಸೆಕೆಂಡ್

5. ಎಸ್‌ಆರ್‌ಎಸ್ ಜಂಕ್ಷನ್-ಪೀಣ್ಯ ಜಂಕ್ಷನ್ ಪಿಲ್ಲರ್

* ಅಂತರ - 1 ಕಿಲೋ ಮೀಟರ್
* ಟ್ರಾಫಿಕ್ ಇದ್ದರೆ- 112 ಸೆಕೆಂಡ್
* ಟ್ರಾಫಿಕ್ ಇಲ್ಲದಿದ್ದರೆ - 96 ಸೆಕೆಂಡ್
* ವಿಳಂಬ - 16 ಸೆಕೆಂಡ್

6. ಪೀಣ್ಯ ಜಂಕ್ಷನ್ - ಜಾಲಹಳ್ಳಿ

* ಅಂತರ - 0.5 ಕಿಲೋ ಮೀಟರ್
* ಟ್ರಾಫಿಕ್ ಇದ್ದರೆ- 65 ಸೆಕೆಂಡ್
* ಟ್ರಾಫಿಕ್ ಇಲ್ಲದಿದ್ದರೆ -55 ಸೆಕೆಂಡ್
* ವಿಳಂಬ - 10 ಸೆಕೆಂಡ್

7. ಜಾಲಹಳ್ಳಿ - ದಾಸರಹಳ್ಳಿ ಜಂಕ್ಷನ್

* ಅಂತರ - 0.8 ಕಿಲೋ ಮೀಟರ್
* ಟ್ರಾಫಿಕ್ ಇದ್ದರೆ- 143 ಸೆಕೆಂಡ್
* ಟ್ರಾಫಿಕ್ ಇಲ್ಲದಿದ್ದರೆ - 110 ಸೆಕೆಂಡ್
* ವಿಳಂಬ - 33 ಸೆಕೆಂಡ್

8. ದಾಸರಹಳ್ಳಿ ಜಂಕ್ಷನ್ ಟು ಎಂಟನೇ ಮೈಲಿ

* ಅಂತರ - 0.6 ಕಿಲೋ ಮೀಟರ್
* ಟ್ರಾಫಿಕ್ ಇದ್ದರೆ- 88 ಸೆಕೆಂಡ್
* ಟ್ರಾಫಿಕ್ ಇಲ್ಲದಿದ್ದರೆ- 47 ಸೆಕೆಂಡ್
* ವಿಳಂಬ - 41 ಸೆಕೆಂಡ್

9. 8ನೇ ಮೈಲಿ - ನೈಸ್ ರೋಡ್

* ಅಂತರ - 4 ಕಿಲೋ ಮೀಟರ್
* ಟ್ರಾಫಿಕ್ ಇದ್ದರೆ- 312 ಸೆಕೆಂಡ್
* ಟ್ರಾಫಿಕ್ ಇಲ್ಲದಿದ್ದರೆ- 290 ಸೆಕೆಂಡ್
* ವಿಳಂಬ - 22 ಸೆಕೆಂಡ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+