Get Updates
Get notified of breaking news, exclusive insights, and must-see stories!

ಮೇಯರ್ ಚುನಾವಣೆ: ಮತದಾನ ಹಕ್ಕಿನ ಬಗ್ಗೆ ಪ್ರಶ್ನಿಸಿದ ಬಿಜೆಪಿ

ಬೆಂಗಳೂರು, ಸೆ.01: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೇಯರ್ ಚುನಾವಣೆಯಲ್ಲಿ ಶಾಸಕರು ಹಾಗೂ ಸಂಸದರಿಗೆ ಮತದಾನದ ಹಕ್ಕು ಏಕೆ ಬೇಕು ಎಂದು ಬಿಜೆಪಿ ಕರ್ನಾಟಕ ಪ್ರಶ್ನಿಸಿದೆ. ಈ ಬಗ್ಗೆ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.

ಬಿಬಿಎಂಪಿ ಮಹಾಪೌರರ ಆಯ್ಕೆ ಪ್ರಕ್ರಿಯೆಗಾಗಿ ನಡೆಯುವ ಚುನಾವಣೆಯಲ್ಲಿ ಶಾಸಕರು ಹಾಗೂ ಸಂಸದರಿಗೆ ಮತದಾನದ ಹಕ್ಕು ನೀಡಿರುವ ಬಗ್ಗೆ ಪ್ರಶ್ನಿಸಲು ಬಿಜೆಪಿ ಮುಂದಾಗಿದೆ ಎಂದು ಬಿಜೆಪಿ ಮೂಲಗಳು ಒನ್ ಇಂಡಿಯಾಕ್ಕೆ ತಿಳಿಸಿವೆ. [ಬಿಜೆಪಿಗೆ ಭರ್ಜರಿ ಜಯ, ಕಾಂಗ್ರೆಸ್ಸಿಗೆ ಮುಖಭಂಗ]

ಬಿಬಿಎಂಪಿಯಲ್ಲಿ ಮತದಾನದ ಹಕ್ಕು ಕೇವಲ ಚುನಾಯಿತ ಕಾರ್ಪೊರೇಟರ್ ಗಳಿಗೆ ನೀಡಿದರೆ ಸಾಕು. ಮತದಾನದ ಹಕ್ಕಿನ ಬಗ್ಗೆ ಸ್ಪಷ್ಟ ಚಿತ್ರಣ ಸಿಗಬೇಕು ಹೀಗಾಗಿ ಕರ್ನಾಟಕ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಲು ಬಿಜೆಪಿ ನಿರ್ಧರಿಸಿದೆ. [ಯಾರು ಯಾರು ವೋಟ್ ಮಾಡಲಿದ್ದಾರೆ?]

ಬೆಂಗಳೂರಿನ ಐವರು ಲೋಕಸಭಾ ಸದಸ್ಯರು ಹಾಗೂ 28 ಜನ ಶಾಸಕರ ಜೊತೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆ ಹೊಂದಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಪಡೆದುಕೊಂಡಿರುವ ರಾಜ್ಯಸಭಾ ಸದಸ್ಯರು (ಉದಾ : ವೆಂಕಯ್ಯ ನಾಯ್ಡು, ರಾಜೀವ್ ಚಂದ್ರಶೇಖರ್) ಹಾಗೂ ವಿಧಾನಪರಿಷತ್ ಸದಸ್ಯರು ಮತದಾನ ಮಾಡುವ ಮೂಲಕ ಮೇಯರ್ ಅವರನ್ನು ಆಯ್ಕೆ ಮಾಡಲಿದ್ದಾರೆ.

ಜನರು ನೀಡಿದ ತೀರ್ಪಿನಂತೆ ನಮಗೆ ಬಿಬಿಎಂಪಿ ಮೇಯರ್ ಸ್ಥಾನ ಪಡೆಯುವ ಎಲ್ಲಾ ಹಕ್ಕಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಮೇಯರ್ ಚುನಾವಣೆ ಸೆ.09ರ ನಂತರ ನಡೆಯುವ ಸಾಧ್ಯತೆ ಇದೆ. ಅಲ್ಲಿ ತನಕ ಈ ಅಂಕಿ ಸಂಖ್ಯೆಗಳ ಲೆಕ್ಕಾಚಾರ, ವ್ಯಾಪಾರ, ವ್ಯವಹಾರಗಳು ಬಿರುಸಿನಿಂದ ನಡೆಯಲಿದೆ.

ಹೊಸ ಮ್ಯಾಜಿಕ್ ನಂಬರ್ 131

ಹೊಸ ಮ್ಯಾಜಿಕ್ ನಂಬರ್ 131

ಮೇಯರ್ ಆಗಿ ಆಯ್ಕೆಯಾಗಲು 128 ಮತಗಳ ಅಗತ್ಯವಿತ್ತು. ಅದರೆ, ಶಾಸಕರು, ಕಾರ್ಪೊರೇಟರ್ ಗಳು, ಎಂ ಎಲ್ಸಿಗಳು, ಸಂಸದರು ಹೀಗೆ ಸಂಖ್ಯೆ 260 ಮುಟ್ಟುವುದರಿಂದ ಮೇಯರ್ ಆಯ್ಕೆಯಾಗಲು 131 ಸಂಖ್ಯೆ ಪಡೆದುಕೊಳ್ಳಬೇಕಾಗುತ್ತದೆ ಎಂದು ಬಿಬಿಎಂಪಿ ಕಚೇರಿ ಪ್ರಕಟಿಸಿದೆ.

ಮತದಾನದ ಹಕ್ಕು ಯಾರಿಗೆ ಇದೆ

ಮತದಾನದ ಹಕ್ಕು ಯಾರಿಗೆ ಇದೆ

ಬಿಜೆಪಿ 23, ಕಾಂಗ್ರೆಸ್ 22 ಜನ ಪಾಲಿಕೇತರ ಸದಸ್ಯರನ್ನು ಹೊಂದಿದೆ. ಜೆಡಿಎಸ್ 7 ಜನ ಹಾಗೂ ಪಕ್ಷೇತರ ವಿಧಾನಪರಿಷತ್ ಸದಸ್ಯ (ಡಿಯು ಮಲ್ಲಿಕಾರ್ಜುನ) ಹಾಗೂ ರಾಜ್ಯಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್ ಮತ್ತು ವಿಜಯ್ ಮಲ್ಯ ಅವರು ಮತದಾನದ ಹಕ್ಕು ಹೊಂದಿದ್ದಾರೆ.

ಮ್ಯಾಜಿಕ್ ನಂಬರ್ ಮುಟ್ಟುವ ಸಂಖ್ಯೆ ಸಿಕ್ಕಿಲ್ಲ

ಮ್ಯಾಜಿಕ್ ನಂಬರ್ ಮುಟ್ಟುವ ಸಂಖ್ಯೆ ಸಿಕ್ಕಿಲ್ಲ

ಬಿಜೆಪಿ ಶಾಸಕರು, ಸಂಸದರು ಹಾಗೂ ಪಾಲಿಕೇತರ ಸದಸ್ಯರು ಸೇರಿ ಈಗ 126 ಮತಗಳನ್ನು ಹೊಂದಿದೆ. ಕಾಂಗ್ರೆಸ್ 101 ಹಾಗೂ ಜೆಡಿಎಸ್ 21. ಇದರ ಜೊತೆಗೆ 8 ಜನ ಪಕ್ಷೇತರರು,, 3 ಜನ ರಾಜ್ಯಸಭಾ ಸದಸ್ಯರು, 2 ಎಂ ಎಲ್ಸಿಗಳು ಸೇರಿದಂತೆ 12 ಜನ ಆಗುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಯಾವ ಪಕ್ಷಕ್ಕೂ ಮ್ಯಾಜಿಕ್ ನಂಬರ್ ಮುಟ್ಟುವ ಸಂಖ್ಯೆ ಸಿಕ್ಕಿಲ್ಲ.

ಸಂಖ್ಯೆ ಕೊರತೆ ಎದುರಾಗಿದೆ

ಸಂಖ್ಯೆ ಕೊರತೆ ಎದುರಾಗಿದೆ

ಬಿಜೆಪಿಗೆ 5 ಹಾಗೂ ಕಾಂಗ್ರೆಸ್ಸಿಗೆ 30 ಸಂಖ್ಯೆ ಕೊರತೆ ಎದುರಾಗಿದೆ. ಈ ನಡುವೆ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಗೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಸಮ್ಮತಿಸಿರುವುದು ಮತ್ತೊಮ್ಮೆ ಲೆಕ್ಕಾಚಾರ ಎಣಿಕೆಗೆ ನಾಂದಿ ಹಾಡಿದೆ.

ಜನರು ನೀಡಿದ ತೀರ್ಪಿನಂತೆ ನಮಗೆ ಬಿಬಿಎಂಪಿ ಮೇಯರ್ ಸ್ಥಾನ ಪಡೆಯುವ ಎಲ್ಲಾ ಹಕ್ಕಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಮೇಯರ್ ಚುನಾವಣೆ ಸೆ.09ರ ನಂತರ ನಡೆಯುವ ಸಾಧ್ಯತೆ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+