E Khata: ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: 'ಜನಸೇವಕ' ಬುಕ್ ಮಾಡಿ ಮನೆಯಲ್ಲೇ ಇ-ಖಾತಾ ಪಡೆಯಿರಿ! ಹೇಗೆ?

ಬೆಂಗಳೂರು, ಜೂನ್ 02: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಆಸ್ತಿ ದಾಖಲೆಗಳನ್ನು ನಿರ್ವಹಿಸುವುದು ಸವಾಲಾಗಿದೆ. ಈ ಕಾರಣದಿಂದ ಆಸ್ತಿ ದಾಖಲೆ ವಿತರಣೆಗಾಗಿ ಸರಳಿಕರಣಗೊಳಿಸಿದೆ. ಡಿಜಟಲೀಕರಣ ಮಾಡಿದ ಖಾತಾಗಳ ವಿತರಣೆಗೆ ಇ-ಖಾತಾ ಯೋಜನೆ ಜಾರಿಗೊಳಿಸಿದೆ. ಇದರಿಂದ ತೆರಿಗೆ ಪಾವತಿ ವ್ಯವಸ್ಥೆಯು ಸುಧಾರಣೆ ಆದಂತಾಗಿದೆ. ಈ ಉಪಕ್ರಮದಲ್ಲಿ ಆಸ್ತಿ ಮಾಲೀಕರಿಗೆ ಇ-ಖಾತಾ ಪಡೆಯಲು ಒಂದಷ್ಟು ಸರಳ ಉಪಾಯವನ್ನು ನೀಡಿದೆ. ನೀವು ಮನೆಯಲ್ಲಿಯೇ ಕೂತುಕೊಂಡು ಕರೆ ಮಾಡಿ ಬಿಬಿಎಂಪಿಯ ಇ-ಖಾತಾ ಪಡೆದುಕೊಳ್ಳಬಹುದಾಗಿದೆ.

ಹೌದು ಈ ಹೊಸ ಸೌಲಭ್ಯಗಳಿಂದ ಬೆಂಗಳೂರು ಆಸ್ತಿ ಮಾಲೀಕರು ಜನಸೇವಕರಿಂದ ಕರೆ ಮಾಡಿ ಕೇವಲ ಮೂರೇ ದಿನದಲ್ಲಿ ಇ-ಖಾತಾ ಪಡೆಯಬಹುದಾಗಿದೆ. ಅದಕ್ಕಾಗಿ ದೂರವಾಣಿ ಸಂಖ್ಯೆಯನ್ನು ಸಹ ನೀಡಲಾಗಿದೆ. ಅದರಿಂದ ನೀವು ಇ-ಖಾತಾ ಪಡೆಯಬಹುದು ಎಂದು ಬಿಬಿಎಂಪಿ ತಿಳಿಸಿದೆ.

BBMP Issuing E-Khata from Janasevaka Facility in 2-3 Days

ಆಸ್ತಿ ಮಾಲೀಕರು 080 49203888ಗೆ ಕರೆ ಮಾಡಬಹುದು. ಇಲ್ಲವೇ http://janasevaka.karnataka.gov.in/ ಮೂಲಕ ಸಂಪರ್ಕಿಸಿದರೆ ನಿಮ್ಮ ಮನೆಗೆ ಬಂದು ಇ-ಖಾತೆ ಅರ್ಜಿ ಸಲ್ಲಿಸುತ್ತಾರೆ. ನೀವು ಅಂತಿಮ ಇ-ಖಾತೆಯನ್ನು 2-3 ದಿನಗಳಲ್ಲಿ ಪಡೆಯಬಹುದು. ಅದಕ್ಕಾಗಿ ನೀವು ಯಾವುದೇ ಬಿಬಿಎಂಪಿ ಕಚೇರಿಗೆ ಭೇಟಿ ನೀಡಬೇಡಿ, ಯಾವ ಅಧಿಕಾರಿಗಳಿಗೂ ಕರೆ ಮಾಡುವ ಅಗತ್ಯವಿರುವುದಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ತಿಳಿಸಿದರು.

ಜನಸೇವಕನ ಶುಲ್ಕ ಎಷ್ಟು?

* ಇ-ಖಾತೆ ಅರ್ಜಿಗೆ 45 ರೂಪಾಯಿ

* ಪ್ರತಿ ಪುಟ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಲು ರೂಪಾಯಿ 05

* ನಿಮ್ಮ ಮನೆ ಬಾಗಿಲಿಗೆ ಜನಸೇವಕ ಬಂದು ಸೇವೆ ನೀಡಲು 115 ರೂಪಾಯಿ ನೀಡಬೇಕು.

ಜನಸೇವಕಕ್ಕೆ ಏನೆಲ್ಲ ದಾಖಲೆಗಳು ಬೇಕು

* ಆಸ್ತಿ ಮಾಲೀಕರ ಆಧಾರ್ ಕಾರ್ಡ್/ಸಂಖ್ಯೆ

* ಆಸ್ತಿ ತೆರಿಗೆ ಎಸ್‌.ಎ.ಎಸ್‌ ಅರ್ಜಿ ಸಂಖ್ಯೆ

* ಸ್ವತ್ತಿನ ಕ್ರಮ/ನೋಂದಾಯಿತ ಪತ್ರ ಸಂಖ್ಯೆ (ಕಾವೇರಿ ತಂತ್ರಾಂಶದಿಂದ ವಿದ್ಯುನ್ಮಾನವಾಗಿ ಪಡೆದುಕೊಳ್ಳುತ್ತೇವೆ)

* ಬೆಸ್ಕಾಂ ಖಾತೆ ಸಂಖ್ಯೆ (ಖಾಲಿ ನಿವೇಶನಗಳಿಗೆ ಅಗತ್ಯವಿಲ್ಲ)

* ಸ್ವತ್ತಿನ ಛಾಯಾಚಿತ್ರ

ಸಾಂಪ್ರದಾಯಿಕ ಖಾತೆ ಪ್ರಮಾಣ ಪತ್ರವನ್ನು ಎಲೆಕ್ಟ್ರಾನಿಕ್ ಆವೃತ್ತಿಯಲ್ಲಿ ನೀಡಲಾಗುತ್ತದೆ. ಈ ಸಂಬಂಧ ಆಸ್ತಿ ಮಾಲೀಕರು ಬೆಂಗಳೂರು ಒನ್, ಬಿಬಿಎಂಪಿ ಕಚೇರಿಗಳಿಗೆ ಅಲೆದಾಡಬೇಕಿತ್ತು. ಆನ್‌ಲೈನ್ ಮೂಲಕ ಅರ್ಜಿ ಹಾಕಿ ಕಾಯಬೇಕಿತ್ತು. ಸುಮಾರು 12 ಲಕ್ಷಕ್ಕೂ ಹೆಚ್ಚು ಸಾಂಪ್ರದಾಯಿಕ ಖಾತೆಗಳನ್ನು ಡಿಜಿಟಲೀಕರಣಗೊಳಿಸಲಾಗಿತ್ತು. ಆ ಪೈಕಿ ಸುಮಾರು ಎರಡು ಲಕ್ಷ ಖಾತೆಗಳನ್ನು ವಿತರಣೆ ಮಾಡಲಾಗುತ್ತಿದೆ. ಜನಸೇವಕದಂತಹ ಹೊಸ ಹೊಸ ವ್ಯವಸ್ಥೆ ಮೂಲಕ ಪರಿಣಾಮಕಾರಿಯಾಗಿ ಎಲ್ಲ ಇ-ಖಾತೆ ನೀಡಲು ಬಿಬಿಎಂಪಿ ಪ್ಲಾನ್ ಮಾಡಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+