ಬೆಂಗಳೂರಿನ ಈ ರಸ್ತೆಗೆ ರೆಬಲ್ ಸ್ಟಾರ್ ಅಂಬರೀಶ್ ಹೆಸರು
Recommended Video

ಈ ರಸ್ತೆಗೆ ಅಂಬರೀಶ್ ಹೆಸರಿಡಲು ಬಿಬಿಎಂಪಿ ಚಿಂತನೆ | Oneindia Kannada
ಬೆಂಗಳೂರು, ಡಿಸೆಂಬರ್ 21: ಬೆಂಗಳೂರಿನ ಬಿಡಿಎ ಬಡಾವಣೆಯೊಂದಕ್ಕೆ ರೆಬಲ್ ಸ್ಟಾರ್ ಅಂಬರೀಶ್ ಹೆಸರಿಡಲು ಬಿಬಿಎಂಪಿ ಚಿಂತನೆ ನಡೆಸಿದೆ.
ಇತ್ತೀಚೆಗೆ ನಿಧನರಾದ ಕನ್ನಡ ಚಿತ್ರನಟ, ಮಾಜಿ ಸಚಿವ ರೆಬಲ್ ಸ್ಟಾರ್ ಅಂಬರೀಶ್ ಅವರ ಸ್ಮರಣಾರ್ಥವಾಗಿ ಬಡಾವಣೆಗೆ ಅಂಬರೀಶ್ ಹೆಸರಿಡಲು ನಿರ್ಧರಿಸಲಾಗಿದೆ.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿರುವ ಬಿಡಿಎ ಬಡಾವಣೆಗೆ ಅಂಬರೀಶ್ ಹೆಸರಿಡಲಾಗುತ್ತಿದೆ, ಚಾಲುಕ್ಯ ವೃತ್ತದಿಂದ ಮೌರ್ಯ ಸರ್ಕಲ್ ವರೆಗಿನ ವಾರ್ಡ್ 197ರ ವಸಂತಪುರ ಬಡಾವಣೆಯ ಪಿಕಾಸಿಪುರ ಬಿಡಿಎ ಬಡಾವಣೆಗೆ ಅಂಬರೀಶ್ ಹೆಸರಲ್ಲಿ ನಾಮಕರಣ ಮಾಡಲು ಚಿಂತನೆ ನಡೆಸಲಾಗಿದೆ, ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.












Click it and Unblock the Notifications