ನಮ್ಮ ಬೆಂಗಳೂರು; ಒಂದೇ App ನಲ್ಲಿ ಎಲ್ಲಾ ಮಾಹಿತಿ
ಬೆಂಗಳೂರು, ಡಿಸೆಂಬರ್ 26 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 'ನಮ್ಮ ಬೆಂಗಳೂರು' ಎಂಬ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ. ನಾಗರಿಕರ ಕುಂದು ಕೊರತೆಗಳನ್ನು ಬಗೆಹರಿಸಲು ಬಿಬಿಎಂಪಿಯ ಏಕೀಕೃತ ವ್ಯವಸ್ಥೆ ಇದಾಗಿದೆ.
'ನಮ್ಮ ಬೆಂಗಳೂರು' ಅಪ್ಲಿಕೇಶನ್‌ನಲ್ಲಿ ವಿವಿಧ ಏಜೆನ್ಸಿಗಳಲ್ಲಿ ಸಿಗುವ ಕಾಮನ್ ಅಪ್ಲಿಕೇಶನ್ ಲಭ್ಯವಾಗಲಿವೆ. ಜನವರಿ 1ರಿಂದ ಜನರಿಗೆ ಈ ಮೊಬೈಲ್ ಅಪ್ಲಿಕೇಶನ್ ಲಭ್ಯವಿದೆ. ಅಪ್ಲಿಕೇಶನ್ ಡೌನ್ ಲೋಡ್ ಮಾಡುವ ಮೂಲಕ ಜನರು ಒಂದೇ ವ್ಯವಸ್ಥೆಯಲ್ಲಿ ಎಲ್ಲಾ ಮಾಹಿತಿ ಪಡೆಯಬಹುದು.
ಬಿಬಿಎಂಪಿ, ಬಿಡಿಎ, ಬೆಸ್ಕಾಂ, ಬಿಎಂಆರ್‌ಸಿಎಲ್, ಬಿಟಿಪಿ ಮತ್ತು ಇತರೆ ಏಜೆನ್ಸಿಗಳಿಂದ ಮಾಹಿತಿ, ಸಹಾಯವನ್ನು ಒಂದೇ ವ್ಯವಸ್ಥೆಯಲ್ಲಿ ಪಡೆಯಲು ಈ ಅಪ್ಲಿಕೇಶನ್ ಸಹಾಯಕವಾಗಿದೆ. ಇದು ಜನಸ್ನೇಹಿಯಾಗಿದ್ದು, ಸರ್ಕಾರಿ ಸೇವೆಗಳ ಮಾಹಿತಿಯನ್ನು ಪಡೆಯಬಹುದು.

ಎಲ್ಲಾ ಏಜೆನ್ಸಿಗಳ ಸೇವಾ ಮಾಹಿತಿಗಳು ಅಪ್ಲಿಕೇಶನ್‌ನಲ್ಲಿ ಲಭ್ಯವಿದ್ದು, 'ನಮ್ಮ ಬೆಂಗಳೂರು' ಅಪ್ಲಿಕೇಶನ್‌ನಲ್ಲಿ ಕೆಳಗೆ ಸೂಚಿಸಿದ ಬಿಬಿಎಂಪಿಯ ಎಲ್ಲಾ ಸೇವೆಗಳನ್ನು ಪಡೆಯಬಹುದಾಗಿದೆ.
* ಸಾಮಾನ್ಯ ಮಾಹಿತಿಗಳಾದ ನಾಗರಿಕರ ಅರ್ಜಿಗಳು, ಕ್ರಮಗಳು, ವಾರ್ಡ್ ಮಾಹಿತಿ ಮತ್ತು ಸಿಬ್ಬಂದಿಗಳ ವಿವರ, ಪಾಲಿಕೆ ಸದಸ್ಯರ ಮಾಹಿತಿ.
* ಸಹಾಯ ಕುಂದುಕೊರತೆಗಳು (ಪರಿಷ್ಕರಿಸಿದ ಆವೃತ್ತಿ)
* ಆಸ್ತಿ ತೆರಿಗೆ.
* ಆನ್ ಲೈನ್ ಅರ್ಜಿಗಳಾದ ಮ್ಯುಟೇಶನ್, ಹೊಸ ಖಾತೆ ನೊಂದಣಿ ಮತ್ತು ಡೆಲಿವರಿ ಟ್ರ್ಯಾಕಿಂಗ್.
* ವ್ಯಾಪಾರ ಪರವಾನಗಿ.
* ಬಿಬಿಎಂಪಿ-ಸ್ವಂತ ಅಂಗಡಿ/ಮಾರುಕಟ್ಟೆ ಬಾಡಿಗೆ.
* ಸುದ್ದಿಗಳು, ಅಧಿಸೂಚನೆಗಳು ಮತ್ತು ಜಾಗೃತಿ ಮಾಹಿತಿ.
* ಹತ್ತಿರದ ಸಾರ್ವಜನಿಕ ಶೌಚಾಲಯ, ಪೇಮೆಂಟ್ ಕಿಯಾಸ್ಕ್ ಗಳು/ಕೌಂಟರ್ ಗಳು, ಕಸ ಸಂಗ್ರಹಣೆ ಸ್ಥಳ, ಆಸ್ಪತ್ರೆಗಳು, ಶಾಲೆಗಳನ್ನು ಜಿಪಿಎಸ್ ಮೂಲಕ ಗುರುತಿಸಬಹುದು.
* ಸಲಹೆ ಪೆಟ್ಟಿಗೆಗಳು/ಪ್ರತಿಕ್ರಿಯೆಗಳು.
* ಮುಂಬರಲಿರುವ ಬಿಬಿಎಂಪಿ ಕಾರ್ಯಕ್ರಮಗಳು.
* ಚಿತಾಗಾರಗಳ ಮಾಹಿತಿ ಮತ್ತು ಕಾರ್ಯ ನಿರ್ವಹಣಾ ಸ್ಥಿತಿ.
* ಹುಟ್ಟಿದ ದಿನ, ಸಾವಿನ ದಿನದ ಸರ್ಟಿಫಿಕೇಟ್ ಗೆ ಬಿಬಿಎಂಪಿ ಮೂಲಕ ಅರ್ಜಿ ಸಲ್ಲಿಸುವ ಮಾಹಿತಿ.
* ಮರಗಳ ಕಡಿತಕ್ಕೆ ಮಾರ್ಗಸೂಚಿ, ನಿಯಮಗಳು ಮತ್ತು ದೂರುಗಳು.
* ಬೃಹತ್ ಕಸ ಸಂಗ್ರಹಣೆ ನಿರ್ವಹಣೆ.
* ಬಿಬಿಎಂಪಿ ಯಿಂದ ನಡೆಸಲ್ಪಡುವ ಆಸ್ಪತ್ರೆ ಘಟಕಗಳಲ್ಲಿ ಓಪಿಡಿ ಅಪಾಯಿಂಟ್ ಮೆಂಟ್.
* ಸ್ವಯಂ ಸೇವಾ ನೊಂದಣಿ.
* ಯೋಜಿತ ಸಾರ್ವಜನಿಕ ಯೋಜನೆಗಳ ಮಾಹಿತಿ.
* BWSSB, BDA, BMRDA, BESCOM, BMRCL, BTP ಇಲಾಖಾ ಸೇವೆಗಳ ಲಿಂಕ್ ಗಳು ಮತ್ತು ಸರ್ಕಾರಿ ಇಲಾಖೆಗಳ ಲಿಂಕ್ ಗಳು.
* ಬ್ಲಾಗ್ ಗಳು/ಫೋರಂಗಳು
* ತುರ್ತು ಸೇವೆಗಳು ಮತ್ತು ಅದರ ಕಾರ್ಯಗಳನ್ನು ಅರಿಯುವ ಮಾಹಿತಿಗಳು.












Click it and Unblock the Notifications