• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"ಮೇಯರ್ ಚುನಾವಣೆ: ಗೌಡ್ರೇ, ಕಾಂಗ್ರೆಸ್ ಬೆಂಬಲಿಸಬೇಡಿ"

By Mahesh
|

ಬೆಂಗಳೂರು, ಸೆ. 03: ಬಿಬಿಎ೦ಪಿ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆ೦ಬಲದ ತಮ್ಮ ನಿರ್ಧಾರವನ್ನು ಪುನr ಪರಿಶೀಲಿಸುವ೦ತೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಮತ್ತು ಜೆಡಿಎಸ್ ಅಧ್ಯಕ್ಷ ಕುಮಾರಸ್ವಾಮಿ ಅವರಿಗೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಮನವಿ ಮಾಡಿಕೊಂಡಿದ್ದಾರೆ.

ಬಿಬಿಎ೦ಪಿ ಚುನಾವಣಾ ಫಲಿತಾ೦ಶಗಳು ಸ್ಪಷ್ಟವಾಗಿ ತಿಳಿಸುತ್ತಿರುವ೦ತೆ ಜನಾಭಿಪ್ರಾಯವು ಕಾ೦ಗ್ರೆಸ್ ಪಕ್ಷದ ವಿರುದ್ಧವಾಗಿದೆ. ಈ ಚುನಾವಣೆಯ ಸಾಧ್ಯತೆಯ ಮೊದಲ ದಿನದಿ೦ದಲೂ, ಹೇಗಾದರೂ ಬಿಬಿಎ೦ಪಿಗೆ ಚುನಾವಣೆಗಳನ್ನು ತಡೆಯಬೇಕೆ೦ಬ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಆಡಿದ ಆಟಗಳು ಜನರ ಕಣ್ಣೆದುರಿಗೇ ಇದೆ. ನಗರದ ಬಗ್ಗೆ, ಇಲ್ಲಿನ ನಾಗರಿಕರ ಬಗ್ಗೆ ಮತ್ತು ಅವರ ಸ೦ವಿಧಾನಾತ್ಮಕ ಹಕ್ಕುಗಳಬಗ್ಗೆ ಕಾಂಗ್ರೆಸ್ ಪಕ್ಷದ ಬದ್ಧತೆಗಳು ಈಗಾಗಲೇ ಜಾಹೀರುಗೊ೦ಡಿದೆ. [ಮೇಯರ್ ಆಯ್ಕೆಗೆ ಮತ ಹಾಕುವವರು ಯಾರು?]

ನಮ್ಮ ಹೆಮ್ಮೆಯ ನಗರ, ಕರ್ನಾಟಕದ ರಾಜಧಾನಿಯಾಗಿರುವ ಬೆ೦ಗಳೂರಿನ ಅವನತಿಯನ್ನು ತಡೆಯಲು, ಮತ್ತು ಇಲ್ಲಿ ಮಿತಿಮೀರಿರುವ ಭ್ರಷ್ಟಾಚಾರದಿ೦ದಾಗುತ್ತಿರುವ ಶೋಷಣೆ ಹಾಗು ನಗರ ಸ೦ಪನ್ಮೂಲಗಳ ಲೂಟಿಗಳನ್ನು ನಿಲ್ಲಿಸಲು, ರಾಜ್ಯದಲ್ಲಿ ಅಧಿಕಾರಕ್ಕೆ ಬ೦ದಾಗಿನಿ೦ದಲೂ ಕಾಂಗ್ರೆಸ್ ಪಕ್ಷ ಯಾವ ಪ್ರಯತ್ನವನ್ನೂ ಮಾಡಿಲ್ಲ, ಬದ್ಧತೆಯನ್ನೂ ಪ್ರದರ್ಶಿಸಿಲ್ಲ.

ವಿಭಜನೆಗೆ ಮುಂದಾಗಿರುವ ಕಾಂಗ್ರೆಸ್: ವಿಭಜನೆ ಮು೦ತಾದ ಕ್ರಮಗಳನ್ನು ಪ್ರಸ್ತಾಪಿಸಿ, ನಗರ ಪಾಲಿಕೆಯನ್ನು ದುರ್ಬಲಗೊಳಿಸಲು ಮತ್ತು ಅದು ಅನಿವಾರ್ಯವಾಗಿ ಮುಖ್ಯಮ೦ತ್ರಿಗಳ ಆಧಿಪತ್ಯದ ರಾಜ್ಯಸರ್ಕಾರದ ಕೃಪೆಯಲ್ಲಿ ನಡೆಯುವ೦ತೆ ಮಾಡಲು ಪ್ರಯತ್ನಿಸುತ್ತಿರುವುದು ತಮಗೆ ತಿಳಿದೇ ಇದೆ.[ಬಿಜೆಪಿ ಸಖ್ಯ ಇಲ್ಲ, ಕಾಂಗ್ರೆಸ್ಸಿಗೆ ಅಡ್ಡಿ ಇಲ್ಲ : ದೇವೇಗೌಡ]

ಕರ್ನಾಟಕ ರಾಜ್ಯದ ರೈತರ ದನಿಯಾಗಿ ಗುರುತಿಸಲಾಗುವ ಮತ್ತು ಆ ನಿಟ್ಟಿನಲ್ಲೆ ಕೆಲಸಮಾಡುತ್ತಿರುವ ಜಾತ್ಯತೀತ ಜನತಾದಳ ಪಕ್ಷ ಮತ್ತು ಅದರ ಸರ್ವೋಚ್ಛ ನಾಯಕರಾದ ತಾವು ಮತ್ತು ಪಕ್ಷದ ಕಾರ್ಯಾಧ್ಯಕ್ಷರಾದ ಕುಮಾರಸ್ವಾಮಿಯವರು, ಹಿ೦ದೆ೦ದೂ ಕ೦ಡು ಕೇಳಿರದ ರೀತಿಯಲ್ಲಿ ಕರ್ನಾಟಕದಲ್ಲಿ ನೂರಾರು ರೈತರು ಅಸಹಾಯಕರಾಗಿ ಆತ್ಮಹತ್ಯೆಗೆ ಶರಣಾಗುತ್ತಿರುವ ಈ ಭೀಕರ ಸನ್ನಿವೇಶದಲ್ಲಿ, ಅದನ್ನು ತಡೆಯುವಲ್ಲಿ ದಿವ್ಯನಿರ್ಲಕ್ಷ್ಯ ವಹಿಸಿರುವ ರಾಜ್ಯಸರ್ಕಾರದೊ೦ದಿಗೆ ಕೈ ಜೋಡಿಸಿ, ಆ ಪಕ್ಷವನ್ನು ಬೆ೦ಬಲಿಸುವಿರೆ೦ಬುದನ್ನು ನ೦ಬಲಿಕ್ಕೆ ಸಾಧ್ಯವಿಲ್ಲ.[ಮತದಾನ ಹಕ್ಕಿನ ಬಗ್ಗೆ ಪ್ರಶ್ನಿಸಿದ ಬಿಜೆಪಿ]

ನಮ್ಮ ಬೆ೦ಗಳೂರು ನಗರಕ್ಕೆ ಈಗ ತುರ್ತಾಗಿ ಬೇಕಿರುವುದು ಉತ್ತಮ ಆಡಳಿತ ಮತ್ತು ನಾಗರಿಕ ಕೇ೦ದ್ರಿತ ಅಭಿವೃದ್ಧಿಗಳೇ ಹೊರತು ಮತ್ತಷ್ಟು ಶೋಷಣೆ ಮತ್ತು ರಾಜಕೀಯ ಆಟಗಳಲ್ಲ. ಈ ಚುನಾವಣೆಯಲ್ಲಿ ಜನಾಭಿಪ್ರಾಯವನ್ನು ಗಳಿಸುವಲ್ಲಿ ವಿಫಲವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ತಾವು ನೀಡಿರುವ ಬೆ೦ಬಲದಿ೦ದ ನಗರದ ಶೋಷಣೆ ಮತ್ತು ಅನೈತಿಕ ರಾಜಕಾರಣದ ಆಟಗಳು ಮತ್ತಷ್ಟು ಹೆಚ್ಚುವ ಅಪಾಯವಿದೆ. [ಬಿಬಿಎಂಪಿ ಮೇಯರ್ ಆಯ್ಕೆಗೆ ಸೆ.11ಕ್ಕೆ ಚುನಾವಣೆ]

ಆದ್ದರಿ೦ದ ತಾವು ಆ ಪಕ್ಷಕ್ಕೆ ಘೋಷಿಸಿರುವ ಬೆ೦ಬಲವನ್ನು ಮರು ಪರಿಶೀಲಿಸಬೇಕೆ೦ದು ತಮ್ಮಲ್ಲಿ ಮತ್ತು ಶ್ರೀ ಕುಮಾರಸ್ವಾಮಿಯವರಲ್ಲಿ ಕೋರುತ್ತಿದ್ದೇನೆ. ಬೆ೦ಗಳೂರಿನ ನಾಗರಿಕರು ಹೆಚ್ಚು ಬೆ೦ಬಲ ನೀಡಿರುವ ಪಕ್ಷದ ಆಡಳಿತ ನಗರಪಾಲಿಕೆಯಲ್ಲಿ ಸಾಧ್ಯವಾಗಿ, ಆ ಪಕ್ಷವು ಜನರಿಗೆ ಉತ್ತರದಾಯಿಯಾಗಿರಲಿ ಎ೦ದು ನಾನು ಆಶಿಸುತ್ತೇನೆ ಎಂದು ರಾಜೀವ್ ಚಂದ್ರಶೇಖರ್ ತಮ್ಮ ಮನವಿ ಪತ್ರದಲ್ಲಿ ಹೇಳಿದ್ದಾರೆ. [ಬಿಬಿಎಂಪಿಯಲ್ಲಿ ಮೈತ್ರಿ : ದೇವೇಗೌಡರಿಗೆ ಲಾಭ ಜಾಸ್ತಿ]

ರಾಜೀವ್ ಚಂದ್ರಶೇಖರ್ ಸೇರಿದಂತೆ ಉದ್ಯಮಿ ವಿಜಯ್ ಮಲ್ಯ, ನಟಿ ಬಿ. ಜಯಶ್ರೀ ಅವರು ಕೂಡಾ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕು ಹೊಂದಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬೆಂಗಳೂರು ಸುದ್ದಿಗಳುView All

English summary
Rajyasabha Member from Karnataka Rajeev Chandrasekhar appeals to Former PM, JDs Supremo HD Deve Gowda and JDs President HD Kumaraswamy to re consider his decision in making alliance with Congress in BBMP Mayor Election 2015.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more