ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ: ಮೇಯರ್ ಆಯ್ಕೆಗೆ ಮತ ಹಾಕುವವರು ಯಾರು?

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 28: ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ಫಲಿತಾಂಶ ಹೊರ ಬಂದ ಮೇಲೆ ಪ್ರಮುಖ ಮೂರು ಪಕ್ಷಗಳು ಮೇಯರ್, ಉಪ ಮೇಯರ್ ಕುರ್ಚಿಗಾಗಿ ಬೃಹನ್ನಾಟಕ ಶುರು ಮಾಡಿವೆ. ಈ ನಾಟಕದ ಅಂತ್ಯ ಏನಾಗುವುದೋ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಈ ನಡುವೆ ಮೇಯರ್ ಹಾಗೂ ಉಪ ಮೇಯರ್ ಅವರನ್ನು ಯಾರು ಆಯ್ಕೆ ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿ ಸಿಗಲಿದೆ.

ಬೆಂಗಳೂರಿನ ಐವರು ಲೋಕಸಭಾ ಸದಸ್ಯರು ಹಾಗೂ 28 ಜನ ಶಾಸಕರ ಜೊತೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆ ಹೊಂದಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಪಡೆದುಕೊಂಡಿರುವ ರಾಜ್ಯಸಭಾ ಸದಸ್ಯರು (ಉದಾ : ವೆಂಕಯ್ಯ ನಾಯ್ಡು, ರಾಜೀವ್ ಚಂದ್ರಶೇಖರ್) ಹಾಗೂ ವಿಧಾನಪರಿಷತ್ ಸದಸ್ಯರು ಮತದಾನ ಮಾಡುವ ಮೂಲಕ ಮೇಯರ್ ಅವರನ್ನು ಆಯ್ಕೆ ಮಾಡಲಿದ್ದಾರೆ.[ ಬಿಜೆಪಿಗೆ ಭರ್ಜರಿ ಜಯ, ಕಾಂಗ್ರೆಸ್ಸಿಗೆ ಮುಖಭಂಗ]

ಬಲಾಬಲ: ಬಿಜೆಪಿ 23, ಕಾಂಗ್ರೆಸ್ 22ಜನ ಪಾಲಿಕೇತರ ಸದಸ್ಯರನ್ನು ಹೊಂದಿದೆ. ಜೆಡಿಎಸ್ 7 ಜನ ಹಾಗೂ ಪಕ್ಷೇತರ ವಿಧಾನಪರಿಷತ್ ಸದಸ್ಯ (ಡಿಯು ಮಲ್ಲಿಕಾರ್ಜುನ) ಹಾಗೂ ರಾಜ್ಯಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್ ಮತ್ತು ವಿಜಯ್ ಮಲ್ಯ ಅವರು ಮತದಾನದ ಹಕ್ಕು ಹೊಂದಿದ್ದಾರೆ. ಮೇಯರ್ ಆಗಿ ಆಯ್ಕೆಯಾಗಲು 131 ಮತಗಳ ಅಗತ್ಯವಿದೆ.[ಬಿಬಿಎಂಪಿಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ]

 The Electoral college for BBMP Mayor Election 2015

ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ಮತ ಹಾಕುವವರು: [ಒಟ್ಟಾರೆ 260]

ಲೋಕಸಭೆ ಸದಸ್ಯರು:
ಬಿಜೆಪಿ
* ಅನಂತಕುಮಾರ್ (ಬೆಂಗಳೂರು ದಕ್ಷಿಣ)
* ಡಿ.ವಿ ಸದಾನಂದ ಗೌಡ (ಬೆಂಗಳೂರು ಉತ್ತರ)
* ಪಿ.ಸಿ ಮೋಹನ್ (ಬೆಂಗಳೂರು ಸೆಂಟ್ರಲ್)

ಕಾಂಗ್ರೆಸ್

* ಡಿ. ಕೆ ಸುರೇಶ್ (ಬೆಂಗಳೂರು ಗ್ರಾಮಾಂತರ)
* ವೀರಪ್ಪ ಮೊಯಿಲಿ (ಚಿಕ್ಕಬಳ್ಳಾಪುರ)

ರಾಜ್ಯ ಸಭಾ ಸದಸ್ಯರು [ಸಿದ್ದುಜೀಗೆ ಬಿಬಿಎಂಪಿ ನೆನಪಿಲ್ಲ!]
ಬಿಜೆಪಿ: ಎಮ್. ವೆಂಕಯ್ಯ ನಾಯ್ಡು
ಕಾಂಗ್ರೆಸ್ : ಬಿ.ಕೆ ಹರಿಪ್ರಸಾದ್, ರಾಜೀವ್ ಗೌಡ, ರೆಹಮಾನ್ ಖಾನ್
ಜೆಡಿಎಸ್: ಕುಪೇಂದ್ರ ರೆಡ್ಡಿ
ಪಕ್ಷೇತರರು: ವಿಜಯ್ ಮಲ್ಯ, ರಾಜೀವ್ ಚಂದ್ರಶೇಖರ್, ಬಿ. ಜಯಶ್ರೀ

ಶಾಸಕರು
ಬಿಜೆಪಿ : ಆರ್ ಅಶೋಕ್, ಎನ್ ಸುರೇಶ್ ಕುಮಾರ್, ಬಿ.ಎನ್ ವಿಜಯ್ ಕುಮಾರ್, ಸಿ.ಎನ್ ಅಶ್ವತ್ಥನಾರಾಯಣ, ಎಸ್. ಆರ್ ವಿಶ್ವನಾಥ್, ಎಚ್ ಮುನಿರಾಜು, ಎಸ್ ರಘು, ಸತೀಶ್ ರೆಡ್ಡಿ, ಆರ್ ಜಗದೀಶ್ ಕುಮಾರ್,ರವಿ ಸುಬ್ರಮಣ್ಯ, ಅರವಿಂದ್ ಲಿಂಬಾವಳಿ, ಎಂ ಕೃಷ್ಣಪ್ಪ.

ಕಾಂಗ್ರೆಸ್ : ರಾಮಲಿಂಗಾರೆಡ್ಡಿ, ಕೆ.ಜೆ ಜಾರ್ಜ್, ಆರ್ ರೋಷನ್ ಬೇಗ್, ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಬಿ.ಎ ಬಸವರಾಜು, ಎಚ್. ಟಿ ಸೋಮಶೇಖರ್, ಮುನಿರತ್ನ, ಎನ್.ಎ ಹ್ಯಾರಿಸ್, ಎಂ ಕೃಷ್ಣಪ್ಪ, ಪ್ರಿಯಕೃಷ್ಣ, ಆರ್ ವಿ ದೇವರಾಜ್, ಬಿ ಶಿವಣ್ಣ

ಜೆಡಿಎಸ್ : ಕೆ ಗೋಪಾಲಯ್ಯ, ಅಖಂಡ ಶ್ರೀನಿವಾಸಮೂರ್ತಿ, ಜಮೀರ್ ಅಹ್ಮದ್ ಖಾನ್

ವಿಧಾನ ಪರಿಷತ್ ಸದಸ್ಯರು
ಬಿಜೆಪಿ : ವಿ.ಸೋಮಣ್ಣ, ರಾಮಚಂದ್ರಗೌಡ, ವಿಮಲಾ ಗೌಡ, ಲೇಹರ್ ಸಿಂಘ್, ಬಿ.ಜೆ ಪುಟ್ಟಸ್ವಾಮಿ, ಅಶ್ವತ್ಥನಾರಾಯಣ.

ಕಾಂಗ್ರೆಸ್ : ಆರ್ ವಿ ವೆಂಕಟೇಶ್, ಬಿ.ಎ ಸುರೇಶ್, ದಯಾನಂದ, ಕೆ ಗೋವಿಂದ ರಾಜ್, ಎಂ.ಆರ್ ಸೀತಾರಾಂ

ಜೆಡಿಎಸ್ : ಪುಟ್ಟಣ್ಣ, ಟಿ ಎ ಶರವಣ, ಇ ಕೃಷ್ಣಪ್ಪ

ಪಕ್ಷೇತರ: ಡಿ. ಯು ಮಲ್ಲಿಕಾರ್ಜುನ (ಬಿಜೆಪಿ ಬೆಂಬಲಿತ)

ಬಿಬಿಎಂಪಿ ಫಲಿತಾಂಶ: ಬಿಜೆಪಿ 100; ಕಾಂಗ್ರೆಸ್ 76; ಜೆಡಿಎಸ್ 14; ಇತರೆ : 8
ಮೇಯರ್ ಆಯ್ಕೆಗೆ ಬೇಕಾದ ಸಂಖ್ಯೆ: 131
ಸೆ.11ರಂದು ಮೇಯರ್ ಚುನಾವಣೆ ನಡೆಯಲಿದೆ.

(ಒನ್ ಇಂಡಿಯಾ ಸುದ್ದಿ)

English summary
The Electoral college for BBMP Mayor Election 2015. Five Lok Sabha members and 28 MLAs and Rajyasabha Members and MLCs have voting power to chose Mayor and Deputy Mayor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X